ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಅಭಿನಂದನಾ ಜನ ಜಾಗೃತಿ ಸಮಾವೇಶ : ಶಾಸಕ ಯಾಸೀರ್ ಪಠಾಣ್

	 ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಅಭಿನಂದನಾ ಜನ ಜಾಗೃತಿ ಸಮಾವೇಶ : ಶಾಸಕ ಯಾಸೀರ್ ಪಠಾಣ್ Public awareness rally to celebrate Gandhi Smriti and those who are free from drinking: MLA Yasir P

 ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಅಭಿನಂದನಾ ಜನ ಜಾಗೃತಿ ಸಮಾವೇಶ : ಶಾಸಕ ಯಾಸೀರ್ ಪಠಾಣ್ 

ಶಿಗ್ಗಾಂವಿ 15 :ಸಮಾಜವನ್ನು ಹಾಳುಮಾಡುವ ದುಶ್ಚಟಗಳಿಂದ ದೂರವಿದ್ದು ವ್ಯಸನಮುಕ್ತ ಸಮಾಜ ನಿರ್ಮಾಣದ ಕಡೆಗೆ ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜನ ಜಾಗೃತಿ ವೇದಿಕೆ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕ ಪಣತೊಟ್ಟಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು. 

ಪಟ್ಟಣದ ವಿರಕ್ತಮಠದ ಸಂಗನಬಸವ ಮಂಗಲಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್‌ ಹಾವೇರಿ, ಅಖಿಲ ಕರ್ನಾಟಕ ಜನಜಾಗೃತ ವೇದಿಕೆ ಹಾವೇರಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡ ಗಾಂಧಿ ಸ್ಮೃತಿ ಮತ್ತು ಪಾನ ಮುಕ್ತರ ಅಭಿನಂದನಾ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು. 

ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಗಾಂಧಿ ಸ್ಮತಿ ಮತ್ತು ಪಾನ ಮುಕ್ತರ ಅಭಿನಂದನಾ ಜನ ಜಾಗೃತ ಸಮಾವೇಶದಲ್ಲಿ ಮಹಾತ್ಮ ಗಾಂದೀಜಿ ಭಾವಚಿತ್ರಕ್ಕೆ ಪುಷ್ಪ್ಪನಮನ ಸಲ್ಲಿಸಿ ಮಾತನಾಡಿ, ವ್ಯಸನವೇ ಹಾಗೆ, ಹಾಳು ಮಾಡಲೆಂದೇ ಬರುತ್ತದೆ. ಇದರಿಂದ ಮುಕ್ತವಾಗುವ ಮೂಲಕ ಜೀವನ ನಡೆಸಲು ಸಾವಿರಾರು ಕುಟುಂಬಗಳಿಗೆ ಈ ಸಂಸ್ಥೆ ನೆರವಾಗುತ್ತಿದೆ. 

ಧಾರವಾಡ ಯೋಜನಾಧಿಕಾರಿ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನಪರಿವರ್ತನೆಯಿಂದ ಮಾತ್ರ ಮದ್ಯವ್ಯಸನ ನಿರ್ಮೂಲನೆ ಸಾಧ್ಯ ಎಂದು ತಿಳಿದು ಡಾ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರದಿಂದ ಮದ್ಯ ಸೇವಿಸುವವರನ್ನು ವ್ಯಸನಮುಕ್ತ ಮಾಡಲು ಸಾಧ್ಯವಾಗಿದೆ ಎಂದರು. 

ಜಿಲ್ಲಾ ಜನಜಾಗೃತ ವೇದಿಕೆ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್‌.ಎಫ್‌. ಮಣಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಜಿಲ್ಲಾ ಜನಜಾಗೃತ ವೇದಿಕೆ ನಿರ್ದೇಶಕರಾದ ಶಿವರಾಜ ಪ್ರಭು, ಬಸವರಾಜ ಹೆಸರೂರ, ಬಸವರಾಜ ತಳ್ಳಿಹಳ್ಳಿ, ನಿಂಗಪ್ಪ ನೆಗಳೂರ, ಬಸವರಾಜ ಹುಲ್ಲತ್ತಿ, ಜಿಲ್ಲೆಯ ಕ್ಷೇತ್ರ ಮೇಲ್ವಿಚಾರಕರು, ಪಾನಮುಕ್ತ ಸದಸ್ಯರು, ನವಜೀವನ ಸದಸ್ಯರು ಹಾಗೂ ಸಂಘದ ಸದಸ್ಯರು, ಮೇಲ್ವಿಚಾರಕರು, ಮಹಿಳೆಯರು ಇದ್ದರು. 

ಕಾರ್ಯಕ್ರಮದಲ್ಲಿ ನೂತನ ಜನ ಜಾಗೃತ ವೇದಿಕೆ ಜಿಲ್ಲಾಧ್ಯಕ್ಷರನ್ನಾಗಿ ಬಸವರಾಜ ಹುಲ್ಲತ್ತಿ,ಉಪಾಧ್ಯಕ್ಷರನ್ನಾಗಿ ಭಾರತಿ ಕುಲಕರ್ಣಿ ಅವರನ್ನು ಒಳಗೊಂಡ ಸದಸ್ಯರಿಗೆ ಅಧಿಕಾರವನ್ನು ನೀಡಲಾಯಿತು. ಧರ್ಮಸ್ಥಳ ಸಂಘದ ತಾಲೂಕು ಯೋಜನಾಧಿಕಾರಿ ಶೇಖರ್ ನಾಯಕ ಸ್ವಾಗತಿಸಿದರು.