ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜನಾಕ್ರೋಶ ಪ್ರತಿಭಟನೆ

 ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜನಾಕ್ರೋಶ ಪ್ರತಿಭಟನೆ  Public outcry demanding state government to implement internal reservation for Scheduled Castes

 ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜನಾಕ್ರೋಶ ಪ್ರತಿಭಟನೆ  

ಹಾವೇರಿ 1: ಇಲ್ಲಿನ ದೇವಗಿರಿಯ ಜಿಲ್ಲಾಡಳಿತ ಕಛೇರಿಯ ಮುಂದೆ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸರ್ವೋಚ್ಛ ನ್ಯಾಯಾಲಯದ ತೀರ​‍್ಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಜನಾಕ್ರೋಶ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 

      ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ    ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಒಳ ಮೀಸಲಾತಿಯ ಬೇಡಿಕೆ ಈಡೇರಿಕೆಗೆ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಶೀಘ್ರವಾಗಿ ಒಳಮೀಸಲಾತಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

   ಮುಖಂಡರಾದ ಡಿ ಎಸ್ ಮಾಳಗಿ ಮಾತನಾಡಿ   ಈ ಅಸಮಾನತೆಯನ್ನು ಸರಿಪಡಿಸಲು, ದಿನಾಂಕ 1-08-2024 ರ ಸರ್ವೋಚ್ಛ ನ್ಯಾಯಾಲಯದ ತೀರ​‍್ು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ.ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ.ನಮಗೆ ಆಗಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲಾ ನಮ್ಮ ಬೇಡಿಕೆ ಈಡೇರಿಕೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. 

     ಮುಖಂಡರಾದ ಪರಮೇಶಪ್ಪ ಮೇಲಗಮನಿ ಮಾತನಾಡಿ  ಸುಪ್ರೀಂಕೋರ್ಟ್‌ ತೀರ​‍್ಿನ ತರುವಾಯ ಹರಿಯಾಣ,ತೆಲಂಗಾಣ,ಆಂಧ್ರ​‍್ರದೇಶ ಸರ್ಕಾರಗಳು ತುರ್ತು ನಿಗಾವಹಿಸಿ ತಮ್ಮ ರಾಜ್ಯಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಒದಗಿಸಿವೆ. ನಾಗಮೋಹನ್ ದಾಸ್ ಆಯೋಗಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ಆರು ತಿಂಗಳಾದರು ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ.ಸರ್ಕಾರ ಕುಂಟು ನೆಪಹೇಳದೇ ಶೀಘ್ರವಾಗಿ ಒಳಮೀಸಲಾತಿ ಮಾಡಲು ಮುಂದಾಗಬೇಕು ಎಂದರು. 

          ರಾಜ್ಯ ಸಂಘಟನಾ ಸಂಚಾಲಕರಾದ  ಉಡಚಪ್ಪ ಮಾಳಗಿ ಹಾಗೂ ಜಿಲ್ಲಾಧ್ಯಕ್ಷರಾದ ನಾಗರಾಜ ಮಾಳಗಿ ಮಾತನಾಡಿ ಸರ್ಕಾರ  ಅಗಸ್ಟ್‌-15 ಒಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ,ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು,ಕಾರ್ಮಿಕರು,ವಕೀಲರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

         ಮುಖಂಡರಾದ ಹೊನ್ನಪ್ಪ ತಗಡಿನಮನಿ,ನೀಲಕಂಠಪ್ಪ ಕುಸನೂರ,ಪ್ರಕಾಶ ಪೂಜಾರ,ಅಶೋಕ ಮರೆಣ್ಣನವರ,ತಿರಕಪ್ಪ ಚಿಕ್ಕೇರಿ,ಬಿ ಆರ್ ಪುಟ್ಟಣ್ಣನವರ,ಸುಭಾಷ ಬೆಂಗಳೂರು,ಸಂತೋಷ ಗುಡ್ಡಪ್ಪನವರ,ಕರಿಯಪ್ಪ ಕಟ್ಟಿಮನಿ,ಮಲ್ಲೇಶ ಕುನ್ನೂರ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.     

           ಈ ಸಂದರ್ಭದಲ್ಲಿ ಮುಖಂಡರಾದ ಮಾಲತೇಶ ಯಲ್ಲಾಪುರ,ಜಗದೀಶ ಹರಿಜನ, ಸುರೇಶ ಆಶಾದಿ,ಕೃಷ್ಣ ಕರ್ಜಗಿ,ಮಲ್ಲೇಶ ಕಡಕೋಳ,ಮಹೇಶ ಹರಿಜನ,ಸುಭಾಸ ಮಾಳಗಿ,ಸುನೀಲ ಬೇಟಗೇರಿ,ರಾಜು ಹರಿಜನ,ಶ್ರೀಮತಿ ರೇಣುಕಾ ಬಡಕ್ಕಣ್ಣನವರ, ಹನಮಂತಪ್ಪ ಸಿ.ಡಿ,ಸುಮಂಗಲಾ ಕೃಷ್ಣಾಪುರ,ಮಾರುತಿ ಬಣಕಾರ,ಶ್ರೀಮತಿ ಗೀತಾ ಒಳಗುಂಡಿ,ಶ್ರೀಮತಿ ಗೀತಾ ಕಡೇಮನಿ,ಶ್ರೀಮತಿ ನೇತ್ರಾ ದೊಡ್ಡಮನಿ,ಶ್ರೀಮತಿ ಗೀತಾ ಹರಿಜನ,ನಾಗರಾಜ ಬಣಕಾರ,ಮಹೇಶಪ್ಪ ಹರಿಜನ,ಶ್ರೀಮತಿ ಯಲ್ಲಮ್ಮ ಕೊಪ್ಪದ,ನಾಗರಾಜ ಹಾವನೂರ,ಶೇಕಣ್ಣ ದಂಡಿನ,ಮಾಲತೇಶ ಹಲಬಗೊಂಡ,ಗುಡ್ಡಪ್ಪ ಬಣಕಾರ ಸೇರಿದಂತೆ ಜಿಲ್ಲೆಯ ಮುಖಂಡರು,ಯುವಕರು,ಮಹಿಳೆಯರು,ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.