ಮೌನೇಶ್ವರ ದೇವಸ್ಥಾನದ ಬಾಗಿಲ ತೆರೆಸಿ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ

ಮೌನೇಶ್ವರ ದೇವಸ್ಥಾನದ ಬಾಗಿಲ ತೆರೆಸಿ  ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ  Protest by District Vishwakarma Samaj, opening the doors of Mauneshwar Temple


ಕೊಪ್ಪಳ 21:  ಕುಷ್ಟಗಿ ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಕಳೆದ 4 ವರ್ಷಗಳಿಂದ ಬಂದ್ ಆಗಿರುವ ಶ್ರೀ ಮೌನೇಶ್ವರ ದೇವಸ್ಥಾನದ ಬಾಗಿಲು ತೆರೆಯಿಸಿ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. 

ವಿಶ್ವಕರ್ಮ ಸಮಾಜದ ಆರಾಧ್ಯ ದೈವರಾದ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ಕಳೆದ ನಾಲ್ಕು ವರ್ಷಗಳಿಂದ ಬಾಗಿಲಿಗೆ ಬೀಗ ಹಾಕಲಾಗಿದೆ. ಇದರಿಂದ ಯಾವುದೇ ಪೂಜಾ ಕಾರ್ಯಗಳು ನಡೆಯುತ್ತಿಲ್ಲ. ಪೂಜೆಯ ವಿಚಾರದಲ್ಲಿ ಇಬ್ಬರು ಪೂಜಾರಿಗಳ ನಡುವಿನ ಕಲಹವು ಕೋರ್ಟ್‌ನಲ್ಲಿದೆ. ಆದರೆ ದೇವಸ್ಥಾನದಲ್ಲಿ ಪೂಜೆ  

ನಡೆಯುತ್ತಿಲ್ಲ. ಇದರಿಂದ ದೇವಸ್ಥಾನದಲ್ಲಿ ಕಾಲಕಾಲಕ್ಕೆ ನಡೆಯಬೇಕಾದ ಧಾರ್ಮಿಕ ಕಾರ್ಯಗಳು ನಿಂತು ಹೋಗಿವೆ. ಇದು ಸಮಾಜಕ್ಕೆ ತುಂಬ ನೋವುಂಟು ಮಾಡಿದೆ. ಇಬ್ಬರು ಪೂಜಾರಿಗಳ ನಡುವಿನ ಕಲಹಕ್ಕೆ ದೇವಸ್ಥಾನಕ್ಕೆ ಬೀಗ ಹಾಕುವುದು ಸರಿಯಲ್ಲ. ಇದು ಪ್ರಸಿದ್ದ ದೇವಸ್ಥಾನವಾಗಿದೆ. ಇದಕ್ಕೆ ದೊಡ್ಡ ಇತಿಹಾಸ ಇದೆ. ಯಾವುದೋ ಕಾರಣಕ್ಕೆ ದೇವಸ್ಥಾನದಲ್ಲಿ ಪೂಜೆ ಬಂದ್ ಮಾಡುವುದು ಸರಿಯಲ್ಲ. ಕೂಡಲೇ ಶ್ರೀ  

ಮೌನೇಶ್ವರ ದೇವಸ್ಥಾನದ ಬಾಗಿಲು ತೆರೆಯಿಸಿ ನಿರಂತರ ನಡೆಯುವ ಧಾರ್ಮಿಕ ಕಾರ್ಯಗಳನ್ನು ಮತ್ತೆ  ಚಾಲನೆ ಕೊಡಬೇಕು. ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಮಧ್ಯ ಪ್ರವೇಶ ಮಾಡಬೇಕು. ಕೋರ್ಟ್‌ ವ್ಯಾಜ್ಯದ ಹೊರತಾಗಿ ದೇವಸ್ಥಾನಕ್ಕೆ ಒಬ್ಬರನ್ನು ಪೂಜಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ  ವಿಶ್ವಕರ್ಮ ಜಿಲ್ಲಾ ಸಮಾಜವು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. 

ಮನವಿ ಸಲ್ಲಿಸುವ ವೇಳೆ ಜಿಲ್ಲಾಧ್ಯಕ್ಷ ನಾಗರಾಜ ಕಂಸಾಲ, ಜಿಲ್ಲಾ ಕಾರ್ಯಾಧ್ಯಕ್ಷ ರುದ್ರ​‍್ಪ ಬಡಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಪ್ರಕಾಶ, ತಾಲೂಕು ಅಧ್ಯಕ್ಷ ದೇವಪ್ಪ ಬಡಿಗೇರ, ಶಂಕ್ರ​‍್ಪ ಬಡಿಗೇರ, ಕಾಳೇಶ ಬಡಿಗೇರ, ಸೂಗುರೇಶ್ವರ ಅಕ್ಕಸಾಲಿ, ಶೇಖರ​‍್ಪ ಬಡಿಗೇರ, ಪ್ರಭಾಕರ ಗುಡದಳ್ಳಿ, ಮಾರುತಿ ಬಡಿಗೇರ, ಶರಣಪ್ಪ ಬಡಿಗೇರ, ಮೌನೇಶ ವಡ್ಡಟ್ಟಿ, ಐ.ವಿ.ಪತ್ತಾರ, ದೇವೇಂದ್ರ​‍್ಪ ಬಡಿಗೇರ, ಕಾಳಮ್ಮ ಪತ್ತಾರ, ಮಂಜುನಾಥ ಬಡಿಗೇರ, ಆನಂದ ವೇದಪಾಠಕ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.