ಚೈತಾಲಿ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟನೆ..!
Protest demanding strict punishment for the accused in Chaitali murder..!
ಚೈತಾಲಿ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟನೆ..!
ಕಾಗವಾಡ 11: ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಚೈತಾಲಿ ಕಿರಣಗಿ ಭೀಕರವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಆಗ್ರಹಿಸಿ, ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ, ಉಗಾರ ಬುದ್ರುಕ್ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಉಪ ತಹಶಿಲ್ದಾರ ರಶ್ಮಿ ಜಕಾತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ದಿ. 11 ರಂದು ಉಗಾರ ಬುದ್ರುಕ್ ಗ್ರಾಮದ ಮಹಾವೀರ ವೃತದಲ್ಲಿ ಸಾವಿರಾರು ಜನ ಸೇರಿ, ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡ ಶೀತಲಗೌಡ ಪಾಟೀಲ ನಮ್ಮ ಗ್ರಾಮದ ಅಮಾಯಕ ಗರ್ಭಿಣಿ ಹೆಣ್ಣುಗಳನ್ನು ಆಕೆಯ ಪತಿ ಪ್ರದೀಪ ಕಿರಣಗಿ ಹಾಗೂ ಸಹಚರರು ಭೀಕರವಾಗಿ ಹತ್ಯೆ ಮಾಡಿ ಅಪಘಾತ ಎಂಬಂತೆ ನಾಟಕವಾಡುತ್ತಿದ್ದನು ಆದರೆ ಕಾಗವಾಡ ಠಾಣೆ ಪೋಲಿಸರ ಚಾಣಾಕ್ಷ ನಡೆಯಿಂದ ಕೊಲೆಗಾರರು ಇಂದು ಕಂಬಿ ಹಿಂದೆ ಇದ್ದಾರೆ ಇದರಲ್ಲಿ ಇನ್ನು ಯಾರು ಯಾರೂ ಇದ್ದಾರೆ ಅನ್ನುವ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಅಮಾಯಕ ಜೀವ ತೆಗೆದುಕೊಂಡ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಪೋಲಿಸರು ಮಾಡಿ ಮೃತ ಚೈತಾಲಿ ಆತ್ಮಕ್ಕೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸಮಾಡಬೇಕು, ಈ ಪರಿಸ್ಥಿತಿಯಲ್ಲಿ ಗ್ರಾಮಸ್ಥರೆಲ್ಲರೂ ಆ ಕುಟುಂಬದ ಜೊತೆ ಇರುತ್ತೆವೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಮೃತ ಚೈತಾಲಿ ತಂದೆ ಅಣ್ಣಾಸಾಬ ಮಾಳಿ ನಮ್ಮ ಮಗಳು ಪ್ರದೀಪ ಕಿರಣಗಿ ಇತನ್ನು ಪ್ರೀತಿಸಿ ಮದುವೆಯಾಗಿದ್ದಳು ಆದರೆ ಅವಳಿಗೆ ಗಂಡನ ಮನೆಯಲ್ಲಿ ಬಹಳ ಕ್ರೂರವಾಗಿ ನಡೆಸಿಕೊಂಡಿದ್ದರು ಈ ಬಗ್ಗೆ ಅವರ ತಾಯಿ ಬಳಿ ಮಗಳು ಹೇಳಿಕೊಂಡಿದ್ದಳು ನನ್ನ ಮಗಳ ಕೊಲೆಯಲ್ಲಿ ಪ್ರದೀಪ ಕಿರಣಗಿ ನ್ಯಾಯವಾದಿ ಆಗಿದ್ದು ಅವನಿಗೆ ಇನ್ನೊಬ್ಬ ಮಹಿಳಾ ನ್ಯಾಯವಾದಿ ಜೋತೆ ಅನೈತಿಕ ಸಂಬಂಧ ಇದ್ದು ಆ ಮಹಿಳೆ ಮತ್ತು ಪ್ರದೀಪ ಇಬ್ಬರು ಸೇರಿ ಇನ್ಸೂರೆನ್ಸ್ ಹಣ ಹಾಗೂ ಆಸ್ತಿ ಸಲುವಾಗಿ ಕೊಲೆ ಮಾಡಿದ್ದು ಕೂಡಲೇ ಆ ಮಹಿಳಾ ನ್ಯಾಯವಾದಿಯನ್ನು ಬಂಧಿಸಿ ತನಿಖೆ ಕೈಗೊಂಡು ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಕಾಗವಾಡ ನ್ಯಾಯವಾದಿಗಳ ಸಂಘದ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮೋಹನ ಶಾ,ಮುಖಂಡರಾದ ವಸಂತ ಖೋತ,ಅಮೀನ ಶೇಖ,ಬಾಬು ಅಕ್ಕಿವಾಟೆ,ವಜ್ರಕುಮಾರ ಮಗದುಮ್ಮ,ಸಚಿನ ಪೂಜಾರಿ, ಅಣ್ಣಾಸಾಬ ಖೋತ, ಪಿಂಟು ಸಮಗಾರ, ಮುರಗೇಶ ಕುಂಬಾರ, ಸಂದೀಪ ಖೋತ ಸೇರಿದಂತೆ ನೂರಾರು ಜನ ಮಹಿಳೆಯರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 