ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ:ಹನುಮಂತಪ್ಪ

ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ:ಹನುಮಂತಪ್ಪ Pratibha Karanji is a great platform to bring out the hidden talent in children: Hanumanthappa

                        ಕೊಪ್ಪಳ 09: ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಲ್ಲಿ ಹಲವಾರು ಪ್ರತಿಭೆಗಳು ಅಡಗಿರುತ್ತದೆ ಅದನ್ನು ಹುಡುಕಿ ಹೂರ ತರಲು ಇಲಾಖೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ,ಎಚ್ ಹೇಳಿದರು, ಅವರು ಮಂಗಳವಾರ ನಗರದ ಮಿಲ್ಲತ್ ಪಬ್ಲಿಕ್ ಶಾಲೆ ಆವರಣದಲ್ಲಿ ಏರಿ​‍್ಡಸಿದ ಕೊಪ್ಪಳ ಕ್ಲಸ್ಟರ್ ಮಟ್ಟದ ಉರ್ದು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025 26ನೇ ಸಾಲಿನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮುಂದುವರಿದು ಮಾತನಾಡಿ ಉರ್ದು ಭಾಷೆ ಭಾರತೀಯರ ಭಾಷೆ ಇಲ್ಲಿಯೇ ಹುಟ್ಟಿ ಬೆಳೆದ ಅತ್ಯಂತ ಸೊಗಸಾದ ಭಾಷೆ, ಹೃದಯದ ಸಿಹಿ ಭಾಷೆ ,ಇದರಲ್ಲಿ ಸೂಫಿ ಸಂತರ ಸಾಹಿತ್ಯ ಸಂಸ್ಕೃತಿ ಉತ್ತಮ ಪರಂಪರೆ ಆಚಾರ ವಿಚಾರ ಅಡಗಿದೆ,

                     ಭಾಷೆಯು ಪರಸ್ಪರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಇದೊಂದು ಉತ್ತಮ ಸೇತುವೆ ಯಾಗಿದೆ, ಉರ್ದು ಭಾಷೆ ಅಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿಯೂ ಕೂಡ ಅಡ ಗಿರುವ ಉತ್ತಮ ಪ್ರತಿಭೆಗಳನ್ನು ಗುರುತಿಸಲು ಉರ್ದು ಶಾಲೆಗಳಿಗೂ ಸಹ ಇಲಾಖೆ ವತಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ ಇಂತಹ ಕಾರ್ಯಕ್ರಮ ಮಿಲ್ಲತ್ ಶಾಲೆಯಲ್ಲಿ ಆಯೋಜನೆಗೊಂಡಿರೋದು ನನಗೆ ತುಂಬಾ ಸಂತಸ ತಂದಿದೆ ಅಲ್ಪಸಂಖ್ಯಾತ ಸಮುದಾಯದ ಇಂತಹ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಪ್ರೋತ್ಸಾಹಿಸಲು ಉತ್ತಮ ವೇದಿಕೆ ಮಾಡಿಕೊಡಲು ಮುಂದೆ ಬರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ , ಎಚ್ ಅಭಿಪ್ರಾಯ ಪಟ್ಟರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ನಗರಸಭೆಯ ಅಧ್ಯಕ್ಷ ಹಾಗೂ ಮಿಲ್ಲತ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಅಮ್ಜದ್ ಪಟೇಲ್  ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯ,

                     ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆ ಗಳಾಗಿದ್ದು ಅವರ ಭವಿಷ್ಯ ಉಜ್ವಲ ಗೊಳ್ಳಲು ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದ ಅವರು ಇಲ್ಲಿಯ ಉರ್ದು ಶಾಲೆಯ ಬೆಳವಣಿಗೆ ಮತ್ತು ಸರಕಾರದಿಂದ ಸಿಗುವ ಸೌಕರ್ಯಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಇಲಾಖೆ ಸಚಿವ ರೊಂದಿಗೆ ಮತ್ತು ಸ್ಥಳೀಯ ಶಾಸಕ ರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಹಣಕಾಸಿನ ನೆರವು ಮತ್ತು ಸೌಕರ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು, ಸಮಾರಂಭದಲ್ಲಿ  ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣ ಬಸವನಗೌಡ ಪಾಟೀಲ್ ಮತ್ತು ನೌಕರ ಸಂಘದ ಕಾರ್ಯ ಅಧ್ಯಕ್ಷ ಬಿರ​‍್ಪ  ಅಂಡಗಿ  ಮಾತನಾಡಿದರು,ಪ್ರಶಸ್ತಿ ಪುರಸ್ಕೃತ ಶಿಕ್ಷಕರುಗಳಾದ ಬೀರ​‍್ಪ ಅಂಡಗಿ ಸೇರಿದಂತೆ ಸಲ್ಮಾ ಬೇಗಠ ಪಠಾನ್ ಮತ್ತು ಸುಜಾತ ರವರಿಗೆ ಸನ್ಮಾನಿಸಲಾಯಿತು, ಉರ್ದು ಸಿಆರ್ ಪಿ, ಮೈನುದ್ದೀನ್ ಅತ್ತಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕರಾದ ಕೆ, ಎಂ, ಅಲಿ ರವರು ಕಾರ್ಯಕ್ರಮ ನಿರೂಪಿಸಿದರು,

                       ವೇದಿಕೆ ಮೇಲೆ ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ್, ಬಿ ಆರ್ ಸಿ ಸಂಯೋಜಕ ಸೈಯದ್ ಮಹಿಬೂಬ್ ಹುಸೇನ್, ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೋಳಿ ಬಸಯ್ಯ, ಶಿಕ್ಷಕರ ಸಂಘದ ನಿರ್ದೇಶಕರಾದ ನಫೀಸ ಪಠಾನ್, ಮಹಿಳಾ ಪ್ರತಿನಿಧಿ ವಾಹಿದಾ ಬೇಗಮ್, ಶಿಕ್ಷಕರ ಸಂಘದ ನಿರ್ದೇಶಕರಾದ ಶರಣಪ್ಪ ರೆಡ್ಡೇರ್, ಸಿ ಆರ್ ಪಿ ರೇವಣಸಿದ್ದಪ್ಪ ಮತ್ತು ಸೈಲಾನಿ ಭಾಷಾ ನಿವೃತ್ತ ಪ್ರಾಧ್ಯಾಪಕ ಹಾಗೂ ಉರ್ದು ಸಾಹಿತಿ ಅನ್ವರ್ ಹುಸೇನ್, ಮತ್ತು ಹಿರಿಯ ಸಮಾಜ ಸೇವಕ ಎಂಎ ಮಾಜಿದ ಸಿದ್ದಿಕಿ  ಅಲ್ಲದೆ ಅಂಜುಮನ್ ಕಮಿಟಿ ಅಧ್ಯಕ್ಷ ಹಾಗೂ ಶಾಲೆಯ ನಿರ್ದೇಶಕ ಎಂ, ಡಿ ಆಸಿಫ್ ಕರಕಿಹಳ್ಳಿ, ಮಿಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಸೈಯದ್ ಗೌಸ್ ಪಾಷಾ ಖಾಜಿ, ಹಿರಿಯ ಪತ್ರಕರ್ತ ಹಾಗೂ ಶಾಲೆಯ ನಿರ್ದೇಶಕ ಎಂ ಸಾಧಿಕ್ ಅಲಿ,  ಶಾಲೆಯ ನಿರ್ದೇಶಕ ಎಂ ಡಿ ಜಹೀರ್ ಅಲಿ ಮತ್ತು ಬಶೀರ್ ಅಹಮದ್ ಅತ್ತಾರ್ ,

                      ಶಾಲೆಯ ಕಾರ್ಯನಿರ್ವಾಹಕ ಸಂಚಾಲಕರಾದ ಅಬ್ದುಲ್ ಅಜೀಜ್ ಮಾನ್ವಿ ಕರ್ ಹಾಗೂ ಸೈಯದ್ ಇಮಾಮ್ ಹುಸೇನ್ ಸಿಂದೋಗಿ ಸೇರಿದಂತೆ ಕೊಪ್ಪಳ ತಾಲೂಕಿನ ಉರ್ದು ಕ್ಲಸ್ಟರ್ ಮಟ್ಟದ ಒಟ್ಟು 17ಶಾಲೆಯ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಮಿಲ್ಲತ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್  ರೇವಡಿ ಕೊನೆಯಲ್ಲಿ ವಂದಿಸಿದರು, ನಂತರ ಪ್ರತಿಭಾ ಕಾರಂಜಿ ಕಲೋತ್ಸವ 2025 26 ಕಾರ್ಯಕ್ರಮ ವಿವಿಧ ಸ್ಪರ್ಧೆಗಳು ಜರುಗಿತು, ವಿವಿಧ ಶಾಲೆಯ ಶಿಕ್ಷಕರು ನಿರ್ಣಾಯಕ ರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,ಒಟ್ಟಾರೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ಜರುಗಿತು ಸದರಿ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಮಿಲ್ಲತ್ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರು  ಉರ್ದು ಸಿ ಆರ್ ಪಿ ಮೈನುದ್ದೀನ್ ಅತ್ತಾರ್  ಅವರ ನೇತೃತ್ವದಲ್ಲಿ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ಮೈನುದ್ದಿನ್ ಅತ್ತಾರ್ ರವರಿಗೆ ವಿಶೇಷವಾಗಿ ಸತ್ಕರಿಸಿ ಅವರನ್ನು ಅಭಿನಂದಿಸಲಾಯಿತು,