ಆರ್‌. ಪಿ. ಡಿ. ಸಂಸ್ಥಾಪನಾ ದಿನಾಚರಣೆ

ಆರ್‌. ಪಿ. ಡಿ. ಸಂಸ್ಥಾಪನಾ ದಿನಾಚರಣೆ   R. P. D. Foundation Day Celebration

ಆರ್‌. ಪಿ. ಡಿ. ಸಂಸ್ಥಾಪನಾ ದಿನಾಚರಣೆ   

ಬೆಳಗಾವಿ  06: ಜ್ಞಾನ ಕ್ಷೇತ್ರದಲ್ಲಿ ಅಪಾರ ಪ್ರೀತಿ ಮತ್ತು ಭಾರತೀಯ ಜ್ಞಾನಪರಂಪರೆಗಳ ಮೇಲೆ ಅದಮ್ಯ ಅಭಿಮಾನ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಿಗೆ ಇತ್ತು. ಇವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ವೈವಸ್ವಿಕ ಚೈತನ್ಯವನ್ನು ತುಂಬಲು ಶಿಕ್ಷಣ ಕ್ಷೇತ್ರದಿಂದ ಅವರು ಕಾರ್ಯ ಮಾಡಿದರು. ಮನುಷ್ಯನ ಶೋಧ, ಪ್ರಕೃತಿ-ಪರಿಸರ ಶೋಧ, ಅಸ್ತಿತ್ವದ ಶೋಧ, ಯಶಸ್ಸಿನ ಶೋಧ, ಅರಿವಿನ ಶೋಧ,ಆನಂದದ ಶೋಧ ಮಾಡುವುದೇ ಶಿಕ್ಷಣ. ಇಂಥ ಶಿಕ್ಷಣದಿಂದ ವಿದ್ಯಾರ್ಥಿಯಲ್ಲಿ ಚಾರಿತ್ರ್ಯ ನಿರ್ಮಾಣ ಮಾಡಿ ಜೀವನ ವಿಕಾಸಗೊಳಿಸುವುದೇ ಶಿಕ್ಷಕನ ಕಾರ್ಯ ಜವಾಬ್ದಾರಿಯಾಗಬೇಕು ಎಂದು ಖ್ಯಾತ ಶಿಕ್ಷಣ ತಜ್ಞ, ಸಮಾಜ ಪರಿವರ್ತಕರಾದ ಶ್ರೀ  ಅಭಯ ದೇವಿದಾಸ್ ಭಂಡಾರಿಯವರು ನುಡಿದರು. ಆರ್‌. ಪಿ..ಡಿ. ಮಹಾವಿದ್ಯಾಲಯದಲ್ಲಿ ಇಂದು ದಿನಾಂಕ - 06, ಅಗಸ್ಟ್‌ 2025 ರಂದು ನಡೆದ ಸೌಥ್ ಕೊಂಕಣ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.  

           ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಚೇರಮನ್ನರಾದ ಡಾ.ಕಿರಣ ಠಾಕೂರರವರು - ಸ್ವಾತಂತ್ರ್ಯದ ಪೂರ್ವದಲ್ಲಿ ಸರ್ವರಿಗೂ ಶಿಕ್ಷಣ ಇರಲಿಲ್ಲ.ಇದನ್ನರಿತು ಈ ಸಂಸ್ಥೆಯ ಸಂಸ್ಥಾಪಕರು ರಾಣಿ ಪಾರ್ವತಿ ದೇವಿಯವರ ಸರಕಾರ ಮತ್ತು ಆಶ್ರಯದಲ್ಲಿ ಶಾಲೆ, ಕಾಲೇಜುಗಳನ್ನು ತೆರೆದರು. ಇದಕ್ಕೆ ಬೆಳಗಾವಿಯಲ್ಲಿ ಜಮಖಂಡಿಯ ಪಟವರ್ಧನ ಮತ್ತು ಸಾಂಗ್ಲಿಯ ಪಟವರ್ಧನ ರಾಜರು ತಮ್ಮ ಅರಮನೆ ಮತ್ತು 36 ಎಕರೆ ಭೂದಾನವನ್ನು ನೀಡುವುದರ ಮೂಲಕ ಸಹಕಾರ ನೀಡಿದರು. 1945 ರಿಂದ ಇಲ್ಲಿಯವರೆಗೆ 80 ವರ್ಷಗಳ ಕಾಲ ಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗಣಣಿ?ಯ ಕಾರ್ಯವನ್ನು ಮಾಡಿತು. ಈ ಸಂಸ್ಥೆಯಲ್ಲಿ ಪಾಟ್ಕರ, ಅಜಗಾಂವಕರ, ಇಂದಿರಾ ಸಂತ, ಪು.ಲ. ದೇಶಪಾಂಡೆ, ವಿಂದಾ ಕರಂದೀಕರ ಮೊದಲಾದ ಪ್ರಸಿದ್ಧ ಶಿಕ್ಷಕರು ಮಾಡಿದ ಸೇವೆ ಮಹತ್ತರವಾದುದು. ಶಿಕ್ಷಣವು ಜೀವನ ಶಿಕ್ಷಣವಾಗಿ ಭಾರತವನ್ನು ಎಲ್ಲ ರೀತಿಯಲ್ಲಿ ಬಲವಾನ ಗೊಳಿಸಲು, ಬಲಿಷ್ಠಗೊಳಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಕರೆ ನೀಡಿದರು.   ಗೌರವಾನ್ವಿತ ಕಾರ್ಯದರ್ಶಿ ಶ್ರೀಮತಿ ಲತಾ ಕಿತ್ತೂರ ಅವರು ಎಸ್‌.ಕೆ.ಇ. ಸಂಸ್ಥೆಯ  ಶೈಕ್ಷಣಿಕ ಸಾಧನೆಯನ್ನು ವರದಿಯ ಮೂಲಕ ನಿರೂಪಿಸಿದರು. ಪ್ರಾಂಶುಪಾಲ ಡಾ. ಅಭಯ ಪಾಟೀಲ ಅವರು ಸ್ವಾಗತ ಭಾಷಣ ಮಾಡಿದರು.  ಪ್ರೊ. ಅಕ್ಷಯ ಹಿರೇಮಠ ಪ್ರಾರ್ಥನೆ ಸಲ್ಲಿಸಿದರು. ಡಾ. ಶರ್ಮಿಳಾ ಸಂಭಾಜಿ ಮತ್ತು ಸಾಯಿಶೀಲಾ ಜಡೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಎಲ್‌. ಅಜಗಾಂವಕರ ಮತ್ತು ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.