ವಿಕಲಚೇತನರಿಗೆ ಪ್ರಾತಿನಿಧ್ಯತೆಯನ್ನು ನೀಡಲು ಆರ್‌ಪಿಡಿ ಟಾಕ್ಸ್ ಪೋರ್ಸ್ ಸಮತಿಯಿಂದ ಮನವಿ
RPD Talks Powers Association appeals for representation for people with disabilities
ವಿಜಯಪುರ 05 : ಕರ್ನಾಟಕ ಸರ್ಕಾರದ 2026-27 ನೇ ಸಾಲಿನ ಬಜೇಟ್ ಅಧಿವೇಶನದಲ್ಲಿ ವಿಕಲಚೇತನರಿಗೆ ರಾಜಕೀಯ ಪ್ರಾತಿನಿಧ್ಯತೆಯನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯದ 224 ಶಾಸಕರಿಗೆ ಪೋಸ್ಟ್ ಮೂಲಕ ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಕ್ಸ್ ಪೋರ್ಸ್ ಸಮತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಬಿಯಾಬೇಗಂ ಮರ್ತೂರ ಮಾತನಾಡಿ, ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಪಿಡಿ ಟಾಸ್ಕ್ ಪೋರ್ಸ ಸಮಿತಿಯು ಒಂದು ಸಂಘಟನೆಯಾಗಿದ್ದು, ಕಳೆದ 8 ವರ್ಷಗಳಿಂದ ವಿಕಲಚೇತನರ ಹಕ್ಕುಗಳು ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ತನ್ನ ಕಾರ್ಯನಿರ್ವಹಿಸುತ್ತಾ ಬಂದಿದ್ದು, ವಿಕಲಚೇತನರ ಕಾಯ್ದೆಗಳು ಸುಮಾರು 30 ವರ್ಷಗಳಿಂದ ಜಾರಿಯಲ್ಲಿ ಇದ್ದರೂ ಕೂಡಾ ವಿಕಲಚೇತನರು ಈಗಲೂ ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತೀದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 50 ಲಕ್ಷ ವಿಕಲಚೇತನರ ಕುಟುಂಬಗಳ ಮತದಾರರಿದ್ದು, ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ವಿಕಲಚೇತನರ ಧ್ವನಿ ಕೇಳಿಸುವಲ್ಲಿ ಅವರಿಗೆ ಕೇವಲ ಸವಲತ್ತುಗಳನ್ನು ನೀಡುವ ಬದಲು, ನಿರ್ಧಾರ ಮಾಡುವ ಸ್ಥಾನಮಾನಗಳ ಅವಕಾಶ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಖಜಾಂಚಿ ಮಹೇಶ ಮುಧೋಳ ಮಾತನಾಡಿ, ವಿಕಲಚೇತನರು ಎದುರಿಸುವ ಸಮಸ್ಯೆಗಳು ಮತ್ತು ಸಾಮಾಜಿಕ ಸವಾಲುಗಳು ಒಬ್ಬ ವಿಕಲಚೇತನನಿಗೆ ಮಾತ್ರವೇ ತಿಳಿಯಲು ಸಾಧ್ಯ. ಹೀಗಾಗಿ ಅವರಿಗೆ ರಾಜಕೀಯ ಪ್ರಾತಿನಿಧ್ಯತೆ ಸಿಕ್ಕರೇ ವಿಕಲಚೇತನರು ಬರೀ ಫಲಾನುಭವಿಗಳಾಗಿ ಉಳಿಯದೆ, ನಿರ್ಧಾರ ಕೈಗೊಳ್ಳಲು ಸಶಕ್ತರಾಗುತ್ತಾರೆ. ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಆಶಯದಂತೆ ರಾಜಕೀಯ ಭಾಗವಹಿಸುವಂತೆ ಸಮಾನತೆ ತರಬೇಕಿದೆ. ಸ್ಥಳೀಯ ಮಟ್ಟದ ಯೋಜನೆಗಳನ್ನು ರೂಪಿಸುವಲ್ಲಿ ವಿಕಲಚೇತನ ಜನಪ್ರತಿನಿಧಿಗಳು ಇದ್ದರೆ, ಅವರ ಸಮಸ್ಯೆಗಳಿಗೆ ತಕ್ಕಂತೆ ಯೋಜನೆ ರೂಪಿಸುವುದರ ಜೊತೆಗೆ ವಿಕಲಚೇತನ ಸ್ನೇಹಿ ನಗರ ಗ್ರಾಮಗಳ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಪಾಲುದಾರಿಕೆ ಹೊಂದುವುದು ಸುಲಭವಾಗಲಿದೆ.
ಈ ಹಿನ್ನೇಲೆಯಲ್ಲಿ ವಿಕಲಚೇತನರು ಕೆಳ ಹಂತದಿಂದ ರಾಜಕೀಯ ಪ್ರಾತಿನಿಧ್ಯತೆಯನ್ನು ಪಡೆಯಲು ಶಾಸನಾತ್ಮಕ ಬೆಂಬಲ ನೀಡುವ ದೃಷ್ಟಿಯಿಂದ ಎಲ್ಲಾ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಚತ್ತಿಸಗಡ ರಾಜ್ಯಗಳಲ್ಲಿ ವಿಕಲಚೇತನ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ಮೂಲಕ ವಿಕಲಚೇತನರಿಗೆ ರಾಜಕೀಯ ಪ್ರಾತಿನಿಧ್ಯತೆಯನ್ನು ನೀಡಲಾಗಿದೆ. ಇದೇ ಮಾದರಿಯಲ್ಲಿ ವಿಕಲಚೇತನರನ್ನು ನಾಮನಿರ್ದೇಶನ ಮಾಡುವ ಮೂಲಕ ರಾಜಕೀಯ ಪ್ರಾತಿನಿಧ್ಯತೆಯನ್ನು ನೀಡಲು 2026-27 ನೇ ಸಾಲಿನ ಬಜೇಟ್ ಅಧಿವೇಶನದಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಾವಿತ್ರಿ ಮೋರೆ, ಶಶಿಕಲಾ ಸೋನಾರ, ರಮೇಶ ಮೈದರಗಿ, ಉಷಾ ಮೇಲಿಕರ್, ಕುಸುಮಾ ಪಾಟೀಲ, ಸರಿತಾ ಬೋಸಲೆ, ಸಂಗೀತಾ ಪಾಟೀಲ, ಶೈಲಜಾ ಮಾಡಗ್ಯಾಳ, ಆಸ್ಮಾ ಸೌದಾಗರ, ಇಸ್ಮಾಯಿಲ್ ಫರಿದ್, ಸುಗರಾಬಿ ಮಕಾಂದಾರ, ನವೀನ ಪ್ಯಾಟಿ, ರಾಜು ಹುನ್ನೂರ, ವಿಆರ್‌ಡಬ್ಲ್ಯೂ ಹಣಮಂತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 