ವಾರ್ಷಿಕೋತ್ಸವದ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಪ್ರಶಸ್ತಿ ಪ್ರದಾನ

ವಾರ್ಷಿಕೋತ್ಸವದ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಪ್ರಶಸ್ತಿ ಪ್ರದಾನ Pratibha Puraskar and various awards presented at the anniversary ceremony

ಇಂಡಿ 03 :  ತಾಲ್ಲೂಕಿನ ಹೋರ್ತಿಯ ಸೋಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ಹ್‌ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ 2025-26 ನೇ ಸಾಲಿನ ವಾರ್ಷಿಕೋತ್ಸವದ ಹಾಗೂ ವಿವಿಧ ಆಟೋಟಗಳಲ್ಲಿ ಸಾಧನೆ ಗೈದ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮವನ್ನು ರೇವಣಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ ಜಿ ಸಾಹುಕಾರ ಅವರು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ನೀಡಿ ಮಾತನಾಡಿದ ಅವರು ಸಂಸ್ಕಾರವಿದ್ದರೆ ಅದೇ ಬಲದಿಂದ ಇತರರಿಗೆ ನೆರವಾಗುವ, ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಲು ಸಾಧ್ಯ.

ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟೆ? ಉನ್ನತ ಸ್ಥಾನದಲ್ಲಿದ್ದರೂ ಅಲ್ಲಿ ಯಶಸ್ಸು ಸಿಗಲಾರದು  ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೋರ್ತಿಯ  ಸೋಮೇಶ್ವರ ವಿದ್ಯಾವರ್ಧಕ ಸಂಘವು ಹಾಗೂ ಶ್ರೀ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ಹ್‌ ಪಬ್ಲಿಕ್ ಸ್ಕೂಲ್ ಈ  ಕೆಲಸ ಮಾಡುತ್ತಿದೆ.ಗಡ್ಡದ ಕುಟುಂಬದವರು ಸಾಧಕರ ಬೆನ್ನು ತಟ್ಟುವ ಸಲುವಾಗಿ ಸುಮಾರು ವರ್ಷದಿಂದಲೂ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡು ಬರುತ್ತಿದ್ದಾರೆ’ ಎಂದು ಹೇಳಿದರು.ಸಂಸ್ಥಾಪಕರಾದ ಬಿಬಿ ಗಡ್ಡದ ಅವರು ಮಾತನಾಡಿ ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಸಂಸ್ಕಾರ, ಶಿಸ್ತು ರೂಢಿಸಿಕೊಳ್ಳಬೇಕು,

ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸಬೇಕು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಚಿನ್ಮಯಾನಂದ, ಅಬ್ದುಲ್ ಕಲಾಂ ಅವರಂತ  ಪುಸ್ತಕಗಳನ್ನು ಓದಿ ಮಾರ್ಗದರ್ಶರನ್ನಾಗಿ ತೆಗೆದುಕೊಂಡು ನಮ್ಮ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಎಂದರು. ಸೋಮೇಶ್ವರ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ  ಅನೀತಾ ಬೊಸಗಿ ಅವರು ಮಾತನಾಡಿ ಸಮಾಜದಲ್ಲಿ ಬುದ್ಧಿವಂತರಿದ್ದರೂ ಒಳ್ಳೆಯ ಗುಣ ಹೊಂದಿದ ಮಕ್ಕಳು ಸಿಗುವುದು ಕಷ್ಟ. ಅಂಕ ಎಷ್ಟೆ? ಪಡೆದರೂ ಸಂಸ್ಕಾರ ಇಲ್ಲದಿದ್ದರೆ ಅಡ್ಡದಾರಿ ಹಿಡಿಯುವ ಸಾಧ್ಯತೆಯಿದೆ. ವಿದ್ಯಾರ್ಥಿದಿಸೆಯಲ್ಲಿ ಓದುವುದೇ ಮುಖ್ಯಗುರಿಯಾಗಬೇಕು. ಇದರ ಜತೆಗೆ ಸಮಾಜಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳುವುದೇ ಸಂಸ್ಕಾರ. ಶಾರೀರಿಕ ಬಲದಿಂದ ಇನ್ನೊಬ್ಬರಿಗೆ ತೊಂದರೆ ಯಾಗದಂತೆ ಬದುಕುವುದು ಕಲಿಯಬೇಕು ಎಂದು ಹೇಳಿದರು.

ಹೋರ್ತಿ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಎ ಬಿ ಪೂಜಾರಿ ಮಾತನಾಡಿ ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದರೇ  ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತೀ ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಪ್ರತಿಭೆ ಎಲ್ಲರಲ್ಲಿಯೂ ಇದೆ.ಆದರೆ ಈಗೀನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಇವೆರಡರ ನಡುವೆ ಸಾಮಾಜಿಕ ಜವಾಬ್ದಾರಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಇಂಟರ್ನ್ಯಾಷನಲ್ಹ್‌ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಪ್ರೊ. ಅಣ್ಣಪ್ಪ ಎಮ್ ಶಿರೂರ್ ಹಾಗೂ ಎಸ್ ಎಮ್ ಆಯ್ ಪಿ ಎಸ್ ಹೋರ್ತಿ ಗುರುವೃಂದ ಹಾಗೂ ಪಾಲಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.