ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ

ಹಳಿಯಾಳ 11: ಟಿಪ್ಪು ಸುಲ್ತಾನ ಜನ್ಮ ದಿನಾಚರಣೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಘಟಕದವರು ಶನಿವಾರ ದಿಢೀರ ಸಾಂಕೇತಿಕ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದ್ದಾರೆ.

ಶಿವಾಜಿ ವೃತ್ತಕ್ಕೆ ತೆರಳಿ ಅಶ್ವಾರೂಢ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಮಾಜಿ ಶಾಸಕ ಹಾಗೂ ಭಾಜಪ ಮುಖಂಡ ಸುನೀಲ ಹೆಗಡೆ ಮಾತನಾಡಿ ಇಂದು ಹಿಂದವಿ ಸ್ವರಾಜ್ಯ ಸಂಸ್ಥಾಪಕರಾದ ಅಪ್ರತಿಮ ದೇಶಭಕ್ತ ಛತ್ರಪತಿ ಶಿವಾಜಿ ಮಹಾರಾಜರು ಮಹಾನ್ ಕ್ರೂರಿ ಅಫ್ಝಲಖಾನ್ ರನ್ನು ಸಂಹರಿಸಿದ ದಿನವಾಗಿದ್ದು ನಮಗೆಲ್ಲರಿಗೂ ಶೌರ್ಯದ ದಿನವಾಗಿದೆ ಎಂದರು. ಹಾಗೂ ಈ ಸಂದರ್ಭದಲ್ಲಿ ಟಿಪ್ಪು ಜನ್ಮದಿನಾಚರಣೆಯನ್ನು ಖಂಡಿಸುವ ಧ್ಯೋತಕವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಕೈಗಳಿಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದರು.

ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ಸಂತೋಷ ಘಟಕಾಂಬ್ಳೆ, ಅನಿಲ ಮುತ್ನಾಳೆ, ಸಂತಾನ ಸಾವಂತ, ವಾಸುದೇವ ಪೂಜಾರಿ, ವಿಜಯಕುಮಾರ ಬೋಬಾಟಿ, ಅನಿಲ ಗಿರಿ, ನಾರಾಯಣ ಬೆಳಗಾಂವಕರ, ಪ್ರದೀಪ ಹಿರೇಕರ, ಆನಂದ ಕಂಚನಾಳಕರ, ಹನುಮಂತ ಚಲವಾದಿ, ಯಲ್ಲಪ್ಪಾ ಹೊನ್ನೋಜಿ, ವಿಲಾಸ ಯಡವಿ, ಚಂದ್ರಕಾಂತ ಕಮ್ಮಾರ, ಉಲ್ಲಾಸ ಬಿಡಿಕರ ಮೊದಲಾದವರು ಪಾಲ್ಗೊಂಡಿದ್ದರು ಎಂದು ಭಾಜಪ ಪ್ರಕಟಣೆ ತಿಳಿಸಿದೆ.