ಪ್ರಧಾನ ಮಂತ್ರಿ ಯೋಜನೆಗಳು : ಚಿತ್ರ ಕಲೆ ಸ್ಪರ್ಧೆ
Prime Minister's Schemes: Art Competition
ಗದಗ 30: ನಗರದ ಪ್ರತಿಷ್ಠಿತ ಕೆ. ಎಲ್. ಇ.ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗದಗದಲ್ಲಿ,ಎನ್. ಎಸ್. ಎಸ್ ಘಟಕದ ವತಿಯಿಂದ ಇತ್ತೀಚಿಗೆ ಪ್ರಧಾನ ಮಂತ್ರಿ ಯೋಜನೆಗಳು ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಚಿತ್ರ ಕಲೆ ಸ್ಪರ್ಧೆಯನ್ನು ಸೋರಟೂರು ಗ್ರಾಮದ ತೋಂಟದಾರ್ಯ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿತ್ತು.ಪ್ರಧಾನ ಮಂತ್ರಿ ಯೋಜನೆಬಗ್ಗೆ ಅರಿವು ಮೂಡಿಸಲು ಮತ್ತು ಮಾಹಿತಿಯನ್ನು ನೀಡಲು ಎನ್. ಎಸ್. ಎಸ್. ತಂಡಗಳು ಈ ಸ್ಪರ್ಧೆಯನ್ನು ಶಾಲಾ ಮಕ್ಕಳಿಗೆ ನೇಡೆಸಿದರು,ಪ್ರಶಸ್ತಿ ವಿಜೇತರು ಈ ಕೆಳಗಿನಂತಿದ್ದಾರೆ: ಪ್ರಥಮ ಬಹುಮಾನ : ಫಜ್ರಾನ ಸಂಶಿ ದ್ವಿತೀಯ ಬಹುಮಾನ : ಕುಮಾರ. ಪ್ರದೀಪ ಲಮಾಣಿ ತೃತೀಯ ಬಹುಮಾನ : ಕುಮಾರಿ. ಮುಸ್ಕಾನ ಬಾಬುಖಾನವರ ಆ ಶಾಲೆಯ ಶಿಕ್ಷಕರು ತೀರ್ುಗಾರರಾಗಿ ಉಪಸ್ಥಿತರಿದ್ದರು, ಎನ್. ಎಸ್. ಎಸ್. ಕಾರ್ಯಕ್ರಮ ಅಧಿಕಾರಿ ಪ್ರೊ. ವಾಗೀಶ್ ಜಿ. ರೇಶ್ಮಿ, ಎನ್. ಎಸ್. ಎಸ್ ಘಟಕದ ಕಾರ್ಯನಿರ್ವಾಹಕರಾದ ಕುಮಾರಿ. ನೀಲಮ್ಮ ಸೀತಾರಳ್ಳಿ ಕುಮಾರ. ಆಕಾಶ ಕಳಗಣ್ಣನವರ, ಎನ್. ಎಸ್. ಎಸ್. ತಂಡಗಳ ನಾಯಕರು ಕುಮಾರ. ಮಹಾದೇವಪ್ಪ ಬೊಳನವರ, ಕುಮಾರ. ಪಕ್ಕೀರೇಶ ಒಂಟಿ ಮತ್ತು ಎನ್. ಎಸ್. ಎಸ್. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 