ತಕ್ಷಣ ರೈತರಿಗೆ ಬೆಳೆ ವಿಮೆ ನೀಡಿ: ಹಣಮಂತರಾಯಗೌಡ ಪಾಟೀಲ
Provide crop insurance to farmers immediately: Finance Minister Rayagouda Patil
ಇಂಡಿ 17 : ರಾಜ್ಯ ಕಾಂಗ್ರೇಸ್ ಸರಕಾರ ನಿಷ್ಕ್ಯವಾಗಿದ್ದು ಬೆಳೆ ಹಾನಿಯಾದ ರೈತರಿಗೆ ವಿಮಾ ಪರಿಹಾರ ಜಮಾ ಮಾಡಿಲ್ಲ, ನರೇಗಾ ಯೋಜನೆಯ ಸದ್ಬಳಕೆಯ ತಿಳಿಯದೇ ಕಾಂಗ್ರೇಸ್ ಸರಕಾರ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಹೇಳಿದರು. ಅವರು ಶನಿವಾರ ನಗರದ ಸಿಂದಗಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಳೆ ವಿಮೆ ತುಂಬಿದ ರೈತರಿಗೆ ಇದುವರೆಗೂ ಪರಿಹಾರ ಮೊತ್ತ ಜಮಾ ಆಗಿಲ್ಲ. ಅಕಾಲಿಕ ಮಳೆಯಿಂದಾಗಿ ಜಿಲ್ಲಾಧ್ಯಂತ ರೈತರ ಎಲ್ಲ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿದ್ದು ಕೂಡಲೆ ವಿಮಾ ಮೊತ್ತ ಜಮಾ ಮಾಡಲು ಸರ್ಕಾರ ಮುಂದಾಗಬೇಕು. ಇಲ್ಲವಾದರೆ 15 ದಿನಗಳ ನಂತರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಈಗಾಗಲೆ ಗುಲಬರ್ಗಾ, ಬೀದರ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಬೆಳೆ ವಿಮಾಮೊತ್ತ ರೈತರ ಖಾತೆಗೆ ಜಮಾ ಮಾಡಲಾಗಿದೆ.
ಆದರೆ ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಒಬ್ಬ ರೈತರಿಗೂ ಪರಿಹಾರ ಮೊತ್ತ ಜಮಾ ಆಗಿಲ್ಲ ಎಂದು ತಿಳಿಸಿದರು. ನರೇಗಾ ಹೆಸರು ಬದಲಾವಣೆ ಮಾಡಿದ್ದಕ್ಕೆ ಕಾಂಗ್ರೇಸ್ ಪಕ್ಷದವರು ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ನರೇಗಾದಲ್ಲಿ ಏನೆಲ್ಲ ಬದಲಾವಣೆ ಆಗಿದೆ ಎಂಬುದರ ಕುರಿತು ಕೂಲಂಕುಶವಾಗಿ ವೀಕ್ಷಿಸಿ ಹೋರಾಟ ಮಾಡಿ, ಏಕೆಂದರೆ ಈ ಮೊದಲು 100 ದಿನ ಇದ್ದದ್ದನ್ನು 125 ದಿನಕ್ಕೆ ಏರಿಕೆ ಮಾಡಲಾಗಿದೆ.
ಈ ಮೊದಲು ಪ್ರತಿಶತ 100 ರಷ್ಟು ಅನುದಾನವನ್ನೂ ಕೇಂದ್ರ ಸರಕಾರ ನೀಡುತ್ತಿದ್ದು, ಆ ಯೋಜನೆಯ ಬಗ್ಗೆ ಕಾಳಜಿ ವಹಿಸಲು ರಾಜ್ಯ ಸರಕಾರಗಳು ನಿರಾಕರಿಸಿದ್ದವು. ಹೀಗಾಗಿ ರಾಜ್ಯದ 40 ಪ್ರತಿಶತ ಅನುದಾನ ನೀಡಿದರೆ ಅವರಿಗೂ ಆ ಯೋಜನೆಯ ಬಗ್ಗೆ ಕಳಕಳಿ ಇರುತ್ತದೆ ಎಂಬ ಆಶಯದೊಂದಿಗೆಮಾಡಲಾಗಿದೆ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದರು. ಬೆಂಗಳೂರು ಭಾಗದಲ್ಲಿ ತಾಲೂಕಿಗೆ ಒಂದು ಹಾಪ್ಕಾಮ್ಸ ಮಳಿಗೆಯನ್ನು ಸರಕಾರದಿಂದಲೇ ತೆರೆಯಲಾಗಿದೆ.
ಇದರಿಂದ ರೈತರು ನೇರವಾಗಿ ಹಾಪ್ಕಾಮ್ಸ ಮೂಲಕ ತಮ್ಮ ತರಕಾರಿ ಬೆಳೆಗಳನ್ನು ಇತರೆಡೆ ಸಾಗಿಸಲು ಅನುಕೂಲವಾಗುತ್ತದೆ. ಆದ್ದರಿಂದ ನಮ್ಮ ಭಾಗದಲ್ಲಿಯೂ ಒಂದು ಹಾಪ್ಕಾಮ್ಸ ಮಳಿಗೆ ತೆರೆಯಬೇಕೆಂದು ಆಗ್ರಹಿಸಿದರು. ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ತಾಲೂಕಿನಾದ್ಯಂತ ಎಲ್ಲ ರಸ್ತೆಗಳು ಹದಗೆಟ್ಟಿವೆ. ರೈತರಿಗೆ ವಿಮಾ ಮೊತ್ತ ಜಮೆ ಆಗಿಲ್ಲ. ಹೋರಾಟ ಮಾಡಿದಾಗ ಕಬ್ಬಿಗೆ ದರ ನಿಗದಿ ಮಾಡಲಾಗಿದೆ. ನಿಂಬೆಗೂ ದರ ನಿಗದಿ ಮಾಡುವಂತೆ ಹೋರಾಟ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ವಿವಿಧ ಸಮಸ್ಯೆಗಳ ಇತ್ಯರ್ಥಕ್ಕಾಗಿ ಹೋರಾಟ ನಡೆಸುತ್ತೇವೆ ಎಂದರು.ಅನೀಲ ಜಮಾದಾರ, ಮಲ್ಲಿಕಾರ್ಜುನ ಕಿವುಡೆ, ದೇವೆಂದ್ರ ಕುಂಬಾರ, ಸಂತೋಶ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 