ರೇಬಿಸ್ ಸಾರ್ವಜನಿಕರಲ್ಲಿ ಇನ್ನೂ ಜಾಗೃತಿ ಮೂಡಿಸುವುದಗತ್ಯ: ಮಗದುಮ್
Public awareness about rabies still needs to be raised: Magadum
ಮಾಂಜರಿ 15: ರೇಬಿಸ್ ಓಷಧದಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಮಾರಕವಾಗಲಿದೆ ಎಂದು ಡಾ.ಎನ್.ಎ. ಮಗದುಮ್ ಹೇಳಿದರು.
ಸೋಮವಾರ ರಂದು ಸಮೀಪದ ಅಂಕಲಿ ಗ್ರಾಮದ ಡಾ.ಎನ್.ಎ.ಮಗ್ಗುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರೇಬಿಸ್ ಓಷಧಿ ಕುರಿತು ಏರಿ್ಡಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇದರ ಬಗ್ಗೆ ಇನ್ನೂ ತಿಳುವಳಿಕೆ ಕಡಿಮೆಯಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಪ್ರಾಣಿಗಳ ಕಡಿತ, ಗೀರುಗಳು ಮತ್ತು ನಂತರ ಏನು ಮಾಡಬೇಕೆಂಬುದರ ಬಗ್ಗೆ ಮಾಹಿತಿ ಪ್ರತಿ ಮನೆಗೂ ತಲುಪಬೇಕು. ಕಾಲೇಜಿನ ಚಟುವಟಿಕೆಗಳ ಮೂಲಕ ನಿರಂತರ ಸಮುದಾಯ-ಆಧಾರಿತ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಡಾ.ದತ್ತಾ ಪಾಟೀಲ ಮತ್ತು ಡಾ.ಗೀರೀಶ್ ಕುಲಕರ್ಣಿ ಅವರು ರೇಬಿಸ್ ತಡೆಗಟ್ಟುವ ಕ್ರಮ, ಕಡಿತದ ನಂತರ ತಕ್ಷಣದ ಆರೈಕೆ, ತುರ್ತು ಚಿಕಿತ್ಸೆ ಮತ್ತು ಲಸಿಕೆಯ ಮಹತ್ವದ ಕುರಿತು ವಿವರವಾದ ಮಾಹಿತಿ ನೀಡಿದರು. ಪ್ರಾಚಾರ್ಯ ಡಾ.ಪ್ರಸನ್ನ ಸವಣೂರ, ಉಪಪ್ರಾಚಾರ್ಯ ಡಾ.ರಾಮಗೊಂಡ ಪಾಟೀಲ ಮಾರ್ಗದರ್ಶನ ಮಾಡಿದರು. ಡಾ.ವಿಶಾಲ್ ಚೌಗುಲೆ, ಯಾಕೂಬ್ ತಾಂಬಟ್, ಸುನಿಲ್ ಜನಾಜ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 