ಸುಗಂಧಿ ಗುರುಪ್ರಸಾದ ಪ್ರಾಂತ ಪ್ರಚಾರ-ಪ್ರಸಾರ
Promotion and broadcasting of fragrant Guruprasad province
ಬೆಳಗಾವಿ 30: ವಿಜಯನಗರ ಪ್ರಾಂತ ಕರ್ನಾಟಕ ಉತ್ತರರಾಷ್ಟ್ರ ಸೇವಿಕಾ ಸಮಿತಿ ಬೆಳಗಾವಿಯ ಮಚ್ಚೇಂದ್ರ ಕಲ್ಯಾಣಿಗೆ ಗಂಗಾರತಿಯತಿಯ ಸಂಭ್ರಮ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಮಹತ್ವವನ್ನು ಹೊಂದಿರುವುದರ ಜೊತೆಗೆ ಪರಿಸರ ರಕ್ಷಣೆಯ ಸಂದೇಶವನ್ನೂ ಕೊಡುವ ಗಂಗಾರತಿಯು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಪದ್ದತಿಯಾಗಿದೆ. ಜೊತೆಗೆ ಪ್ರಸ್ತುತ ಸಂದರ್ಭದಲ್ಲಿಯೂ ಮಹತ್ವವನ್ನು ಪಡೆದಿದೆ.
ರಾಷ್ಟ್ರ ಸೇವಿಕಾ ಸಮಿತಿಯ ಮಾತಾ ಭಗಿನಿಯವರು ಪರ್ಯಾವರಣ ಗತಿವಿಧಿಯಿಂದ ಗಂಗಾರತಿಯನ್ನು ಹಮ್ಮಿಕೊಂಡು ಪರಿಸರ ರಕ್ಷಣೆಯ ಕುರಿತು ಸಮಾಜವನ್ನು ಜಾಗೃತಗೊಳಿಸುತ್ತಿದ್ದಾರೆ. ಅಂತೆಯೇ ಬೆಳಗಾವಿಯ ಮಚ್ಚೇಂದ್ರ ಕಲ್ಯಾಣಿಗೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮದಿನದ ಅಂಗವಾಗಿ ಡಿಸೆಂಬರ್ 25, ಗುರುವಾರದಂದು ಗಂಗಾರತಿಯನ್ನು ಮಾಡಿದರು.
ಈ ಸುಂದರ, ಭಕ್ತಿಪೂರ್ವಕ ಸಂಜೆಗೆ ಸುಮಾರು ಎಂಟು ನೂರಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾಗಿದ್ದರು. ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜ್ ಭಜನಾ ಮಂಡಳಿಯವರು ಭಜನೆಯನ್ನು ಮಾಡುತ್ತಾ ಗಂಗೆಯನ್ನು ವೇದಿಕೆಗೆ ಕರೆತಂದರು. ಗಂಗಾ ಸ್ತೋತ್ರದೊಂದಿಗೆ ಸಮಿತಿಯ ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರು ಗಂಗಾರತಿಯನ್ನು ಮಾಡಿದರು. ಸಾತತ್ಯವಾಗಿ ಕಳೆದ ಮೂರು ವರ್ಷಗಳಿಂದ ಮಚ್ಚೇಂದ್ರ ಕಲ್ಯಾಣಿಗೆ ಗಂಗಾರತಿಯನ್ನು ಮಾಡಿಕೊಂಡು ಬರಲಾಗುತ್ತಿದೆ.
ಒಳ್ಳೆಯ ಪರಿಣಾಮ ಎನ್ನುವಂತೆ ಮಚ್ಚೇಂದ್ರ ಕಲ್ಯಾಣಿಯ ಸ್ವಚ್ಚತೆಯು ಕೇವಲ ಗಂಗಾರತಿಯ ಸಮಯಕ್ಕೆ ಮಾತ್ರ ಸಿಮೀತವಾಗಿಲ್ಲ. ಕಲ್ಯಾಣಿಯೊಳಗೆ ಬೆಳೆದ ಗಿಡಗಂಟಿಗಳನ್ನು ತೆಗೆಯುವುದನ್ನು ಬಿಟ್ಟರೆ ಗಂಗಾರತಿಯ ಸಮಯದಲ್ಲಿ ಬೇರೆ ಯಾವ ಸ್ವಚ್ಚತಾ ಕಾರ್ಯವನ್ನೂ ಕೈಗೊಳ್ಳುವ ಅವಶ್ಯಕತೆಯೇ ಇಲ್ಲದಷ್ಟು ಸ್ವಚ್ಛವಾಗಿರುತ್ತದೆ. ವರ್ಷವೀಡೀ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ಜಿಲ್ಲಾ ಬೌದ್ಧಿಕ ಪ್ರಮುಖರಾದ ಉಮ್ಮಾಜಿ ಸಂಭಾಜಿ ಗೋಸಾವಿಯವರು ಪಂಚ ಪರಿವರ್ತನೆಯ ಕುರಿತು ಬೌದ್ದಿಕವನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಹೊರ ಊರಿನವರು ತಮ್ಮ ಊರಿನಲ್ಲಿಯೂ ಗಂಗಾರತಿಯನ್ನು ಮಾಡಲು ವಿನಂತಿಸಿದರು. ನದಿ, ಕೆರೆ, ಕಲ್ಯಾಣಿಗಳನ್ನು ಕೇವಲ ಪ್ರಕೃತಿಯ ಒಂದು ಭಾಗವೆಂದು ತಿಳಿಯದೇ, ನಮ್ಮ ಜೀವನದ್ದೇ ಭಾಗವೆಂದು ತಿಳಿದು, ಆರಾಧಿಸಿ ಪೂಜಿಸುವವರು ನಾವು. ಇಂತಹ ನದಿ, ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 