ಪರಿಶಿಷ್ಟ ಜಾತಿಯವರಿಗೆ ಮನೆ ಹಕ್ಕುಪತ್ರ, ಈಸ್ವತ್ತು ಉತಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ..!

ಪರಿಶಿಷ್ಟ ಜಾತಿಯವರಿಗೆ ಮನೆ ಹಕ್ಕುಪತ್ರ, ಈಸ್ವತ್ತು ಉತಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ..! Protest demanding house title deeds and property titles for Scheduled Castes..!

ಪರಿಶಿಷ್ಟ ಜಾತಿಯವರಿಗೆ ಮನೆ ಹಕ್ಕುಪತ್ರ, ಈಸ್ವತ್ತು ಉತಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ..! 

ಕಾಗವಾಡ 05: ಪಟ್ಟಣದ ಬಸವ ನಗರದ ಪರಿಶಿಷ್ಟ ಜಾತಿ ಮತ್ತು ವಿವಿಧ ಸಮುದಾಯದ ಸುಮಾರು 1200 ಕುಟುಂಬಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಬೇಕು. ಮನೆ ನಿರ್ಮಾಣ ಮಾಡಿಕೊಂಡವರಿಗೆ ಈಸ್ವತ್ತು ಡಿಜಿಟಲ್ ಉತಾರ ನೀಡಬೇಕೆಂದು ಆಗ್ರಹಿಸಿ, ಮಂಗಳವಾರ ದಿ. 05 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿಯ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ. ಬಸವ ನಗರದ ಸರ್ವೆ ನಂ. 23/ಅ ನೇದ್ದರಲ್ಲಿ ಸುಮಾರು 50 ವರ್ಷಗಳಿಂದ ಪರಿಶಿಷ್ಟ ಜಾತಿಯ ಜನರು ಅಲ್ಲಿ ವಾಸವಾಗಿದ್ದು, ಸರ್ಕಾರವು ಇವರಿಗೆ ಈಗಾಗಲೇ ಹಕ್ಕು ಪತ್ರಗಳನ್ನು ಸಹ ಕಾನೂನು ಪ್ರಕಾರ ವಿತರಣೆ ಮಾಡಿದೆ. ಅಂಥವರಿಗೆ ಈಸ್ವತ್ತು ಡಿಜಿಟಲ್ ಉತಾರ ಮಾಡಿ ಕೊಡಬೇಕು. ಇನ್ನುಳಿದ 1200 ಕುಟುಂಬಗಳಿಗೆ ಮನೆಯ ಹಕ್ಕು ಪತ್ರಗಳನ್ನು ವಿತರಿಸಬೇಕು. ಇಲ್ಲಿಯ ನಿವಾಸಿಗಳಿಗೆ ಶುದ್ದ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಮತ್ತು ಸರ್ವೆ ನಂಬರ 23/ಅ ನೇದ್ದರಲ್ಲಿ 1 ಎಕರೆ 5 ಗುಂಟೆ ಸರ್ಕಾರಿ ಗಾಯರಾಣ ಜಾಗೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಈಸ್ವತ್ತು ಮತ್ತು ಪ್ರತ್ಯೇಕ ಸ್ಮಶಾನ ಭೂಮಿ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆದರು. ಈ ವೇಳೆ ದಲಿತ ಮುಖಂಡ ಸಂಜಯ ತಳವಲಕರ ಮಾತನಾಡಿ, ಸರ್ವೆ ನಂ. 23/ಅ ರಲ್ಲಿ ಕಳೆದ 50 ವರ್ಷಗಳಿಂದ ಪರಿಶಿಷ್ಟ ಜಾತಿಯವರನ್ನು ಹೊರತು ಪಡಿಸಿ ಬೇರಾವ ಜಾತಿಯವರು ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ, ಆ ಜಾಗವನ್ನು ದಲಿತ ಸ್ಮಶನ ಭೂಮಿ ಎಂದ ಪರಿಗಣಿಸಿ ಈಸ್ವತ್ತು ಡಿಜಿಟಲ್ ಉತಾರ ಪೂರೈಸಬೇಕು ಮತ್ತು ಅಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು. ತಾಲೂಕಾ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಚೀನ ಪೂಜಾರಿ, ಜಿಲ್ಲಾ ಡಿಎಸ್‌ಎಸ್ ಸಂಚಾಲಕ ಸಂಜಯ ತಳವಲಕರ, ಪಟ್ಟಣದ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಅರುುಣ ಜೋಶಿ, ದಲಿತ ಮುಖಂಡರಾದ ರವಿ ಕಾಂಬಳೆ, ವಿದ್ಯಾಧರ ಧೋಂಡಾರೆ, ಜಯಪಾಲ ಬಡಿಗೇರ, ಶಂಕರ ಕಾಂಬಳೆ, ಪ್ರಕಾಶ ಕಾಂಬಳೆ, ಸಿದ್ದು ಭಾನೂಸೆ, ರಾಜು ಪವಾರ, ಉಮೇಶ ಮನೋಜ, ಜನಾರ್ದನ ಧೋಂಡಾರೆ, ಕುಮಾರ ಬನಸೋಡೆ, ಮಹಾಂತೇಶ ಬನಸೋಡೆ, ಸೇರಿದಂತೆ ನೂರಾರು ದಲಿತ ಮುಖಂಡರು, ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಹಶೀಲ್ದಾರ ರವೀಂದ್ರ ಹಾದಿಮನಿ ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಅವರಿಗೆ ಮನವಿ ಪ್ರತ ಸಲ್ಲಿಸಿದರು.  ತಹಶೀಲ್ದಾರ ರವೀಂದ್ರ ಹಾದಿಮನಿ ಮನವಿ ಸ್ವೀಕರಿಸಿ ಮಾತನಾಡಿ, ತಮ್ಮ ಬೇಡಿಕೆಗಳು ಸೂಕ್ತವಾಗಿದ್ದು, ಶೀಘ್ರವೇ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.