ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಆರಂಭ
Rabakavi-Mahishwadagi bridge construction begins
ರಬಕವಿ-ಬನಹಟ್ಟಿ 16: ಇಲ್ಲಿನ ಜನತೆಯ ದಶಕಗಳ ಬೇಡಿಕೆಯಾಗಿದ್ದ ಕುಂಟುತ್ತ, ತೆವಳುತ್ತ ಸಾಗಿದ್ದ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಬುಧವಾರದಿಂದ ಪ್ರಾರಂಭವಾಗಿದ್ದು, ನಾಗರಿಕರಲ್ಲಿ ಹರ್ಷ ಮುಡಿಸಿದೆ. ಸೇತುವೆ ಮಧ್ಯದಲ್ಲಿನ ಪಿಲ್ಲರ್ ಅಳವಡಿಸಲು ತೊಡಕಾಗಿದ್ದ ಮಹಿಷವಾಡಗಿ ಭಾಗದಲ್ಲಿನ ರೈತರ ಜಮೀನಗಳಿಗೆ ಅಳವಡಿಸಿದ್ದ ಪೈಪ್‌ಲೈನ್‌ಗಳನ್ನು ಸ್ಥಳಾಂತರಿಸುವ ಕಾರ್ಯ ಆರಂಭಗೊಂಡಿದ್ದು, ನಿವೃತ್ತ ಅಭಿಯಂತರ, ಮಹಿಷವಾಡಗಿ ಧುರೀಣ ಅರುಣ ಯಲಗುದ್ರಿ ನೇತೃತ್ವದಲ್ಲಿ ಎಲ್ಲ ರೈತರ ಜಮೀನಿಗಳ ಪೈಪ್‌ಲೈನ್ ಸ್ಥಳಾಂತರಗೊಳ್ಳುತ್ತಿವೆ.
ಡಿಸೆಂಬರ್ ತಿಂಗಳಲ್ಲಿ ಡಾ.ರವಿ ಜಮಖಂಡಿ ನೇತೃತ್ವದ ಉಪವಾಸ ನಿರಶನಕಾರರ ಬೇಡಿಕೆಗೆ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಶೀಘ್ರ ಕಾಮಗಾರಿ ಆರಂಭಿಸಿ, ಮುಕ್ತಾಯಗೊಳಿಸುವ ಭರವಸೆ ನೀಡಿ ನಿರಶನಕ್ಕೆ ಅಂತ್ಯ ಹಾಡಿದ್ದರು. ಬಹುದಿನಗಳ ಬಳಿಕ ದಶಕಗಳ ಬೇಡಿಕೆಗೆ ಸದ್ಯ ನದಿಯಲ್ಲಿನ ನೀರು ಖಾಲಿಯಾದ ಕಾರಣ ಕಾಮಗಾರಿ ಆರಂಭಿಸಲಾಗಿದ್ದು, ಸೇತುವೆ ಮಧ್ಯಭಾಗದ ಪಿಲ್ಲರ್‌ಗಳನ್ನು ಅಳವಡಿಸಲು ಗುತ್ತಿಗೆದಾರ ಮುಂದಾಗಿದ್ದಾರೆ. ಕಾಮಗಾರಿ ಆರಂಭಿಸಿದ್ದಕ್ಕೆ ಇಲ್ಲಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 