ಬೆಳೆಗಳಿಗೆ ಸಮರ್ಕ ನೀರು, ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
Protest demanding adequate water and electricity supply for crops
ಬೆಳೆಗಳಿಗೆ ಸಮರ್ಕ ನೀರು, ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ
ಬೀಳಗಿ 05: ಸಮಪರ್ಕ ರಸಗೊಬ್ಬರ ಪೂರೈಕೆ, ಜಿ.ಎಲ್.ಬಿ.ಸಿ, ಕೆ.ಬಿ.ಜೆ.ಎನ್.ಎಲ್,ಎಮ್.ಎಲ್,ಬಿ. ಸಿ ಕಾಲುವೆಗಳಿಂದ ಬೆಳೆಗಳಿಗೆ ಸಮರ್ಕ ನೀರು ಹರಿಸವದು ಸೇರಿದಂತೆ ಸಮಪರ್ಕ ವಿದ್ಯುತ್ ಪೂರೈಸಲು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾ ಘಟಕ ಬಾಗಲಕೋಟ ಹಾಗೂ ತಾಲೂಕು ಘಟಕ ಬೀಳಗಿ ಸಹಯೋಗದೊಂದಿಗೆ ರೈತರು ಪಟ್ಟಣದ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ ವಿನೋದ ಹತ್ತಳ್ಳಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಪ.ಹಿರೇಮಠ ಮಾತನಾಡಿ ರೈತರು ಈಗಾಗಲೇ ವಿವಿಧ ಬೆಳೆಗಳು ಬೆಳೆದಿದ್ದು ಆ ಫಸಲುಗಳಿಗೆ ಯೂರಿಯಾ ರಸಗೊಬ್ಬರ ಅವಶ್ಯಕತೆ ಇದ್ದು ಆದರೆ ಯೂರಿಯಾ ರಸಗೊಬ್ಬರ ಸ್ಟಾಕ ಇದ್ದರೂ ಕೊರತೆ ಇದೆ ಎಂದು ರಸಗೊಬ್ಬರ ಪೂರೈಕೆದಾರರು ಹೇಳುತ್ತಿದ್ದು ಕಳ್ಳ ಸಂತೆಯಲ್ಲಿ ಮಾರಾಟವಾಗುತ್ತಿದ್ದ ಹಲವು ಗೊಬ್ಬರ ವ್ಯಾಪಾರಸ್ಥರು ತಮಗೆ ಬೇಕಾದವರಿಗೆ ಹೆಚ್ಚಿನ ದರದಲ್ಲಿ ಪೂರೈಕೆ ಮಾಡುತ್ತಿದ್ದು ಕೃಷಿ ಇಲಾಖೆ ಅಧಿಕಾರಿಗಳಿಂದ ಪರೀಶೀಲನೆ ಮಾಡಿಸಿ ತಕ್ಷಣ ಎಲ್ಲ ರೈತರಿಗೆ ಸಮಪರ್ಕ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಹಾಗೂ ನಕಲಿ ರಸಗೊಬ್ಬರ, ಕಳಪೆ ಬೀಜಗಳನ್ನು ಪೂರೈಸಿದವರಿಗೆ ಶಿಕ್ಷಿಸಬೇಕು. ಗೊಬ್ಬರ ಜೊತೆ ಜಿಂಕ ನೀಡುತ್ತಿರುವದರಿಂದ ರೈತರಿಗೆ ಆರ್ಥಿಕ ಹೊರೆ ಆಗುತ್ತಿದ್ದು ಅದನ್ನು ಪೂರೈಸುವದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಕೃಷ್ಣೆ, ಘಟಪ್ರಭೆ,ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು ಘಟಪ್ರಭಾ,ಕೃಷ್ಣಾ,ಮಲಪ್ರಭಾ ಎಡದಂಡೆ,ಬಲದಂಡೆ ಕಾಲವೆಗಳಿಗೆ ನೀರು ಹರಿಸಿ ರೈತರು ಬೆಳೆದ ಬೆಳೆಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಲು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರು ಹಾಗೂ ಇಲಾಖೆಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಕರೆದು ತಕ್ಷಣ ಕಾಲುವೆಗಳಿಗೆ ನೀರು ಹರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾ ಕೋಶ್ಯಾಧ್ಯಕ್ಷ ಎಂ.ವಾಯ್.ವಡವಾಣಿ ಮಾತನಾಡಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿ ಬೇಸಿಗೆ ಬೋರವೇಲ್ ಮರು ಪೂರಣಗೊಳ್ಳಲು ಅನೂಕೂಲ ಮಾಡಿಕೊಡಬೇಕು.ಹೆಸ್ಕಾಂ ಇಲಾಖೆಯಿಂದ ಸಮಪರ್ಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು,ಒಂದು ವಾರದಲ್ಲಿ ಎಲ್ಲ ಬೇಡಿಕೆಗಳನ್ನು ಇಡೇರಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಸರಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಪ್ರಧಾನ ಕಾರ್ಯದಶಿ9 ಗುರು ಅನಗವಾಡಿ, ರೈತ ದುರೀಣರಾದ ಮುತ್ತು ಮಮದಾಪೂರ , ನಜೀರ ಜೈನಾಪೂರ,ಹನುಮಂತ ದೊರೆಗೊಳ, ರಮೇಶ ಸಾರವಾಡ, ಲಕ್ಷ್ಮಣ್ಣ ಸವನಾಳ, ವಿಠ್ಠಲ ಬಿರಾದಾರ, ಅಂದಾನಯ್ಯ ವಿಭೂತಿ, ಮನ್ಸೂರಸಾಬ ಮುಜಾವರ, ಲಕ್ಷ್ಮಣ್ಣ ತಳವಾರ, ಪಕೀರ್ಪ ಕವಳ್ಳಿ, ನಿಂಗಪ್ಪ ಅನಗವಾಡಿ ಸೇರಿದಂತೆ ಅನೇಕರು ಇದ್ದರು.ಪೋಟೊಬೀಳಗಿ ಪಟ್ಟಣದಲ್ಲಿ ಭಾರತೀಯ ಕಿಸಾನ್ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ ಯೂರಿಯಾ ರಸಗೊಬ್ಬರ ಪೂರೈಕೆ ಹಾಗೂ ನೀರು, ವಿದ್ಯುತ್ ಸಮಸ್ಯೆ ಪರಿಹರಿಸಲು ಆಗ್ರಹಿಸಿ ತಹಶೀಲ್ದಾರ ಮೂಲಕ ರೈತರು ಮನವಿ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 