ಫೆ. 13ಕ್ಕೆ ಬಂದ್ ಪೂರ್ವಭಾವಿ ಸಭೆ: ಅಲ್ಲಮಪ್ರಭು ಬೆಟ್ಟದೂರು ಬಲ್ಡೋಟ ವಿರೋಧಿ 103ನೇ ದಿನದ ಧರಣಿ ಸಂಪೂರ್ಣ

ಫೆ. 13ಕ್ಕೆ ಬಂದ್ ಪೂರ್ವಭಾವಿ ಸಭೆ: ಅಲ್ಲಮಪ್ರಭು ಬೆಟ್ಟದೂರು ಬಲ್ಡೋಟ ವಿರೋಧಿ 103ನೇ ದಿನದ ಧರಣಿ ಸಂಪೂರ್ಣ Pre-bandh meeting on Feb. 13: Allama Prabhu Bettadooru completes 103rd day of anti-Baldota sit-in

        ಕೊಪ್ಪಳ 10 : ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 103ನೇ ದಿನ ಪೂರೈಸಿತು.  ಈ ಸಂದರ್ಭದಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು  ಅವರು ಮಾತನಾಡಿ ಫೆ.24 ರಂದು ಕೊಪ್ಪಳ ಜಿಲ್ಲಾ ಕೇಂದ್ರ, ಭಾಗ್ಯನಗರ ಸಂಪೂರ್ಣ ಬಂದ್ ಮಾಡಲು ಪೂರ್ವಭಾವಿ ಸಭೆ ಕರೆಯಲು ನಿರ್ಣಯ ಮಾಡಲಾಗಿದೆ. ಇದರ ಯಶಸ್ವಿಗಾಗಿ ಶುಕ್ರವಾರ 13.02.2026ರಂದು ಬೆಳಗ್ಗೆ 11 ಗಂಟೆಗೆ ಪೂರ್ವಭಾವಿ ಸಭೆಯನ್ನು ನಗರದ ಲಕ್ಷಿ-್ಮ ಚಿತ್ರಮಂದಿರ ಪಕ್ಕದ ಮಹಾಂತಯ್ಮನಮಠ ಕಲ್ಯಾಣ ಮಂಟಪದಲ್ಲಿ ಸಭೆಯನ್ನು ಕರೆಯಲಾಗಿದೆ. ಇದುವರೆಗೆ ಹೋರಾಟ ಬೆಂಬಲಿಸಿದ ಎಲ್ಲಾ ಸಂಘ, ಸಂಸ್ಥೆ, ಸಮಾಜ ಮುಖಂಡರು, ಸಮುದಾಯ ನಾಯಕರು, ರಾಜಕೀಯ ಧುರೀಣರು, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಟ್ರಸ್ಟ್‌ ಚಾರಿಟಿಗಳು, ವಕೀಲರು, ಪರಿಸರ ಪ್ರೇಮಿಗಳು, ಸಾಹಿತಿ, ಚಿಂತಕರು, ಕನ್ನಡಪರ, ರೈತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿಗಳು ಹಾಗೂ ಪುರ ಪ್ರಮುಖರು ಈ ಸಭೆಗೆ ಆಗಮಿಸಬೇಕೆಂದು ಮನವಿ ಮಾಡಿಕೊಂಡರು. 

       103ನೇ ದಿನದ ಧರಣಿ ಬೆಂಬಲಿಸಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಕರಿಯಪ್ಪ ಗುಡಿಮನಿ ಮಾತನಾಡಿ 'ಹೋರಾಟ ಶತದಿನ ಪೂರೈಸಿದರು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೆ ಇಲ್ಲಿನ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಜನರ ಜೀವ ಮತ್ತು ಆರೋಗ್ಯಕ್ಕಿಂತ ಯಾವ ಅಭಿವೃದ್ಧಿಯೂ ದೊಡ್ಡದಲ್ಲ. ಇದನ್ನು ಜನ ಸಾಮಾನ್ಯರು ತಿಳಿಸಿ ಹೇಳಬೇಕೇ? ಭಾದಿತ ಹಳ್ಳಿಗಳ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಇದನ್ನು ಗಮನಿಸಬೇಕು. ರಾಜ್ಯದ ಮೂಲೆ ಮೂಲೆಯಿಂದ ಪ್ರಜ್ಞಾವಂತರು, ಖ್ಯಾತ ವ್ಯಕ್ತಿಗಳು ಹಳ್ಳಿ ಭೇಟಿ ಮಾಡಿ, ಆ ಜನರನ್ನು ಕಂಡು ಬಂದು ಕಣ್ಣೀರಾಗಿ ಬೆಂಬಲಿಸುತ್ತಿದ್ದಾರೆ. ಇದು ಸರ್ಕಾರಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಕೂಡಲೇ ಇಲ್ಲಿನ ಲಕ್ಷಗಟ್ಟಲೆ ಜನರ ಆರೋಗ್ಯ ಜೀವದ ದೃಷ್ಟಿಯಿಂದ ಬಲ್ಡೋಟ  ವಿಸ್ತರಣೆ ತಡೆದು ಆದೇಶ ಮಾಡಬೇಕು' ಎಂದರು.  ಧರಣಿಯಲ್ಲಿ ಹಿರಿಯ ಸಾಹಿತಿ ಎಚ್‌.ಎಸ್‌.ಪಾಟೀಲ್, ಕೃಷಿ ಬೆಲೆ ಆಯೋಗ ಸದಸ್ಯ ಡಿ.ಎಚ್‌.ಪೂಜಾರ,  

        ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ.ಎಂ.ಬಡಿಗೇರ, ಶಂಭುಲಿಂಗಪ್ಪ ಹರಗೇರಿ, ಶರಣು ಗಡ್ಡಿ, ಕಾಶಪ್ಪ ಚಲವಾದಿ, ಮಂಜುನಾಥ ಕವಲೂರು, ಶಿವಪ್ಪ ಜಲ್ಲಿ, ಎಸ್ ಮಹಾದೇವಪ್ಪ ಮಾವಿನಮಡು, ಗಂಗಾಧರ ಖಾನಾಪೂರ, ಗವಿಸಿದ್ದಪ್ಪ ಪೋಲಿಸ್ ಪಾಟೀಲ್, ಸುಭಾನ್ ಸಾಬ್ ನೀರಲಗಿ, ರಂಗಕರ್ಮಿ ಶರಣು ಶೆಟ್ಟರ್, ಬಿ.ಜಿ. ಕರಿಗಾರ, ವೀರನಗೌಡ ತಾವರಗೇರಾ, ಗಾಳೆಪ್ಪ ಪೂಜಾರ್, ರತ್ನಮ್ಮ ದೊಡ್ಡಮನಿ, ಬಸವರಾಜಪ್ಪ ಶೆಟ್ಟರ್, ಚೆನ್ನವೀರಯ್ಯ ಹಿರೇಮಠ, ಬೀಬಿಜಾನ್, ವೈ. ಸತ್ಯನಾರಾಯಣ, ಶಿವಸಂಗಪ್ಪ ವಣಗೇರಿ, ಬಸವರಾಜ ನರೇಗಲ್, ರಾಮಪ್ರಸಾದ್ ಮಂಜುನಾಥ, ಗುರ​‍್ಪ ಮುಂತಾದವರು ಪಾಲ್ಗೊಂಡರು. 


District Bachavo Andolana Samiti Environmental Protection Forum Meeting for Bandh