ಯರಗಟ್ಟಿ-ರೈನಾಪೂರ ಸುತ್ತಮುತ್ತಲು ಪಂಪ್‌ಸೆಟ್ ಕೇಬಲ್ ಕಳವು
Pumpset cable stolen around Yaragati-Rainapur
ಯರಗಟ್ಟಿ 25: ‘ಹೊಲಗಳಲ್ಲಿ ಕೇಬಲ್ ಕಳ್ಳತನ ಮಾಡಿದ್ದರಿಂದ ನಿನ್ನೆಯಷ್ಟೇ ಸಾಲ ಮಾಡಿ ಮತ್ತೆ ಕೇಬಲ್ ಅಳವಡಿಸಿದ್ದೆ. ಈಗ ಮತ್ತೆ ಕಳ್ಳತನ ಮಾಡಿದ್ದಾರೆ. ಮತ್ತೊಮ್ಮೆ ಹಾಕಲು ದುಡ್ಡು ಎಲ್ಲಿಂದ ತರಲಿ’ ಎಂದು ರೈತರು ಅಳಲುತೋಡಿಕೊಂಡರು.
ಯರಗಟ್ಟಿ ಹಾಗೂ ರೈನಾಪೂರ ಗ್ರಾಮಗಳ 10ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳ ಕೇಬಲ್ ಮಂಗಳವಾರ ರಾತ್ರಿ ಕಳ್ಳತನವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕೇಬಲ್ ಜತೆ ನೀರು ಮೇಲೆತ್ತಲು ಬಿಟ್ಟಿರುವ ಕೇಬಲ್ ಸಹ ಹಾಳು ಮಾಡಿದ್ದಾರೆ. ಒಂದೇ ರಾತ್ರಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೇಬಲ್ ಕಳ್ಳತನವಾಗಿದೆ. ಕಳೆದ ಮೂರು ತಿಂಗಳಿನಲ್ಲಿ ಮೂರು ಬಾರಿ ಕಳ್ಳತನವಾಗಿದೆ. ಪ್ರತಿ ವರ್ಷ ನಾಲ್ಕೈದು ಬಾರಿ ಕಳ್ಳತನವಾಗುತ್ತಿದೆ ಎಂದು ರೈತರು ನೋವು ತೋಡಿಕೊಂಡರು. ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಕಳವು ತಪ್ಪಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಸಂತೋಷ ಹಾದಿಮನಿ, ಸುರೇಶ ಬಂಟನೂರ, ಗೋಪಾಲ ಕಡೇಮನಿ, ನಿಖಿಲ ಪಾಟೀಲ, ಮುದ್ದಪ್ಪ ಪೂಜೇರ, ಫಕ್ರುಸಾಬ ನದಾಫ, ಹರೀಶ ಹಪಳಿ, ನಜೀರ ನದಾಫ, ಪ್ರವೀಣ ಬೆಣ್ಣಿ, ಮಂಜುನಾಥ ಬಾವಿಹಾಳ, ಪಾಂಡು ಕಳ್ಳಿಗುದ್ದಿ, ರಾಜು ಕಾರೆಪ್ಪನ್ನವ, ಪ್ರಕಾಶ ಮಾಳಗಿ, ಜಗದೀಶ ಕಳ್ಳಿಗುದ್ದಿ, ಸೋಮಲಿಂಗ ನಂಜನ್ನವರ, ವಾಸು ಹುರಕನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 