ಲೋಕದರ್ಶನ ವರದಿ
ಕಾಗವಾಡ 25: ಗ್ರಾಮದಲ್ಲಿಯ ಶಿರಗುಪ್ಪಿ ಶುಗರ್ ವಕ್ಸರ್್ ಲಿಮಿಟೆಡ್ ಸಕ್ಕರೆ ಕಾಖರ್ಾನೆಯ ಆವರಣದಲ್ಲಿ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರನ ಮಂಡಳಿ, ಬೆಂಗಳೂರು ಇವರು ಆಯೋಜಿಸಿದ ಡಿಸ್ವಲರಿ ಘಟಕ ಪ್ರಾರಂಭಿಸುವ ಪರಿಸರ ಕುರಿತು ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಕೆಲ ರೈತರು ಪರ-ವಿರೋಧ ಮತ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಂದು ಶಿರಗುಪ್ಪಿ ಶುಗರ್ ವಕ್ಸರ್್ ಕಾಖರ್ಾನೆ ಸಭಾ ಭವನದಲ್ಲಿ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರನ ಮಂಡಳಿ, ಬೆಂಗಳೂರುಆಯೋಗ ಇವರು ಹಮ್ಮಿಕೊಂಡ ಸಭೆಯ ಸಭೆಯ ಆಧ್ಯಕ್ಷತೆ ಬೆಳಗಾವಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಬಿ.ಬುದೆಪ್ಪಾಯವರು ವಹಿಸಿದರು.ಕಾಗವಾಡ ತಹಸೀಲ್ದಾರ ಶ್ರೀಮತಿ ಪರಿಮಳಾ ದೇಶಪಾಂಡೆ ಚಚರ್ೆಯಲ್ಲಿ ಪಾಲ್ಗೊಂಡಿದ್ದರು.
ಪ್ರಾದೇಶಿಕ ಮಾಲಿನ್ಯ ಅಧಿಕಾರಿ ಐ.ಎಚ್.ಜಗಧೀಶ ಸ್ವಾಗತಿಸಿ,ಇಲಾಖೆ ಹಮ್ಮಿಕೊಂಡ ಸಭೆಯ ಮಾಹಿತಿ ನೀಡಿದರು.ಶಿರಗುಪ್ಪಿ ಸಕ್ಕರೆ ಕಾಖರ್ಾನೆ ಈಗಾಗಲೇ ಪ್ರತಿದಿನ 4 ಸಾವಿರ ಟನ್ ಕಬ್ಬು ನುರಿಸುವ ಸಾಮಥ್ರ್ಯ ಹೊಂದಿದೆ. ಇದನ್ನು 10 ಸಾವಿರ ಟನ್ವರೆಗೆ ವಿಸ್ತರಿಸುವುದು, ಕಬ್ಬು ನುರಿಸಿ ಬಳಿಕ ಉಳೆದ ಬಗ್ಯಾಸ್ ಬಳಿಸಿ, ಈಗಾಗಲೇ 15 ಮೇಗಾವ್ಯಾಟ್ ಕೋ-ಜನರೇಷಣ ಘಟಕದಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಇದು 10 ಮೇಗಾವ್ಯಾಟ್ವರೆಗೆ ವಿಸ್ತರಿಸುವುದು, 120ಕೆ.ಎಲ್.ಪಿ.ಡಿ ಸಾಮಥ್ರ್ಯದ ಕಾಕಂಬರಿ ಆಧಾರಿತ ಇಥೆನಾಲ್ ಉತ್ಪಾದನೆಗಾಗಿ ಪ್ರಕಲ್ಪ(ತ್ಯಾಜ್ಯ ನೀರು ವಿಲೆವಾರಿ ರಹಿತ) ಸ್ಥಾಪಿಸಲು ಪರಿಸರ ಕುರಿತು ಸಾರ್ವಜನಿಕ ಆಲಿಕೆ ಸಭೆ ಹಮ್ಮಿಕೊಂಡಿದ್ದರು.
ಸಕ್ಕರೆ ಕಾರ್ಖಾನೆ ಡಿಸ್ವಲರಿ ಘಟಕ ಪ್ರಾರಂಭಿಸಲು ರೈತರು ಹಾಗೂ ಜನರ ಆನಿಸಿಕೆ ಆಲಿಸಲು ಸಭೆಯಲ್ಲಿ ಅಪ್ಪರ ಜಿಲ್ಲಾಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ವಿಷಯ ಬಗ್ಗೆ ಚಚರ್ಿಸಲು ಅಹ್ವಾನಿಸಿದಾಗ ಕಾಗವಾಡದ ರೈತ ಮುಖಂಡರಾದನಾತಗೌಡಾ ಪಾಟೀಲ, ರಮೇಶ ಚೌಗುಲೆ, ಸಹದೇವ ಚೌಗುಲೆ, ಕಾಕಾಸಾಹೇಬ ಪಾಟೀಲ, ಕಾಕಾಸಾಹೇಬ ಚೌಗುಲೆ, ಅನೀಲ ಕೋರೆ, ಮತ್ತು ಶಶೀಕಾಂತ ಜೋಶಿ ಸೇರಿದಂತೆ ನೂರಾರು ರೈತರು ವಿರೋಧ ವ್ಯಕ್ತಪಡಿಸಿದರು.
ಇವರು ಜಿಲ್ಲಾಧಿಕಾರಿಗಳಿಗೆ ಕೆಲ ದಾಖಲೆಗಳನ್ನು ನೀಡಿ, ಸಕ್ಕರೆ ಕಾಖರ್ಾನೆ ಪ್ರಾರಂಭವಾಗಿ ಇಂದಿನ ವರೆಗೆ ಕಾಗವಾಡ ಗ್ರಾಮಕ್ಕೆ ಯಾವುದೇ ಸಹಕಾರ ನೀಡಿಲ್ಲಾ. ಇಲ್ಲಿಯ ಯುವಕರನ್ನು ಕಾಖರ್ಾನೆ ಕಾಮರ್ಿಕರಾಗಿ ಮಾಡುವದಾಗಿ ಹೇಳಿದ್ದು, ಅದು ನಡೆದುಕೊಂಡಿಲ್ಲಾ. ರೈತರು ನುರಿಸಿದ ಕಬ್ಬಿಗೆ ಎಫ್.ಆರ್.ಪಿ ಪ್ರಕಾರ ದರ ನೀಡಿಲ್ಲಾ. ಇಲ್ಲಿಯ ಅನೇಕ ಬಾವಿ, ಕೊಳವೆಬಾವಿಗಳ ನೀರು ಕಲುಶಿತಗೊಂಡಿದ್ದು. ಕಾಖರ್ಾನೆಗೆ ಹೆಚ್ಚಿನ ವಿಸ್ತರಣೆ ನೀಡಬಾರದೆಂದು ಹೇಳಿ ವಿರೋಧ ವ್ಯಕ್ತಪಡಿಸಿದರು.
ಅದೇ ರೀತಿ ರೈತ ಮುಖಂಡರಾದ ಗೋಟು ಚೌಗುಲೆ, ಮಹಾದೇವ ಮಾಳಿ, ಜಯೇಂದ್ರ ಮಾಳಿ, ಚಂದು ಪರಿಟ, ಜಾವೇದ ಶೇಖ್, ನೇತಾಜಿ ಕಾಟೆ, ಅನೀಲ ಮಗದುಮ್ಮ, ಮಾರುತಿ ಕನಾಳ, ತಾತ್ಯಂಭಟ್ಟ ಜೋಶಿ, ಅಜೀತ ಕರವ, ಸೇರಿದಂತೆ ಕೆಲ ರೈತರು ಪರ-ವಿರೋಧ ವಿಚಾರ ವ್ಯಕ್ತಪಡಿಸಿದರು.
ಸಕ್ಕರೆ ಕಾಖರ್ಾನೆ 10 ವರ್ಷಗಳ ಹಿಂದೆ ಪ್ರಾರಂಭಿಸದೆ ಹೋಗಿದ್ದರೇ ರೈತರ ಬೆಳೆದ ಕಬ್ಬು ನುರಿಸುವ ವ್ಯವಸ್ಥೆ ಕಾಗವಾಡದಲ್ಲಿ ಇಲ್ಲವಾಗಿತ್ತು. ಇದರಿಂದ ಅನೇಕ ರೈತರಿಗೆ ಸಹಕಾರವಾಗಿದೆ ಎಂದು ಕೆಲ ರೈತರು ಹೇಳಿದ್ದರೂ, ಇನ್ನೂ ಕೆಲ ರೈತರು ಸಕ್ಕರೆ ಕಾಖರ್ಾನೆಯಿಂದ ಮಾಲಿನ್ಯ ಹೆಚ್ಚಿಸಿದೆ. ಸ್ಥಳೀಯ ಜನರಿಗೆ ಸೇವೆ ನೀಡಿಲ್ಲಾ. ಕಾಗವಾಡ ಗ್ರಾಮದ ಅಭಿವೃದ್ಧಿಗೆ ಸಹಕರಿಸಿಲ್ಲಾ ಎಂದು ಹೇಳಿದರು.
ಕೆಲ ರೈತರು ಸಮಸ್ಯೆಗಳಿಗೆ ಸ್ಪಂದಿಸಿ ಮಾಲಿನ್ಯ ಆಗದಂತೆ ನೋಡಿಕೊಂಡು ಸಕಾಲದಲ್ಲಿ ಕಬ್ಬಿಗೆ ಬಿಲ್ಲು ನೀಡಿ ಸಹಕರಿಸಿದರೆ ಕಾಖರ್ಾನೆ ಕೈಗೊಂಡ ವಿಸ್ತರಣ ಮಾಡಬಹುದೆಂದು ಹೇಳಿದರು.
ಸಕ್ಕರೆ ಕಾಖರ್ಾನೆಯ ಆಧ್ಯಕ್ಷರು, ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ ಹಾಗೂ ಕಾಖರ್ಾನೆ ಎಂ.ಡಿ ಡಾ. ರಾಜು ದೊಡನ್ನವರ ಇವರು ಕಾಖರ್ಾನೆ ಸ್ಥಳದಲ್ಲಿ ಡಿಸ್ವಲರಿ ವಿಸ್ತರಣೆ ಕುರಿತು ನೀಡುತ್ತಿರುವ ಆದೇಶ ಪಾಲಿಸಿ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಈ ಮುಂದೆಯೂ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಸಕ್ಕರೆ ಕಾಖರ್ಾನೆಯ ವ್ಯವಸ್ಥಾಪಕರು, ರೈತ ವಿರೋಧಿ ಧೋರಣೆಗಳು ಅವಲಂಭಿಸಿದ್ದು. ಕಾಗವಾಡದಲ್ಲಿ ಕಾಖರ್ಾನೆ ಪ್ರಾರಂಭಿಸಿ ಇಲ್ಲಿಯ ಜನರಿಗೆ ಯಾವುದೇ ಸಹಕಾರ ನೀಡುತ್ತಿಲ್ಲಾ. ಅಶುದ್ಧ ನೀರಿನಿಂದ ಇಲ್ಲಿಯ ಬಾವಿ, ಕೊಳವೆಬಾವಿಗಳಲ್ಲಿ ಬೆರೆತಿದ್ದು, ನೀರು ಕಲುಶಿತಗೊಂಡಿವೆ. ಗ್ರಾಮ ಪಂಚಾಯತಿಗೆ ಅನುದಾನ ನೀಡುವದಾಗಿ ಹೇಳಿದರೂ, ನೀಡುತ್ತಿಲ್ಲಾ. ನಮ್ಮ ಬೇಡಿಕೆಗಾಗಿ ಸುಪ್ರಿಂ ಕೋಟರ್್ ವರೆಗೆ ಹೋಗಲು ಸಿದ್ಧರಿದ್ದೇವೆಯೆಂದು ನಾತಗೌಡಾ ಪಾಟೀಲ ಹೇಳಿದರು.