ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಪ್ರತಿಭಟನೆ
Protest by Devadasi Women's Liberation Association
ಬಳ್ಳಾರಿ 19: ನಗರದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಮತ್ತು ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸದ್ದಾರೆ.ಮನವಿಯಲ್ಲಿ ಹಾಕ್ಕೋತಾಯಗಳನ್ನು ಮಾಡಿದ್ದುಎಲ್ಲಾ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರಿನ ಕುಟುಂಬಗಳನ್ನು ಯಾವುದೇ ಷರತ್ತಿಲ್ಲದೆ.ವಯೋಮಿತಿ ಗಮನಿಸದೆ ಸರ್ವೆ ಮಾಡಬೇಕು. 2007ರಲ್ಲಿ ಸರ್ಕಾರವೇ ಸರ್ವೇ ಮಾಡಿದ ದೇವದಾಸಿ ಮಹಿಳೆಯರನ್ನು ವಯೋಮಿತಿ ಹೇರಿ ಸರ್ವೆಯಿಂದ ಹೊರಗಡೆ ಹಿಟ್ಟಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ವೆಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು..
ಎಲ್ಲಾ ದೇವದಾಸಿ ಮಹಿಳೆಯರಿಗೆ ಸಾಲ ಸೌಲಭ್ಯ ಸಹಾಯಧನ 2 ಲಕ್ಷ ರೂಪಾಯಿ ನೀಡಬೇಕು. 2026 ಬಜೆಟ್ ನಲ್ಲಿ ಎಲ್ಲಾ ದೇವದಾಸಿ ಮಹಿಳೆಯರಿಗೆ ಸಹಾಯ ಧನ ಅಥವಾ ಪಿಂಚಣಿಯನ್ನು 10.000ರೂಗಳ ಹೆಚ್ಚಿಸಬೇಕು. ಎಲ್ಲಾ ದೇವದಾಸಿ ಮಕ್ಕಳಿಗೆ ವಿದ್ಯಾಭ್ಯಾಸ ಅನುಸಾರ ಉದ್ಯೋಗ ನೀಡಬೇಕು.ಇಲ್ಲದಿದ್ದರೆ ನಿರುದ್ಯೋಗ ಬತ್ತೆ 10,000 ನೀಡಬೇಕು. ಹೆಚ್ಚು ಜಮೀನು ಹೊಂದಿದ ಕುಟುಂಬಗಳಿಂದ ಕೈಗಾರಿಕೆಗಳಿಗೆ ಭೂ ಸ್ವಾಧೀನ ಮಾಡಿವ ಮಾದರಿಯಲ್ಲಿ.ಸ್ವಾಧೀನ ಮಾಡಿ ತಲ 05 ಎಕರೆ ಭೂಮಿ ನೀಡಬೇಕು. ಎಲ್ಲಾ ದೇವದಾಸಿ ಮಹಿಳೆಯರಿಗೆ ಕೆ.ಎಂ.ಇ.ಆರಿ್ಸ.ಹಣದಿಂದ 80ಥ80 ಜಾಗ ನೀಡಿ12 ಲಕ್ಷ ರೂಪಾಯಿ ಮನೆಗಳನ್ನು ಉಚಿತವಾಗಿ ಕಟ್ಟಿಸಿಕೊಡಬೇಕು.ಮತ್ತು ಉಳಿದ ಜಾಗದಲ್ಲಿ ಹೈನುಗಾರಿಕೆ ಮಾಡಿಕೊಳ್ಳುವುದಕ್ಕೆ 5 ಲಕ್ಷ ಸಹಾಯಧನ ನೀಡಬೇಕು
ಮದುವೆ ಸಹಾಯ ಧನಕ್ಕೆ ಅರ್ಜಿ ಹಾಕಿದ ದೇವದಾಸಿ ಮಕ್ಕಳಿಗೆ ಒಂದು ವರ್ಷದಲ್ಲಿ ಹಣ ಬಿಡುಗಡೆ ಮಾಡಬೇಕು. .ನರೇಗಾ ಉಳಿ.ವಿಬಿ ಗ್ರಾಮ್ಮಿ ರದ್ದುಪಡಿಸಿ ಉದ್ಯೋಗ ಖಾತ್ರಿಯಲ್ಲಿ 200 ದಿನಗಳ ಕೆಲಸ ನೀಡಬೇಕು ಕೂಲಿ 1000 ಸಾವಿರ ರೂಪಾಯಿ ನೀಡಬೇಕು 2025ರ ವಿದ್ಯುತ್ ಮಸೂದೆ ವಾಪಸ್ ಪಡೆಯಬೇಕು. ಹಾಗೂ ಗಣಿ ಭಾದ್ಯತಾ ಜಿಲ್ಲೆಗಳ ದೇವದಾಸಿ ಮಹಿಳೆಯರ ವಸತಿ ಸೌಕರ್ಯಕ್ಕೆ ಅಗತ್ಯವಾದ ಹಣವನ್ನು ಸಂಬಂಧಿಸಿದ ನಿಧಿಯ ಮೂಲಕ ಒದಗಿಸಬೇಕು ಯಾವುದೇ ಕಾರಣಕ್ಕೂ ಆ ಸೌಕರ್ಯ ಒದಗಿಸಲು ಯಾವುದೇ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿಕೊಡದೇ ನೇರ ಸಂಬಂಧಿಸಿ ದ ಇಲಾಖೆಯ ಮೂಲಕ ಕ್ರಮ ವಹಿಸಬೇಕು ಎಂದರು.ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಈರಮ್ಮ, ಜಿಲ್ಲಾ ಕಾರ್ಯದರ್ಶಿ ಎ ಸ್ವಾಮಿ ಮಾರಮ್ಮ ಸಂಡೂರು ತಾಲೂಕು ಅಧ್ಯಕ್ಷರು ಹೆಚ್ಚು ದುರುಗಮ್ಮ ಸಂಡೂರು ತಾಲೂಕು ಕಾರ್ಯದರ್ಶಿ ಸಿ ವೀರೇಶ ಕುರುಗೋಡು ತಾಲೂಕು ಕಾರ್ಯದರ್ಶಿ ಹುಲಿಗೆಮ್ಮ ಸಂಡೂರು ತಾಲೂಕು ಉಪಾಧ್ಯಕ್ಷರು, ಇತರರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 