ಅನುಕಂಪದ ಆಧಾರದಡಿ ಅವಲಂಭಿತರಿಗೆ ಮೇಲ್ವಿಚಾರಕ ಹುದ್ದೆ ನೀಡಿ : ಎಚ್.ಪಿ.ಶಿಕಾರಿರಾಮು
Provide supervisor posts to dependents on compassionate grounds: H.P. Shikariramu
ಕಂಪ್ಲಿ 22: ಪಟ್ಟಣದ ಎಂ.ಡಿ.ಕ್ಯಾಂಪಿನ ಅಲೆಮಾರಿ ಗ್ರಂಥಾಲಯ ಆವರಣದಲ್ಲಿ ಸೋಮವಾರ ನಡೆದ ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘದ ಸಭೆ ನಡೆಯಿತು. ಎಂ.ಡಿ.ಕ್ಯಾಂಪಿನ ಗ್ರಂಥಾಲಯ ಮೇಲ್ವಿಚಾರಕ ಹಾಗೂ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಚ್.ಪಿ.ಶಿಕಾರಿರಾಮು ಅವರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಮೇಲ್ವಿಚಾರಕ ವೇತನ ಜಮೆ ಮಾಡಬೇಕು. ತಿಂಗಳ ವೃತ್ತಪತ್ರಿಕೆಗಳ ಬಿಲ್ಲನ್ನು 400 ರೂ.ಗಳಿಂದ 1000 ರೂ.ಗಳಿಗೇರಿಸಬೇಕು. ಕಂಪ್ಲಿ, ಹೊಸಪೇಟೆ, ಚಿಕ್ಕಮ್ಯಾಗಳಗೇರಿಗಳ ಅಲೆಮಾರಿ/ಕೊಳಚೆ ಗ್ರಂಥಾಲಯಗಳಿಗೆ ನಿವೇಶನ ನೀಡಿ, ಕಟ್ಟಡ ನಿರ್ಮಿಸಿಕೊಡಬೇಕು. ಮೇಲ್ವಿಚಾರಕರು ಮೃತರಾದಲ್ಲಿ ಅನುಕಂಪದ ಆಧಾರದಡಿ ಅವಲಂಭಿತರಿಗೆ ಮೇಲ್ವಿಚಾರಕ ಹುದ್ದೆ ನೀಡಬೇಕು. ಗ್ರಂಥಾಲಯ ಮೇಲ್ವಿಚಾರಕರನ್ನು ಖಾಯಂಗೊಳಿಸುವಂತೆ ಸೇರಿ ನಾನಾ ಬೇಡಿಕೆಗಳ ಕುರಿತು ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಆಯ್ಕೆ: ಬಳ್ಳಾರಿ, ವಿಜಯನಗರ ಜಿಲ್ಲಾ ಮೇಲ್ವಿಚಾರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಅಲ್ಲಿಪುರದ ವಿ.ಹನುಮಪ್ಪ(ಅಧ್ಯಕ್ಷ), ಎಚ್.ಪಿ.ಶಿಕಾರಿರಾಮು(ಗೌರವಾಧ್ಯಕ್ಷ), ಹೊಸಪೇಟೆಯ ಪಕ್ಕೀರ್ಪ ಬಾದಗಿ(ಉಪಾಧ್ಯಕ್ಷ), ಬಳ್ಳಾರಿ ಗುಡಾರನಗರದ ಡಿ.ಸುಂಕಣ್ಣ(ಪ್ರಧಾನ ಕಾರ್ಯದರ್ಶಿ), ಕುರುಗೋಡಿನ ಮಂಗಳಗೌರಿ(ಸಹ ಕಾರ್ಯದರ್ಶಿ), ಚಿಕ್ಕಮ್ಯಾಗಳಗೇರಿಯ ಡಿ.ಪರಶುರಾಮ(ಖಜಾಂಚಿ), ಕಂಪ್ಲಿಯ ಉಮೇಶ, ಸಿರುಗುಪ್ಪದ ವೈ.ದೇವೇಂದ್ರ್ಪ, ಬಳ್ಳಾರಿಯ ಉಮೇಶ(ಸದಸ್ಯರು), ವೈ.ದೇವೇಂದ್ರ್ಪ(ರಾಜ್ಯ ಮೇಲ್ವಿಚಾರಕ ಪ್ರತಿನಿಧಿ)ಆಯ್ಕೆಗೊಂಡರು. ಬಸವನಕುಂಟೆಯ ಉಮೇಶ ಸೇರಿ ಇತರರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 