ಕುಣಿಕೇರಿ ಸರಕಾರಿ ಶಾಲೆಯನ್ನು ಮುಚ್ಚುವ ಹುನ್ನಾರ ಖಂಡಿಸಿ ಸಾರ್ವಜನಿಕರ ಪ್ರತಿಭಟನಾ ಸಭೆ
Public protest meeting condemning the plan to close the Kunikeri government school
ಕೊಪ್ಪಳ 27: ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯ ಆಕ್ರೋಶ ಗುರುವಾರ ಸಂಜೆ ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದ ಸರಕಾರಿ ಶಾಲೆಯನ್ನು ಮುಚ್ಚುವುದನ್ನ ಖಂಡಿಸಿ ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಸಮಿತಿ ನೇತೃತ್ವದಲ್ಲಿ ಮಾರುತೇಶ್ವರ ಗುಡಿ ಹತ್ತಿರ ಊರಿನ ಸಾರ್ವಜನಿಕರ ಪ್ರತಿಭಟನಾ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ ಕೊಪ್ಪಳ ಇಂದು ಭೀಕರ ಪರಿಸ್ಥಿಯಲ್ಲಿದೆ. ಒಂದ್ ಕಡೆ ಬೇಡದೆ ಇರುವ ಮಾಲಿನ್ಯ ಕಾರಕ ಕಾರ್ಖಾನೆಗಳನ್ನು ತೊಲಗಿಸುವ ಹೋರಾಟ ನಡೆಯುತ್ತಿದೆ. ಇಂತಹ ಬಿಕ್ಕಟ್ಟಿನಲ್ಲಿ ರಾಜ್ಯ ಸರಕಾರ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ನಮ್ಮ ಶಾಸಕರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆಯ ಕಾಮಗಾರಿ ನಡೆಸುತ್ತಿದ್ದಾರೆ. ಕೊಪ್ಪಳದಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಸುತ್ತಲು ಬರುವ ಅನೇಕ ಶಾಲೆಗಳನ್ನು ಮುಚ್ಚುವ ಈ ಬಡವರ ವಿರೋಧಿ ಯೋಜನೆಯನ್ನು ವಿರೋಧಿಸಿ ಕೊಪ್ಪಳದ ಜನರಾದ ನಾವು ಒಗ್ಗಟ್ಟಿನಿಂದ ಈ ಹೋರಾಟವನ್ನು ಬೆಳೆಸುವ ಅವಶ್ಯಕತೆಯಿದೆ.
ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯೊಬ್ಬರು ಮಾತನಾಡಿ ಬ್ರಿಟಿಷರು ನಮ್ಮ ದೇಶದ ಜನರನ್ನ ಅಜ್ಞಾನದಲ್ಲಿರಿಸಿ ದಬ್ಬಾಳಿಕೆಯಿಂದ ಆಳ್ವಿಕೆ ಮಾಡಿದಂತೆ, ಕೆಪಿಎಸ್ ಮಾಗ್ನೆಟ್ ಶಾಲೆ ತೆರದು ನಮ್ಮ ಶಾಲೆಯನ್ನು ಮುಚ್ಚಿ ಬ್ರಿಟಿಷರಂತೆ ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಇದು ನಡೆಯೋದಿಲ್ಲ ನಾವೆಲ್ಲ ಎಚ್ಚರವಾಗಿದ್ದೇವೆ, ನಮ್ಮ ಶಾಲೆ ನಮ್ಮ ಹಕ್ಕು, ನಮ್ಮೂರಲ್ಲೇ ನಾವು ನಮ್ಮ ಮಕ್ಕಳನ್ನ ಓಡಿಸೋದು ಎಂದ್ರು ಆಕ್ರೋಶ ವ್ಯಕ್ತಪಡಿಸಿದರು ವಿದ್ಯಾರ್ಥಿ ಸಂಘಟನೆ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾರ್ಚ್ 14 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಪ್ರತಿರೋಧ ಸಮಾವೇಶದಲ್ಲಿ ಕೊಪ್ಪಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನಾಕಾರರಾದ ಪ್ರದ್ದೀಪ್ ಸದಸ್ಯರಾದ ಸುಭಾನ್, ಕಾರ್ಯದರ್ಶಿ ಶಾರದಾ ಗಡ್ಡಿ, ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ಚೆನ್ನವೀರಯ್ಯ ದಮ್ಮೂರು, ಉಪಾಧ್ಯಕ್ಷರಾದ - ಮಾರಿತೇಶ್ವರ ಕುರುಬರ ಸದಸ್ಯರುಗಳಾದ ರಾಮಣ್ಣ ಬೆಳಿವಿನಾಳ, ಗವಿಸಿದ್ದಪ್ಪ ಹಲಗಿ, ಶರಣಪ್ಪ ಮಡಿವಾಳ, ಯಮನೂರ್ಪ ಹಳ್ಳಿಕೇರಿ, ಗವಿಸಿದಪ್ಪ ಕುರುಬರ ಸಂಜೀವಪ್ಪ ಚೌದ್ರಿ, ಪವಿತ್ರ ಬೆಳವಿನಾಳ್, ರುದ್ರಮ್ಮ, ಲಲಿತವ್ವ ಗಡಿಗಿ, ನಿರ್ಮಲ ಹಿರೇಮಠ, ನಿರ್ಮಲ ಸೋಂಪುರ, ಜ್ಯೋತಿ ಮುತ್ತಾಳ್ ಸೇರಿದಂತೆ ಮುಂತಾದ ಊರಿನ ಹಿರಿಯರು, ಪೋಷಕರು, ಮಹಿಳೆಯರು ಹಾಗೂ ರೈತ ಮುಖಂಡರು ಸೇರಿ 400ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 