ಕೇಂದ್ರ ಮತ್ತು ರಾಜ್ಯ ಸರ್ಕಾರ ಮಡಿವಾಳ ಸಮಾಜ ಎಸ್ಸಿಗೆ ಸೇರಿಸಲು ಮುಂದಾಗಲಿ ಅಧ್ಯಕ್ಷ ಹುಲುಗಪ್ಪ ಒತ್ತಾಯ

ಕೇಂದ್ರ ಮತ್ತು ರಾಜ್ಯ ಸರ್ಕಾರ ಮಡಿವಾಳ ಸಮಾಜ ಎಸ್ಸಿಗೆ ಸೇರಿಸಲು ಮುಂದಾಗಲಿ ಅಧ್ಯಕ್ಷ ಹುಲುಗಪ್ಪ ಒತ್ತಾಯ President Hulugappa urges central and state governments to take steps to include Madiwala community

 ಕಂಪ್ಲಿ 01:  ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ, ಕಂಪ್ಲಿ ತಾಲೂಕು ಮಡಿವಾಳರ ಸಮಾಜದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ  ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಅರ್ಥಪೂರ್ಣವಾಗಿ ಅಚರಿಸಲಾಯಿತು ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ ಮಾಡಿವಾಳ ಮಾಚಿದೇವರ ಅದರ್ಶ ತತ್ವಗಳನ್ನು ಜೀವನದಲ್ಲಿ ಆಳವಡಿಕೊಳ್ಳಿ ವಚನಗಳ ಸಂರಕ್ಷಕನ್ನಾಗುವುದರ  ಜೊತೆಗೆ ಕಾಯಕ ನಿಷ್ಟೆಯನ್ನು ಹೊಂದಿ ಶರಣರ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಈನಾಡು ಕಂಡ ಶ್ರೇಷ್ಠ ಮಹಾಶರಣ ಎಂದರು 

 ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಮಡಿವಾಳ ಹುಲುಗಪ್ಪ ಶೈಕ್ಷಣಿಕ ಮತ್ತು ಅರ್ಥಿಕ ಸಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದ್ದು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದವೇ ರಾಜ್ಯದಲ್ಲಿರುವ ಮಡಿವಾಳ ಸಮುದಾಯ ಗುರುತಿಸಿ ಎಸ್ಸಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು .ವಡ್ಡರಹಟ್ಟಿಯ ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಹುಲಿಗೇಶ್ ಬಾದರ್ಲಿ ಮಾತನಾಡಿ, ಮಡಿವಾಳ ಮಾಚಿದೇವರ., ಅವರ ವಿಚಾರಧಾರೆಯನ್ನು ಯುವಜನತೆಗೆ ತಿಳಿಸುವ ಅಗತ್ಯತೆಯಿದೆ ಎಂದರು. ಮಡಿವಾಳ ಸಂಘದ ಪದಾಧಿಕಾರಿಗಳಾದ ಕೆ.ವಿರುಪಾಕ್ಷಿ, ಅಯ್ಯೋದಿ ಹನುಮಂತಪ್ಪ, ಎಲ್‌ಐಸಿ ಈರಣ್ಣ, ಗೃಹರಕ್ಷಕ ದಳ ಸದಸ್ಯ ಈರಣ್ಣ, ರಾಜು, ಗಣೇಶ, ಕೃಷ್ಣ, ರಾಜೇಶ ಬಾದರ್ಲಿ, ಮಡಿವಾಳ ಸಮುದಾಯದವರು, ತಾಲೂಕು ಮಟ್ಟದ ಅಧಿಕಾರಿಗಳಿದ್ದರು.