ಸಂಘದ ಲಾಭಕ್ಕಿಂತ ಸಂಘದಿಂದಾದ ಲಾಭ ಮುಖ್ಯ: ಲಕ್ಷ್ಮಣ ಸವದಿ

ಸಂಘದ ಲಾಭಕ್ಕಿಂತ ಸಂಘದಿಂದಾದ ಲಾಭ ಮುಖ್ಯ: ಲಕ್ಷ್ಮಣ ಸವದಿ Profit from the Sangh is more important than the profit of the Sangh: Lakshman Savadi

ಕಾಗವಾಡ, 07 : ಸಹಕಾರ ಸಂಘಗಳು ಎಷ್ಟು ಲಾಭದಲ್ಲಿವೆ ಎಂಬುದಕ್ಕಿಂತ ಎಷ್ಟು ಜನರಿಗೆ ಅದರಿಂದ ಲಾಭವಾಗಿದೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೃಷ್ಣಾ ಕಿತ್ತೂರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಲಾಭ ಸ್ವಲ್ಪ ಕಡಿಮೆಯಾದರೂ ಸಹ ಗ್ರಾಮದ ಪ್ರತಿಯೊಬ್ಬ ರೈತರಿಗೂ ಅದರಿಂದ ಬಹಳಷ್ಟು ಲಾಭವಾಗಿದ್ದು, ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂಘವು ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅಭಿಪ್ರಾಯ ಪಟ್ಟಿದ್ದಾರೆ. 

ಅವರು ರವಿವಾರ ದಿ. 07 ರಂದು ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ, ಮಾತನಾಡುತ್ತಿದ್ದರು. ನಾನು ಈ ಹಿಂದೆ ಸಹಕಾರ ಸಚಿವನಾಗಿದ್ದಾಗ ವೈಧ್ಯನಾಥನ ವರದಿಯನ್ನು ಜಾರಿಗೆ ತಂದು, ರಾಜ್ಯದಲ್ಲಿ ಹಾನಿಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಪುನಃಶ್ವೇತನಗೊಳಿಸಿಬೇಕೆಂಬ ಉದ್ದೇಶದಿಂದ ನಬಾರ್ಡ ಹಾಗೂ ರಾಜ್ಯ ಸರ್ಕಾರದಿಂದ ಸುಮಾರು 750 ಕೋಟಿ ರೂ. ಹಣವನ್ನು ಸಂಘಗಳಿಗೆ ಹಂಚಿಕೆ ಮಾಡಿದ್ದು, ಇದರಿಂದ ಸುಮಾರು 4883 ಸಹಕಾರಿ ಸಂಘಗಳು ಪುನಃಶ್ವೇತನಗೊಂಡಿವೆ ಎಂದರು. ಇದರಲ್ಲಿ ಅಥಣಿ ತಾಲೂಕಿಗೆ ಅತಿ ಹೆಚ್ಚು ಹಣ ಲಾಭವಾಗಿರುವುದು ಖುಷಿ ತಂದಿದೆ ಎಂದರು. 

ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, ಸಹಕಾರಿ ಚಳುವಳಿಗೆ 120 ವರ್ಷಗಳ ಇತಿಹಾಸವಿದ್ದು, ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ. ದೇಶದಲ್ಲಿ ಸುಮಾರು 34 ಲಕ್ಷ ಕುಟುಂಬಗಳು 23 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ ಪಡೆದು, ಈ ದೇಶದಲ್ಲಿ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದರು.  ದಿವ್ಯ ಸಾನಿಧ್ಯವನ್ನು ಕೃಷ್ಣಾ ಕಿತ್ತೂರ ಗುರುದೇವಾಶ್ರಮದ ಶ್ರೀ ಬಸವೇಶ್ವರ ಶ್ರೀಗಳು, ಗುಣದಾಳ ಕಲ್ಯಾಣ ಹಿರೇಮಠದ ಡಾ. ವಿವೇಕಾನಂದ ಸ್ವಾಮಿಗಳು ವಹಿಸಿ, ಆಶೀರ್ವಚನ ನೀಡಿದರು. 

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸುಭಾಷ ಪಾಟೀಲ ವಹಿಸಿದ್ದರು. ಅತಿಥಿಗಳಾಗಿ ಡಿಸಿಸಿ ಬ್ಯಾಂಕಿನ ತಾಲೂಕಾ ನಿಯಂತ್ರಣಾಧಿಕಾರಿ ಶಂಕರ ನಂದೇಶ್ವರ, ಅಧಿಕಾರಿಗಳಾದ ಶ್ರೀಶೈಲ ಯಡಹಳ್ಳಿ, ಸಂಜಯ ಗುಮತಾಜ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೋಡೆ, ನಿರ್ದೇಶಕರಾದ ವಿಶ್ವನಾಥ ಪಾಟೀಲ, ಸೌರಭ ಪಾಟೀಲ, ಶ್ರೀಶೈಲ ನಾಯಿಕ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಸಂಘದ ಉಪಾಧ್ಯಕ್ಷೆ ಪಾರ್ವತಿ ಮಂಟೂರ, ನಿರ್ದೇಶಕರಾದ ವಿಶ್ವನಾಥ ಪಾಟೀಲ, ಅಣ್ಣಾಸಾಬ ಪಾಟೀಲ, ಅಪ್ಪಾಸಾಬ ಕರಬಸನವರ, ಶ್ರೀಶೈಲ ತ್ರಿಕಾಣಿ, ಕಾಶಿಬಾಯಿ ಮೊಕಾಶಿ, ಮುನೀರ ಅಲಾಸೆ, ಸದಾಶಿವ ಶೇಗುಣಸಿ, ಗೋಪಾಲ ಕಾಂಬಳೆ, ಕಾಶಿನಾಥ ಕೋಳಿ, ಶೋಭಾ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಗುರುಪಾದ ಜತ್ತಿ ಸೇರಿದಂತೆ ಸಂಘದ ಎಲ್ಲ ಸದಸ್ಯರು, ಗ್ರಾಮಸ್ಥರು, ಸಹಕಾರಿ ಧುರೀಣರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಈರ​‍್ಪ ಜಂಬಗಿ ಸ್ವಾಗತಿಸಿದರು. ಶಿವಗೌಡ ಚೌಗುಲಾ ನಿರೂಪಿಸಿದರು. ವಿವೇಕ ಜತ್ತಿ ವಂದಿಸಿದರು.