ಸಹಕಾರಿ ಸಕ್ಕರೆ ಕಾರ್ಖಾನೆಯ 2025-26ನೇ ಕೇನ ಕ್ಯಾರಿಯರ ಹಾಗೂ ತೂಕ ಯಂತ್ರಗಳ ಪೂಜಾ ಸಮಾರಂಭ
Puja ceremony of the 2025-26th cane carriers and weighing machines of the Cooperative Sugar Factory
ಸಹಕಾರಿ ಸಕ್ಕರೆ ಕಾರ್ಖಾನೆಯ 2025-26ನೇ ಕೇನ ಕ್ಯಾರಿಯರ ಹಾಗೂ ತೂಕ ಯಂತ್ರಗಳ ಪೂಜಾ ಸಮಾರಂಭ
ಮಾಂಜರಿ 15: ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಚಿಕ್ಕೋಡಿ ಇವರು ದಿ. 15ರಂದು ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ ಹಾಗೂ ಸಂಚಾಲಕ ಮಂಡಳಿಯವರು ತೂಕ ಮಾಡುವ ಯಂತ್ರ ಮತ್ತು ಕೇನ ಕ್ಯಾರಿಯರಕ್ಕೆ ಪೂಜೆ ಸಲ್ಲಿಸಿ ಕೇನ ಕ್ಯಾರಿಯರದಲ್ಲಿ ಕಬ್ಬು ಹಾಕುವ ಮೂಲಕ ಸನ್ 2025-26ನೇ ಸಾಲಿನ ಕಬ್ಬು ಅರೆಯುವ ಹಂಗಾಮಿನ ಪೂಜಾ ಸಮಾರಂಭವನ್ನು ನೆರವೇರಿಸಿದರು. ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆಯವರು ಮಾತನಾಡಿ ಕಾರ್ಖಾನೆಯ ರೂವಾರಿಗಳು, ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಮತ್ತು ಅಮಿತ ಕೋರೆಯವರ ಮುಂದಾಳತ್ವದಲ್ಲಿ ಹಾಗೂ ಆಡಳಿತ ಮಂಡಳಿಯ ಸೂಕ್ತ ನಿರ್ಣಯದಿಂದ ಕಾರ್ಖಾನೆಯು ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ. ಕಾರ್ಖಾನೆಯ ಕಾರ್ಮಿಕ/ಸಿಬ್ಬಂದಿಯವರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬು ನುರಿಸಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ಮೂಲಕ ಆಡಳಿತ ಮಂಡಳಿಯು ಹೊಂದಿದ ಕಬ್ಬು ನುರಿಸುವ ಗುರಿ ಮುಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು. ರೈತ ಸದಸ್ಯರು ತಮ್ಮೆಲ್ಲ ಕಬ್ಬನ್ನು ತಮ್ಮದೇ ಆದ ಈ ಕಾರ್ಖಾನೆಗೆ ಕಳುಹಿಸಿ ಗುರಿ ಮುಟ್ಟಲು ಸಹಕರಿಸಲು ವಿನಂತಿಸಿದರು. ಕ್ಯಾರಿಯರ ಪೂಜೆಯನ್ನು ರೈತ ಸದಸ್ಯರಾದ ಮಲಕಾರಿ ಯಡ್ರಾಂವೆ ದಂಪತಿಗಳಿಂದ ಮಾಡಲಾಯಿತು. ಈ ವೇಳೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ತಾತ್ಯಾಸಾಹೇಬ ಕಾಟೆ, ಸಂಚಾಲಕರುಗಳಾದ ಅಜೀತ ದೇಸಾಯಿ, ಭರತೇಶ ಬನವಣೆ, ಪರಸಗೌಡಾ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ಭೀಮಗೌಡಾ ಪಾಟೀಲ, ಮಹಾವೀರ ಕಾತ್ರಾಳೆ ಮತ್ತು ಅಣ್ಣಾಸಾಹೇಬ ಇಂಗಳೆ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆರ್.ಬಿ.ಖಾಂಡಗಾವೆ ಮತ್ತು ಕಾರ್ಖಾನೆಯ ರೈತ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 