ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ ಕ್ರಿಮಿನಾಶಕ ನೀಡಿ: ಶ್ರೀಮಂತ ಇಂಡಿ
Provide seeds, fertilizers, pesticides to farmers at discounted rates: Rich Indi
ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ ಕ್ರಿಮಿನಾಶಕ ನೀಡಿ: ಶ್ರೀಮಂತ ಇಂಡಿ
ಇಂಡಿ 15: ಇಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ರೈತರ ಶ್ರೇಯೋಭಿವೃಧ್ಧಿಗೆ ಶ್ರಮಿಸುತ್ತಿದ್ದು, ರೈತಾಪಿ ವರ್ಗಕ್ಕೆ ಅನುಕೂಲ ಮಾಡಿ ಕೊಡುತ್ತಿದೆ. ಬೀಜ-ಗೊಬ್ಬರದ ಜೊತೆಗೆ ಕ್ರಿಮಿನಾಶಕವನ್ನೂ ರೈತರಿಗೆ ರಿಯಾಯಿತಿ ದರದಲ್ಲಿ ನೀಡುವ ಯೋಜನೆ ರೂಪಿಸಿಕೊಳ್ಳಿ ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀಮಂತ ಇಂಡಿ ಸಲಹೆ ನೀಡಿದರು.
ಅವರು ಇತ್ತೀಚೆಗೆ ನಗರದ ಎಪಿಎಂಸಿ ಆವರಣದಲ್ಲಿನ ಇಂಡಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ 71 ನೇ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಂಘ ಮಾರ್ಕೆಟಿಂಗ ವಲಯದಲ್ಲಿ ಇನ್ನಷ್ಟು ಬೆಳೆಯಲು ಅವಕಾಶಗಳಿದ್ದು ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಈ ಬಗ್ಗೆ ಕೂಲಂಖುಶವಾಗಿ ಚರ್ಚಿಸಿ, ನಿರ್ಧಾರ ತೆಗೆದುಕೊಂಡು ಸಂಘವನ್ನು ಇನ್ನಷ್ಟು ಬೆಳೆಸಿ ಎಂದರು.
ಸಂಘದ ಅಧ್ಯಕ್ಷ ಬಿ.ಬಿ. ಗುಡ್ಡದ ಮಾತನಾಡಿ, ನಮ್ಮ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಂಘ ಸದಾ ರೈತಾಪಿ ವರ್ಗದ ಅಭಿವೃಧ್ಧಿಗೆ ಬಧ್ಧವಾಗಿದೆ. ರೈತರಿಗೆ ಖಾಸಗಿ ರಸಗೊಬ್ಬರಗಳ ಅಂಗಡಿ-ಮುಂಗಟ್ಟುಗಳಿಂದ ವಂಚನೆ ಅಥವಾ ಹೆಚ್ಚಿನ ನಷ್ಟವಾಗಬಾರದೆಂಬ ಸದಾಶಯದಿಂದ ರೈತರಿಗೆ ಅಗತ್ಯವಿರುವ ಗೊಬ್ಬರ ಹಾಗೂ ಇನ್ನಿತರ ವಸ್ತುಗಳನ್ನು ಕಡಿಮೆ ದರದಲ್ಲಿ ಸಂಘದಿಂದಲೇ ನೀಡುವ ಕಾರ್ಯ ಮಾಡಲಾಗುತ್ತಿದೆ. ಸಂಘದ ಅಡಿಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಸಹ ತೆರೆದು ರೈತರಿಗೆ ಅನುವು ಮಾಡಲಾಗಿದೆ. ಸಂಘ ಈ ಬಾರಿ 18 ಲಕ್ಷ 33 ಸಾವಿರ ಲಾಭದಲ್ಲಿದ್ದು, ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿದ ತೊಗರಿಗೆ ಅಂದಾಜು 20 ಲಕ್ಷ ರೂಪಾಯಿ ಕಮೀಷನ್ ಬರಬಹುದೆಂದು ನೀರೀಕ್ಷಿಸಲಾಗಿದೆ ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರಿ್ಜ. ಕಾವಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ವರದಿ ವಾಚಿಸಿದರು.ಉಪಾಧ್ಯಕ್ಷ ಅಣ್ಣಾಸಾಬ ಪಾಟೀಲ, ಜಿ.ಪಂ. ಮಾಜಿ ಸದಸ್ಯ ಮಹಾದೇವ ಪೂಜಾರಿ, ನಿವೃತ್ತ ಸಹಾಯಕ ನಿಬಂಧಕ ಎ.ಎಸ್. ಚಂದಾವಾಲೆ, ಕಲ್ಲಪ್ಪ ಘಂಟಿ, ಸುರೇಶ ಜೇವರ್ಗಿ ಪ್ರಭುಗೌಡ ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರಾದ ಗುರುನಾಥ ಮೈತ್ರಿ, ರಾಜೇಂದ್ರ ಪಾಟೀಲ, ಶಿವನಗೌಡ ಪಾಟೀಲ, ಮಲ್ಲಪ್ಪ ಭೋಸಗಿ, ಮಲ್ಲಪ್ಪ ಗುಡ್ಲ, ಬಸವರಾಜ ಲವಗಿ, ಶಾರದಾಬಾಯಿ ನಿಡಗುಂದಿ, ವಿಜು ನಿಡಗುಂದಿ, ರಾಜೇಂದ್ರ ಆಳಂದಿಕರ, ಲಕ್ಷ್ಮಣ ರಾಠೋಡ,
ಕೃಷ್ಣಾ ಕುಲಕರ್ಣಿ ನಿರೂಪಿಸಿ, ವಂದಿಸಿದರು. ಗಂಗಾಧರ ಹೊಸಮನಿ, ಸಂಗಣ್ಣ ಹೊಸಮನಿ, ಶಾಹೀದ ಭಂಡಾರಿ, ಪ್ರದೀಪ ಮಠ, ಅಮೀತ್ ಪೂಜಾರಿ, ಅಂಬಾದಾಸ ಪವಾರ, ಶಿವನಗೌಡ ಪಾಟೀಲ ಉಪಸ್ಥಿತರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 