ಗ್ರಾಮೀಣ ನೂತನ ಬಿ ಇ ಓ ರಾಗಿ ಆರ್ ಕೆ ಆಂಜನೇಯ ಅಧಿಕಾರ ಸ್ವೀಕಾರ
RK Anjaneya takes charge as new BEO of Rural
ಗ್ರಾಮೀಣ ನೂತನ ಬಿ ಇ ಓ ರಾಗಿ ಆರ್ ಕೆ ಆಂಜನೇಯ ಅಧಿಕಾರ ಸ್ವೀಕಾರ
ಬೆಳಗಾವಿ 2: ಗ್ರಾಮೀಣ ವಲಯಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್ ಕೆ ಆಂಜನೇಯ ರವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಳಾಗಿದ್ದ ಎಸ್ ಪಿ ದಾಸಪ್ಪನವರ ರವರು ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ತೆರವಾದ ಸ್ಥಾನಕ್ಕೆ ಆರ್ ಕೆ ಆಂಜನೇಯ ರವರು ವರ್ಗಾವಣೆ ಹೊಂದಿರುವರು.
ಅವರು ಖಾನಾಪುರ ಬಿ ಆರ್ ಸಿ ಸಮನ್ವಯಾಧಿಕಾರಿಯಾಗಿ. ವಿಜಯಪುರದ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಈ ಹಿಂದೆ ಬೆಳಗಾವಿ ಡೈಟ್ ಸಂಸ್ಥೆಯಲ್ಲಿ ಉಪ ಪ್ರಾಚಾರ್ಯರಾಗಿ ಸೇವೆಸಲ್ಲಿಸುತ್ತಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಆರ್ ಕೆ ಆಂಜನೇಯ ರವರನ್ನು ವಿವಿಧ ಶಿಕ್ಷಕರ ಸಂಘಟನೆಗಳ ಪರವಾಗಿ ಸನ್ಮಾನಿಸಿ ಸ್ವಾಗತಿಸಲಾಯಿತು.
ಶಿಕ್ಷಕರ ಗೆಳೆಯ ಬಳಗದ ವತಿಯಿಂದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಫಕೀರ್ಪ ಸುಣಗಾರ ರವರು ಅವರನ್ನು ಆತ್ಮೀಯವಾಗಿ ಸನ್ಮಾನ ಮಾಡಿದರು ಅವರು ಶಿಕ್ಷಕರ ಸಮಸ್ಯೆ ಗಳಿಗೆ ಸ್ಪಂದಿಸಿ ಶೈಕ್ಷಣಿಕ ಸುಧಾರಣೆ ಯಾಗಲೆಂದು ಶುಭ ಕೋರಿದರು. ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ವರ ಸಹಕಾರದಿಂದ ಉತ್ತಮ ಶೈಕ್ಷಣಿಕ ಕಾರ್ಯ ಮಾಡುವದಾಗಿ ಹೇಳಿ ಸರ್ವರ ಸಹಕಾರ ಬಯಸಿದರು
ವಿಜಯನಗರ ಮರಾಠಿ ಶಾಲೆಯ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ. ಬೆಳಗಾವಿ ನಗರದ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಕುಮಾರಸ್ವಾಮಿ ಚರಂತಿ ಮಠ. ರುಕ್ಮಿಣಿ ನಗರ ಕನ್ನಡ ಶಾಲೆಯ ಶಿಕ್ಷಕರಾದ ಆರ್ ಪಿ ಗೋಶ್ಯಾನಟ್ಟಿ. ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಸಕ್ರೆನವರ, ಐ ಇ ಆರ್ ಟಿ ಶಬ್ಬೀರ ಖುದ್ದನವರ, ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ರುದ್ರೇಶ ಬಡಿಗೇರ ರವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 