ಪುರಸಭೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು

ಪುರಸಭೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು  Public auction of municipal commercial stores

ಪುರಸಭೆ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು  

ತಾಳಿಕೋಟಿ 14: ಪಟ್ಟಣದ ಪುರಸಭೆ ಅಧೀನದಲ್ಲಿರುವ ಒಟ್ಟು 51 ವಾಣಿಜ್ಯ ಮಳಿಗೆಗಳ ಬಹಿರಂಗ ಲೀಲಾವು ಪ್ರಕ್ರಿಯೆ ಮಂಗಳವಾರ ಪುರಸಭೆ ಸಭಾ ಭವನದಲ್ಲಿ ನಡೆಯಿತು.  

ಸದರಿ ಮಳಿಗೆಗಳಲ್ಲಿ ಸಾಮಾನ್ಯ ವರ್ಗಕ್ಕೆ 37, ಪರಿಶಿಷ್ಟ ಜಾತಿಗೆ 9, ಪರಿಶಿಷ್ಟ ಪಂಗಡಕ್ಕೆ 2 ಹಾಗೂ ವಿಕಲಚೇತನರಿಗೆ 3 ಮಳಿಗೆಗಳು ಇದ್ದವು. ಸರಾಸರಿ ರೂ. 25 ರಿಂದ 30,000 ಮಾಸಿಕ ಬಾಡಿಗೆ ರೂಪದಲ್ಲಿ ಮಳಿಗೆಗಳು ಲೀಲಾವು ಆಗಿವೆ. ಕೆಲವೊಂದು ಅಂಗಡಿಗಳ ಕುರಿತು ಸ್ವಲ್ಪ ಮಟ್ಟದ ಗೊಂದಲ ಏರ​‍್ಪಟಟಿದ್ದರು ಇಡೀ ಲೀಲಾವು ಪ್ರಕ್ರಿಯೆ ಮಾನ್ಯ ಜಿಲ್ಲಾಧಿಕಾರಿಗಳ ಪರಿಷ್ಕೃತ ದರ ಅನುಮೋದನೆ ಆದೇಶ ಕ್ರಮ ಸಂಖ್ಯೆ ಜಿನಿಕೊ-5/ ರಂತೆ ವ್ಯವಸ್ಥಿತವಾಗಿ ಜರುಗಿತು. ಪುರಸಭೆ ಸಿಬ್ಬಂದಿ ಇಬ್ರಾಹಿಂ ಮಕಾಂದಾರ ಲೀಲಾವು ಪ್ರಕ್ರಿಯೆಯನ್ನು ಮುಖ್ಯಾಧಿಕಾರಿ ಸಂತೋಷ ಪವಾರ ಹಾಗೂ ಪುರಸಭೆ ಕಾನೂನು ಸಲಹೆಗಾರ ನ್ಯಾಯವಾದಿ ವಿಶ್ವನಾಥ ಮದರ್ಕಲ್ ಅವರ ಮಾರ್ಗದರ್ಶನದಂತೆ ಅತ್ಯುತ್ತಮವಾಗಿ ನಡೆಸಿಕೊಟ್ಟರು.  

ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಜುಬೇದಾ ಹುಸೇನಬಾಷಾ ಜಮಾದಾರ, ಸದಸ್ಯರಾದ ಮುತ್ತಪ್ಪ ಚಮಲಾಪೂರ, ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಅಣ್ಣಪ್ಪ ಜಗತಾಪ, ನಿಂಗಣ್ಣ ಕುಂಟೋಜಿ, ಮುಸ್ತಫಾ ಚೌಧರಿ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬಿ ಕಟ್ಟಿಮನಿ. ಪುರಸಭೆ ಮಾಜಿ ಸದಸ್ಯರಾದ ಪ್ರಭುಗೌಡ ಮದರ್ಕಲ್, ಪ್ರಕಾಶ ಹಜೇರಿ ಮಾನಸಿಂಗ್ ಕೊಕಟನೂರ, ಸುರೇಶ ಹಜೇರಿ, ಪುರಸಭೆ ಸಿಬ್ಬಂದಿಗಳ ಹಾಗೂ ಬಿಡ್ ದಾರರು ಇದ್ದರು.