ಜಲಚರ ಜೀವಿಗಳನ್ನು ರಕ್ಷಿಸಿ ಜೀವ ಜಲವನ್ನು ಉಳಿಸಿ : ಶರಣ ಬಸಪ್ಪ ದಾನಕೈ
Protect aquatic life and save living water: Sharan Basappa Danakai
ಕೊಪ್ಪಳ 13 : ಮಕರ ಸಂಕ್ರಾಂತಿಯ ಅಂಗವಾಗಿ ಸುಕೇತ್ರ ತಿಂಥಣಿ ಮೌನೇಶ್ವರ, ಧರ್ಮಸ್ಥಳದ ಮಂಜುನಾಥ ಸ್ವಾಮಿ, ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನ, ಕೂಡಲ ಸಂಗಮ ಕ್ಷೇತ್ರ, ಹುಲಿಗೇಮ್ಮ,ಯಲ್ಲಮ್ಮ ದೇವಸ್ಥಾನ ಹಿಗೇ ರಾಜ್ಯದ ವಿವಿಧ ಪುಣ್ಯ ತೀರ್ಥ ಕ್ಷೇತ್ರಗಳಲ್ಲಿ ಮಕರ ಸಂಕ್ರಾಂತಿಯ ಹಬ್ಬದಂಗವಾಗಿ ಪವಿತ್ರವಾದ ನದಿಗಳಲ್ಲಿ ಸ್ನಾನ( ಜಳಕ) ಮಾಡುವಾಗ ವಿವಿಧ ಶಾಂಪೂ, ವಿಷಕಾರಕ ಸಾಬುನು ಬಳಸಿ ವಿಷಸ್ನಾನ ಮಾಡಿ ಜಲಚರ ಜೀವಿಗಳನ್ನು ನಾಶಮಾಡುತ್ತಿದ್ದೆವೆ ಆದ್ದರಿಂದ ನಾವು ಪುಣ್ಯ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡುವಾಗ ಕಡ್ಲಿ ಹಿಟ್ಟಿನಿಂದ ಸ್ನಾನ ಮಾಡಿ ಜಲಚರ ಜೀವಿಗಳನ್ನು ರಕ್ಷೀಸಿ ಜೀವ ಜಲವನ್ನು ಉಳಿಸಿವಲ್ಲಿ ಒಂದು ಸಣ್ಣ ಪ್ರಯತ್ನವನ್ನು ನಾವು ನಿವೇಲ್ಲರೂ ಮಾಡೋಣ ಎಂದು ಪರಿಸರ ಪ್ರೇಮಿ ಸಾಹಿತಿ ಶರಣಬಸಪ್ಪ ದಾನಕೈ ಯಲಬುರ್ಗಾ ಅವರು ಮನವಿ ಮಾಡಿದ್ದಾರೆ.
ಗಟಾರಗಳ ಮೂಲಕವಾಗಿ ಕೊಳಚೆ ನೀರು, ಇದರೊಂದಿಗೆ ಅಧಿಕೃತ ಹಾಗು ಅನಧಿಕೃತವಾಗಿ ಮಾರುವ ಮದ್ಯ ಪಾನಿಯಗಳ ಪ್ಲಾಸ್ಟಿಕ್ ಚೀಲಗಳು,ನೀರಿನ ಪ್ಲಾಸ್ಟಿಕ್ ಬಾಟಲಿ,ಪೌಚ್ ಗಳು ,ಇದರ ಜೋತೆಗೆ ಮನೆ,ಹೊಟಲ್,ರೆಸ್ಟೋರೆಂಟ್, ಹಾಗು ವಿಷಪೂರಿತದಿಂದ ಕೂಡಿರುವ ವಿವಿಧ ಕಂಪನಿಗಳಿಂದ ಬರುವ ಧೂಳು,ವಿಷ ಅನೀಲ ಸೋರಿಕೆಗಳಿಂದ ಬರುವ ನೀರು, ಹಾಗು ಸತ್ತ ಪ್ರಾಣಿಗಳಾದ ನಾಯಿ, ಕುರಿ, ಹಂದಿ, ಬೆಕ್ಕು,ಇಲಿ,ಹೆಗ್ಗಣ ಇನ್ನಿತರ ಪ್ರಾಣಿಗಳನ್ನು ಗಟಾರಕ್ಕೆ ಚೆಲ್ಲಿ ನಮ್ಮ ಕೈ ತೊಳೆದು ಕೊಳ್ಳುತ್ತವೆ ಇದರಿಂದ ನೀರು ಹಳ್ಳ ,ಕೊಳ್ಳ,ಕೆರೆ,ನದಿ ಸೇರಿ ಅದರಲ್ಲಿರು ಮೀನು ಇತರ ಜೀವ ಸಂಕುಲ ನಾಶವಾಗುತ್ತದೆ, ಶುದ್ದ ಗಾಳಿ,ನೀರು,ಆರೋಗ್ಯ ಸಿಗಲಾರದೆ ನೂರು ವರ್ಷ ಬದುಕಿ ಬಾಳಬೇಕಾದವರು ಹಲವಾರು ರೋಗಗಳಿಗೆ ಸಿಲುಕಿ 30 ವರ್ಷದೋಳಗೆ ಸಾವನ್ನು ತಂದು ಕೊಳ್ಳುತ್ತವೆ ಆದ್ದರಿಂದ ಯುವ ಸಮುದಾಯ,ಸಂಘಸಂಸ್ಥೆಗಳು, ಸರ್ಕಾರ ಜಾಗೃತಿವಹಿಸಿದಾಗ ಸುಂದರ ಪರಿಸರ ನಿರ್ಮಿಸಿ ಜಲಚರ ಜೀವಿಗಳನ್ನು ರಕ್ಷಿಸಿ ಜೀವ ಸಂಕುಲವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ಜಿಲ್ಲೇಯ ಪರಿಸರ ಪ್ರೇಮಿ ,ಸಾಹಿತಿ ಶರಣಬಸಪ್ಪ ದಾನಕೈ ಯಲಬುರ್ಗಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 