ಬಿಗ್ ಬಾಸ್ ಸೀಜನ್ 12ರ ಖ್ಯಾತಿಯ ರಾಘು ಅವರಿಗೆ ತವರೂರಲ್ಲಿ ಗೌರವ ಸನ್ಮಾನ

ಬಿಗ್ ಬಾಸ್ ಸೀಜನ್ 12ರ ಖ್ಯಾತಿಯ ರಾಘು ಅವರಿಗೆ ತವರೂರಲ್ಲಿ ಗೌರವ ಸನ್ಮಾನ Raghu of Bigg Boss Season 12 fame honored in his hometown

              ರಾಣೇಬೆನ್ನೂರು 01:  ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಾಂತಿ ಮತ್ತು ತಾಳ್ಮೆ ಇವೆರಡೂ ಬಹಳ ಮುಖ್ಯವಾಗಿಬೇಕಾಗಿದೆ ಎಂದು ಬಿಗ್ ಬಾಸ್ ಸೀಜನ್ 12 ರ ಖ್ಯಾತಿಯ, ಉತ್ತರ ಕರ್ನಾಟಕದ ಯುವ ಪ್ರತಿಭೆ ರಾಘವೇಂದ್ರ ಹೊಂಡದಕೇರಿ ಹೇಳಿದರು. ಅವರು ಉತ್ತರ ಕರ್ನಾಟಕ ಹೆಬ್ಬಾಗಿಲು ರಾಣೆಬೆನ್ನೂರು ನಗರಕ್ಕೆ ಪ್ರಥಮವಾಗಿ ಆಗಮಿಸಿದ ಅವರನ್ನು ನಗರದ ಅಭಿಮಾನಿ ಬಳಗವು,  ವಿಹಾನ್ ಸಭಾಭವನದಲ್ಲಿ ಆಯೋಜಿಸಿದ್ದ, ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಿರುತೆರೆ ಹಿರಿತೆರೆ ಅದೊಂದು ವೈಭವ ಕಲಾವಿದರಿಗೆ ದೊಡ್ಡ ವೇದಿಕೆ,ಅಂತಹ ವೇದಿಕೆ ಸಿಕ್ಕಿರುವುದು ನಮ್ಮಲ್ಲಿರುವ ಪ್ರತಿಭೆಗೆ ಸಿಕ್ಕಿರುವ ದೊಡ್ಡ ಅವಕಾಶವೆಂದು ಭಾವಿಸಬೇಕಾಗಿದೆ ಎಂದರು. ಬಿಗ್ ಬಾಸ್ ಬಹುದೊಡ್ಡ ರಿಯಾಲಿಟಿ ಶೋ, ಪ್ರತಿಭೆ ಪ್ರೋತ್ಸಾಹಿಸಲು ಕಲಾಭಿಮಾನಿಗಳು ಬೇಕು ತಮಗೂ ಸಹ ಬಿಗ್ ಬಾಸ್  ಅವಕಾಶ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯದ ಫಲವೆಂದು ಭಾವಿಸಿದ್ದೇನೆ. ಅಭಿಮಾನಿಗಳ ಪ್ರೀತಿ ವಿಶ್ವಾಸವೇ ಯಾವುದೇ ಕಲಾವಿದನಿಗೆ ಶ್ರೀ ರಕ್ಷೆ ಯಾಗಿರಬೇಕು ಎಂದು ವಿನಮ್ರವಾಗಿ ನುಡಿದರು.      ಹತ್ತಾರು ಚಲನಚಿತ್ರದಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿದ್ದರೂ, ಅಲ್ಲಿ ಮತ್ತಷ್ಟು ಅವಕಾಶ ಪಡೆಯಲು ಸಾಕಷ್ಟು ಪ್ರಯಾಸ ಪಡಬೇಕಾಗುತ್ತದೆ ಎಂದರು.  

               ಆದರೂ ಬಿಗ್ ಬಾಸ್ ತಮಗೆ ಅತ್ಯಂತ ದೊಡ್ಡ ಅವಕಾಶ ಕಲ್ಪಿಸಿ, ತಾವು ಒಬ್ಬ ಕಲಾವಿದರ ಸಾಲಿನಲ್ಲಿ ನಿಲ್ಲುವ ನಟನೆಂಬುದನ್ನು ತೋರಿಸಿಕೊಟ್ಟಿದೆ ತಮಗೆ ಸಂತೋಷವಾಗಿದೆ ಎಂದರು.    ರಾಜಧಾನಿ ಕಲಾ  ಕ್ಷೇತ್ರವು, ಉತ್ತರ ಕರ್ನಾಟಕದವರಿಗೆ ವಿಫುಲವಾಗಿ ಅವಕಾಶ ಕೊಡುತಿದೆಯೇ? ಮಾಧ್ಯಮದ ಪ್ರಶ್ನೆಗೆ ಸ್ಪಷ್ಟೀಕರಿಸಿದ ರಾಘವೇಂದ್ರ( ರಘು ), ಕಲಾ ಕ್ಷೇತ್ರದಲ್ಲಿ ಅವಕಾಶವಿದೆ, ಕೊಡುತ್ತಾರೆ!. ಗಾಡ್ ಫಾದರ್ಗಳ ಅಗತ್ಯವಿದೆ. ತಮಗೂ ಸಹ ಗಾಡ್ ಫಾದರ್ ಮತ್ತು ಅಭಿಮಾನಿಗಳ ಆಶೀರ್ವಾದವಿದೆ ಎಂದರು. ರಾಘವೇಂದ್ರ ಹೊಂಡದಕೇರಿ- ಶ್ರೀಮತಿ ಗ್ರೀಷ್ಮ  ಅವರಿಗೆ ನಗರ ಮತ್ತು ತಾಲೂಕಿನ 15 ಹೆಚ್ಚು ವಿವಿಧ ಕನ್ನಡಪರ ಸಂಘಟನೆಗಳು, ರೈತರು, ರೈತಪರ ಸಂಘಟನೆಗಳ ಮುಖಂಡರು, ಅತ್ಯಂತ ಅಭಿಮಾನದಿಂದ ಭವ್ಯವಾಗಿ ಸ್ವಾಗತ ನೀಡಿ,   ಶಾಲು- ಫಲ-ಪುಷ್ಪ ಮಾಲೆ, ಸ್ಮರಣಿಕೆ ಇತ್ತು, ಅದ್ದೂರಿ ಸನ್ಮಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗಣ್ಯರಾದ ಪ್ರಕಾಶ್ ಬುರಡಿಕಟ್ಟಿ, ಪ್ರಮೋದ ನೆಲವಾಗಲ, ಸಂತೋಷ ತೇವರಿ,  ರವೀಂದ್ರಗೌಡ ಪಾಟೀಲ್, ಚಂದ್ರಣ್ಣ ಬೇಡರ, ಹನುಮಂತಪ್ಪ ಕಬ್ಬಾರ, ನಿತ್ಯಾನಂದ ಕುಂದಾಪುರ, ಹನುಮಂತಗೌಡ, ನಾಗರಾಜ ನೆಲವಾಗಲ, ಪಾಟೀಲ, ಕೊಟ್ರೇಶಪ್ಪ ಎಮ್ಮಿ, ಪರಸಪ್ಪ, ಶಿವಕುಮಾರ ಜಾದವ, ಕೊಟ್ರೇಶ ಕುಂದಾಪುರ, ರಾಜು ಅಂಗಡಿ, ಶೈಲಮ್ಮ ಹರನಗಿರಿ, ಲಲಿತಾ ಲಮಾಣಿ, ಪ್ರೇಮ್ ನೆಲವಾಗಲ, ಚಂದ್ರಶೇಖರ ನಾಯಕ, ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.