ವೆನೆಜುವೆಲಾದ ಮೇಲೆ ಅಮೆರಿಕದ ಆಕ್ರಮಣ ಖಂಡಿಸಿ ಪ್ರತಿಭಟನೆ
Protest against US invasion of Venezuela
ಬೆಳಗಾವಿ 06: ವೆನಿಜುವೆಲಾ ರಾಷ್ಟ್ರದ ಮೇಲೆ ಅಮೇರಿಕಾದ ಆಕ್ರಮಣ, ಸಾಮ್ರಾಜ್ಯಶಾಹಿ ಮಿಲಿಟರಿ ಪಡೆಗಳು ಬಹಿರಂಗವಾಗಿ ವೆನಿಜುವೆಲಾ ರಾಜಧಾನಿ ಮತ್ತು ಅಲ್ಲಿನ ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿ ಅಧ್ಯಕ್ಷ ನಿಕೋಲನ್ ಮಡುರೂ ಮತ್ತು ಅವರ ಪತ್ನಿಯ ಅಪಹರಣ ಕೃತ್ಯವನ್ನು ಸಂಯುಕ್ತ ಹೋರಾಟ ಬೆಳಗಾವಿ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾದ ದಮಣಕಾರಿ ನೀತಿ ವಿರುದ್ಧ ವೆನಿಜುವೆಲಾ ಪರ ರಕ್ಷಣೆಗೆ ನಿಲ್ಲಬೇಕೆಂದು ಒತ್ತಾಯಿಸಲಾಗಿದೆ.
ಅಮೇರಿಕಾ ಮಿಲಿಟರಿ ಪಡೆಗಳು ವೆನಿಜುವೆಲಾ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ಹರಣ ಮಾಡಿದೆ. ಇದು ವಿಶ್ವಸಂಸ್ಥೆ ರಾಷ್ಟ್ರಗಳ ಶಾಂತಿಯುತ ಸಹಬಾಳ್ವೆಯ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ತತ್ವಗಳು ಮತ್ತು ವಿಶ್ವಶಾಂತಿ ಸೇರಿದಂತೆ ಅಸ್ತಿತ್ವದಲ್ಲಿರುವ ಅಂತರಾಷ್ಟ್ರೀಯ ಸನ್ನದುಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಅಮೇರಿಕದ ಈ ಕೃತ್ಯ ಅತ್ಯಂತ ಕಳವಳಕಾರಿಯಾಗಿದೆ ಎಂದು ಆರೋಪಿಸಿದೆ.
ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿಪ್ರಿಯ ಜನರು ಈ ಸಾಮ್ರಾಜ್ಯಶಾಹಿ ಬೆದರಿಕೆಯನ್ನು ಎದುರಿಸಲು ಒಗ್ಗಟ್ಟಿನಿಂದ ಯುದ್ದೋನ್ಮಾದ ವಿಚಾರಗಳ ತಡೆಗೆ ಬೆಂಬಲ ವ್ಯಕ್ತಪಡಿಸಬೇಕಿದೆ ಎಂದು ಒತ್ತಾಯಿಸಿದೆ. ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 