ಹೃದಯಾಘಾತಕ್ಕೆ ಮುಂಜಾಗ್ರತೆಯೇ ಮದ್ದು

ಹೃದಯಾಘಾತಕ್ಕೆ ಮುಂಜಾಗ್ರತೆಯೇ ಮದ್ದು  Prevention is the remedy for heart attacks

ತಾಳಿಕೋಟಿ 28 : ಇಂದು ಹೃದಯಾಘಾತದ ಪ್ರಕರಣಗಳು ದಿನದಿಂದ ದಿನ ಹೆಚ್ಚುತ್ತಲೇ ಇವೆ ಅದರಲ್ಲಿಯೂ ಯುವಜನತೆ ಇದಕ್ಕೆ ಹೆಚ್ಚಾಗಿ ಬಲಿಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಇದನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮ ವಹಿಸುವುದು ಅತ್ಯಗತ್ಯವಾಗಿದೆ ಎಂದು ಡಾ.ಸದಾನಂದ ಇಂಡಿ ಹೇಳಿದರು. ಭಾನುವಾರ ಪಟ್ಟಣದ   ಕಾಳಿಕಾದೇವಿ ದೇವಸ್ಥಾನದಲ್ಲಿ ಬಿ ಎಲ್ ಡಿ ಇ ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ವಿಜಯಪುರ ಮತ್ತು ಸೇಂಟ್ ಜಾನ್ ಆಂಬುಲೆನ್ಸ್‌ ತಾಳಿಕೋಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಸೇಂಟ್ ಜಾನ್ ಆಂಬುಲೆನ್ಸ್‌ ಉಪಾಧ್ಯಕ್ಷ ಡಾ.ವಿ.ಎಸ್‌. ಕಾರ್ಚಿ ಮಾತನಾಡಿ ಇಲ್ಲಿಯವರೆಗೆ ಸೇಂಟ್ ಜಾನ್ ಅಂಬುಲೆನ್ಸ್‌ ವತಿಯಿಂದ ಸುಮಾರು 7000 ಜನರಿಗೆ ಪ್ರಥಮ ಚಿಕಿತ್ಸೆ ಒದಗಿಸಲಾಗಿದೆ ಎಂದು ತಿಳಿಸಿದರು.  ಬಿಎಲ್ ಡಿಇ ವೈದ್ಯಕೀಯ ವಿಭಾಗದ ಆಡಳಿತಾಧಿಕಾರಿ ಶಾಂತೇಶ ಸಲಗರ ಮಾತನಾಡಿ, ಬಿ.ಎಮ್‌.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೆಚ್ಚಿನ ಆರೋಗ್ಯದ ಚಿಕಿತ್ಸೆಗಳ ಅವಶ್ಯಕತೆ ಇದ್ದರೆ ಅದನ್ನು ಉಚಿತವಾಗಿ ನಿರ್ವಹಿಸಲಾಗುತ್ತದೆ.  ಗರ್ಭಿಣಿಯರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದ ಅವರು ಚಿಕ್ಕ ಮಕ್ಕಳ ಹೃದಯದ ಚಿಕಿತ್ಸೆಗೆ ತಿಂಗಳಲ್ಲಿ ಎರಡು ಬಾರಿ ಬೆಂಗಳೂರಿನ ಖ್ಯಾತ ವೈದ್ಯರು ಬಿಎಲ್ ಡಿಇ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. 

ಹೀಗಾಗಿ ಯಾದಗಿರಿ,  ಕಲಬುರ್ಗಿ,  ವಿಜಯಪುರ,  ಬಾಗಲಕೋಟೆ ಜಿಲ್ಲೆಗಳ ಜನರು ಇದರಲಾಭ ಪಡೆಯುತ್ತಿದ್ದಾರೆ ಎಂದರು.  ವೇದಿಕೆಯಲ್ಲಿ ಡಾ.ಗಣೇಶ ಥರ್ಸೆ, ಡಾ.ಶಂಕರ ಕುರಳ್ಳಿ, ಡಾ.ಆಯಿಷಾ ಆಚಾರ್ಯ, ರವೀಕುಮಾರ ಪಾಟೀಲ, ಶ್ರೀನಿವಾಸ ಸೋನಾರ, ರಾಜು ಸಜ್ಜನ ಇತರರು ಇದ್ದರು.  ಕಾರ್ಯಕ್ರಮದಲ್ಲಿ ಡಾ.ಆನಂದ ಭಟ್,  ಡಾ.ಎ.ಎ.ನಾಲಬಂದ,  ಡಾ.ನಜೀರ ಕೋಳ್ಯಾಳ,  ಡಾ.ರವಿಕುಮಾರ ಅಗರವಾಲ,  ಡಾ.ಗಂಗಾಂಬಿಕಾ ಪಾಟೀಲ,  ಅಶೋಕ ಬಳಗಾನೂರ,  ರಾಮನಗೌಡ ಬಾಗೇವಾಡಿ, 

 ಚೌಧರಿ, ಗುರು ಸಜ್ಜನ,  ಕುಮಾರ ಸುರಪುರ ಉಪಸ್ಥಿತರಿದ್ದರು. ತಾಳಿಕೋಟೆ ಹಾಗೂ ಸುತ್ತಮುಲಿನತ್ತಲಿನ ಗ್ರಾಮಗಳ 110ಕ್ಕೂ ಹೆಚ್ಚು ಜನರು ಉಚಿತ ಹೃದಯ ಆರೊಗ್ಯ ತಪಾಸಣೆ ಶಿಬಿರದ ಸದುಪಯೊಗ ಪಡೆದುಕೊಂಡರು.  ಈ ಸಂದರ್ಭದಲ್ಲಿ ಉಚಿತವಾಗಿ ರಕ್ತ ತಪಾಸಣೆ,  ಬಿಪಿ ತಪಾಸಣೆ ಹಾಗೂ ಇಸಿಜಿಯನ್ನು ಮಾಡಿ, ಮಾತ್ರೆಗಳನ್ನು ಉಚಿತವಾಗಿ ನೀಡಿಲಾಯಿತು. ಶಿಕ್ಷಕ ಸಾಹೇಬಗೌಡ ಬಿರಾದಾರ ಸ್ವಾಗತಿಸಿದರು, ಸಾಹಿತಿ ಶ್ರೀಕಾಂತ ಪತ್ತಾರ ನಿರೂಪಿಸಿದರು. ಬಸವೇಶ್ವರ ಉತ್ಸವ ಸಮಿತಿ ಅಧ್ಯಕ್ಷ ಮಹಾಂತೇಶ ಮುರಾಳ ವಂದಿಸಿದರು.