ಕನೇರಿ ಮಠದ ಶ್ರೀಗಳ ವಿರುದ್ದ ಬಸವ ಕೇಂದ್ರದ ಸಂಘಟನೆಯವರಿಂದ ಪ್ರತಿಭಟನೆ
Protest by Basava Kendra organization against the monks of Kaneri Math
ಜಮಖಂಡಿ 28 : ಕನೇರಿ ಕಾಡಸಿದ್ಧೇಶ್ವರ ಮಠದ ಸ್ವಾಮಿಗಳು ಲಿಂಗಾಯಿತ ಧರ್ಮದ ವಿರುದ್ಧ ಹಗುರವಾಗಿ ಮಾತನಾಡುವದು, ವಿಶ್ವಗುರು ಬಸವಣ್ಣನವರಿಗೆ ಅಪಮಾನ ಮಾಡುವ ರೀತಿಯಲ್ಲಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಹುಟ್ಟುಹಾಕುತ್ತಿದ್ದು ಇದರಿಂದ ನಮ್ಮ ಧಾರ್ಮಿಕ ಭಾವನೆಗೆ ನೋವು ಉಂಟಾಗಿದೆ. ಸ್ವಾಮೀಜಿಯವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಬಸವ ಕೇಂದ್ರ ಸಂಘಟನೆಯವರು ಆಗ್ರಹಿಸಿದರು.
ನಗರದ ತಾಲೂಕಾಡಳಿತ ಭವನದ ಮುಂದೆ ಬಸವ ಕೇಂದ್ರದ ಸಂಘಟನೆಯವರು ಪ್ರತಿಭಟನೆಯನ್ನು ನಡೆಸಿ. ತಮ್ಮ ಆಕ್ರೋಶ ವ್ಯಕ್ತಡಿಸಿದ ಬಳಿಕ. ತಹಶೀಲ್ದಾರ ಅನೀಲ ಬಡಿಗೇರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲಿಸಿದರು.
ನಂತರ ಮಾತನಾಡಿದ ಅವರು, ಬಸವ ಸಂಸ್ಕೃತಿ ಅಭಿಯಾನದ ಹಾಗೂ ಲಿಂಗಾಯತ ಮಠಾಧೀಶರನ್ನು ಉದ್ದೇಶಿಸಿ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ಹಗುರವಾಗಿ ಮಾತನಾಡಿರುವ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿ ಕಾಡಸಿದ್ಧೇಶ್ವರ ಮಠದ ಸ್ವಾಮಿಗಳು. ಕೆಲವು ಜಿಲ್ಲೆಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು ಆದರು ಅವರು ತಮ್ಮ ಚಾಳಿಯನ್ನು ಮುಂದು ವರೆಸಿದ್ದಾರಲ್ಲದೇ, ನ್ಯಾಯಾಲಯಗಳು ಸಹ ಇವರ ವರ್ತನೆಗೆ ಬೆಸರ ವ್ಯಕ್ತ ಪಡಿಸಿವೆ ನಿವೊಬ್ಬ ಉತ್ತಮ ಪ್ರಜೆ ಅಲ್ಲ ಎಂದು ಛಿಮಾರಿ ಹಾಕಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ಬಸವ ಕೇಂದ್ರದ ಅಧ್ಯಕ್ಷ, ನ್ಯಾಯವಾದಿ ರವಿ ಯಡಹಳ್ಳಿ, ಲಿಂಗಾಯತ ಮಹಾಸಭಾದ ಅಧ್ಯಕ್ಷ, ನ್ಯಾಯವಾದಿ ಸಿ.ಎಸ್.ಬಾಂಗಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ಮಹಿಳಾ ಘಟಕದ ಭಾಗ್ಯಾ ಕೊಟಿ, ಎಂ,ಡಿ, ಸಂಕ, ಮಹಾಂತೇಶ ಅಂಗಡಿ, ಮರೆಗುದ್ದಿಗಯ ಗುರುಮಹಾಂತ ಶ್ರೀಗಳು ಮಾತನಾಡಿ ಕನೇರಿ ಶ್ರೀಗಳ ನಡೆಯನ್ನು ಖಂಡಿಸಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ರಮೇಶ ವಾಜಂತ್ರಿ, ರಾನಾಸಾಬ ಚಕ್ಕಪ್ಪನವರ, ಕಾರ್ಯದರ್ಶಿ ಮಹಾಂತೇಶ ಅಂಗಡಿ, ಖಜಾಂಚಿ, ಅಣ್ಣಾಸಾಹೇಬ ಜಗದೇವ, ಎಂ.ಬಿ.ಕೊಪ್ರದ, ಎಸ್.ಕೆ. ಬಡಚಿ, ವಿ.ಎಂ.ಬಂದ್ರದ, ಎಂ.ಡಿ.ಸಂಕ, ಪಿ.ಬಿ.ನ್ಯಾಮಗೌಡ, ಬಿ.ಎಸ್.ನಾಗನೂರ, ಎಸ್.ಜಿ.ತೇಲಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 