ಶ್ರವಣ ಶಕ್ತಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆ
Protecting hearing is everyone's responsibility
ಗದಗ 03 : ಆರಂಭದ ಹಂತದಲ್ಲಿರುವ ಶ್ರವಣ ದೋಷ ಮತ್ತು ಸಂಬಂಧಿತ ಕಿವಿರೋಗಗಳನ್ನ ಪರಿಹರಿಸಬಹುದಾಗಿದ್ದು ಶ್ರವಣದೋಷದ ಅಪಾಯದಲ್ಲಿರುವ ಜನರು ನಿಯಮಿತವಾಗಿ ತಮ್ಮ ಶ್ರವಣವನ್ನುಪರೀಕ್ಷಿಸಿಕೊಳ್ಳಬೇಕು ಶ್ರವಣದೋಷ ಅಥವಾ ಸಂಬಂಧಿತ ಕಿವಿರೋಗಗಳಿಗಾಗಿ ಜನರು ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಶ್ರವಣ ವೈದ್ಯರನ್ನ ಸಂಪರ್ಕಿಸಬೇಕು. ಶ್ರವಣ ಶಕ್ತಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಪ್ರೀತ್ಖೋನಾ ಅವರು ಹೇಳಿದರು.
ಇಲ್ಲಿಯ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿತಾಲೂಕ ಆರೋಗ್ಯ ಮತ್ತು ಶಿಕ್ಷಣ ವಿಭಾಗವು ಏರಿ್ಡಸಿದ್ದ ತಾಲೂಕು ಮಟ್ಟದ ವಿಶ್ವ ಶ್ರವಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮೇಲಿನಂತೆ ಮಾತನಾಡಿದ ಅವರು ಸೂಕ್ತ ಚಿಕಿತ್ಸೆ ಪಡೆದಲ್ಲಿ ಶ್ರವಣದೋಷ ನಿವಾರಣೆ ಮಾಡಬಹುದಾಗಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾರಾಜೇಂದ್ರ ಎಸ್ಗಡಾದ ಅವರು ಮಾತನಾಡಿ ವಿಶ್ವಆರೋಗ್ಯಸಂಸ್ಥೆ 2007ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಕಿವಿ ಆರೈಕೆ ದಿನವೆಂದು ಶ್ರವಣ ದಿನವನ್ನು ಆಚರಿಸಿತು. 2016 ನಂತರ ಈ ಹೆಸರನ್ನುಬದಲಾಯಿಸಿ ವಿಶ್ವ ಶ್ರವಣ ದಿನ ಎಂದು ಪ್ರತಿ ವರ್ಷ ಘೋಷ ವಾಕ್ಯದೊಂದಿಗೆ ಆಚರಿಸುತ್ತ ಕಿವುಡುತನ ಮತ್ತು ಶ್ರವಣ ದೋಷವನ್ನು ತಡೆಗಟ್ಟುವುದು ಮತ್ತು ಪ್ರಪಂಚಾದ್ಯಂತ ಕಿವಿ ಮತ್ತು ಶ್ರವಣ ಆರೈಕೆಯನ್ನು ಉತ್ತೇಜಿಸುವುದು ಹೇಗೆ ಎಂಬುದರ ಕುರಿತು ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.
ಶ್ರವಣದೋಷದ ಅಪಾಯದಲ್ಲಿರುವ ಜನರು ನಿಯಮಿತವಾಗಿ ತಮ್ಮ ಶ್ರವಣವನ್ನುಪರೀಕ್ಷಿಸಿಕೊಳ್ಳಬೇಕು ಶ್ರವಣ ದೋಷ ಅಥವಾ ಸಂಬಂಧಿತ ಕಿವಿರೋಗಿಗಳಿಗೆ ಜನರು ಸ್ವಯಂ ಚಿಕಿತ್ಸೆ ಪಡೆಯ ದೆವೈದ್ಯರನ್ನ ಸಂಪರ್ಕಿಸಬೇಕು. ಜೀವನದ ಎಲ್ಲಾ ಹಂತಗಳಲ್ಲಿ ಉತ್ತಮ ಶ್ರವಣ ಮತ್ತು ಸಂವಹನವು ಮುಖ್ಯವಾಗಿದ್ದು ಸಾಧ್ಯವಾದಾಗಲೆಲ್ಲ ದೊಡ್ಡ ಶಬ್ದವನ್ನ ತಪ್ಪಿಸಿಕಿವಿಗಳನ್ನು ಸುರಕ್ಷಿತವಾಗಿಟ್ಟು ಕೊಳ್ಳಬೇಕು.ಸಮುದಾಯಗಳಿಂದ ತರಗತಿಗಳಿಗೆ ಎಲ್ಲಾ ಮಕ್ಕಳಿಗೆ ಶವನ ಆರೈಕೆ ಯಾವುದೇ ಮಗು ಶವಣ ಅಥವಾ ಶ್ರವಣ ಸಮಸ್ಯೆಗಳಿಂದ ಭವಿಷ್ಯದಲ್ಲಿ ಹಿಂದೆ ಉಳಿಯದಂತೆ ನಿಗಾವಹಿಸಬೇಕಾದದ್ದು ತುಂಬಾ ಅವಶ್ಯ ಮತ್ತು ಅಗತ್ಯವಾಗಿದೆ ಎಂದರು. ಆರ್ಬಿಎಸ್ಕೆ ವೈದ್ಯಾಧಿಕಾರಿಗಳಾದ ಡಾ.ಎಸ್ ಎ ಬಿರಾದಾರ ಅವರು ಕಿವಿರಕ್ಷಣೆ ಕುರಿತು ಮಾತನಾಡಿದರು.
ಹಿರಿಯ ಆರೋಗ್ಯ ನೀರೀಕ್ಷನಾಧಿಕಾರಿ ಬಿ.ಹೆಚ್ಕುಲಕರ್ಣಿ ಸರ್ವರನ್ನು ಸ್ವಾಗತಿಸಿದರು. ಬೂದೇಶ್ಸಿದ್ದನಗೌಡ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾವತಿ ಮಡಿವಾಳರ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿಗಳು ಹಾಗೂ ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿಗಳು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 