ರಂಭಾಪೂರಿ ಶ್ರೀಗಳಿಂದದರ್ಶನ ಪಡೆದ ಪ್ರಲ್ಹಾದಜೋಷಿ
Pralhad Joshi received darshan from Rambhapuri Shri
ರಂಭಾಪೂರಿ ಶ್ರೀಗಳಿಂದದರ್ಶನ ಪಡೆದ ಪ್ರಲ್ಹಾದಜೋಷಿ
ಶಿಗ್ಗಾವಿ 14: ಬಂಕಾಪೂರ ಪಟ್ಟಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅರಳೇಲೆ ಮಠಕ್ಕೆ ಬೇಟಿ ನೀಡಿ, ರಂಭಾಪೂರಿ ಜಗದ್ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ನಂತರ ಜಗದ್ಗುರುಗಳೊಂದಿಗೆ ನಡೆದ ಸೌಹಾರ್ದ ಚರ್ಚೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮಠಹಿಮಂದಿರಗಳ ಮೇಲಿನ ಅನಗತ್ಯ ಅಪವಾದಗಳು ಮತ್ತು ಧಾರ್ಮಿಕ ಕೇಂದ್ರಗಳ ಬಗ್ಗೆ ಕೆಲವು ವಲಯಗಳಲ್ಲಿ ಹಬ್ಬುತ್ತಿರುವ ತಪ್ಪು ಕಲ್ಪನೆಗಳ ಕುರಿತು ಉಲ್ಲೇಖಿಸಿಜಗದ್ಗುರುಗಳು ಹಿಂದೂ ಮಠ ಮತ್ತು ಮಂದಿರಗಳ ಐತಿಹಾಸಿಕ ಮಹತ್ವ, ಸಮಾಜಕ್ಕೆ ನೀಡುತ್ತಿರುವ ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆಗಳನ್ನು ವಿವರಿಸಿದರು.ಹಿಂದೂ ಮಠಹಿಮಂದಿರಗಳ ಹಿತಾಸಕ್ತಿಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸಲು ವಿಶೇಷ ಕಾನೂನು ರೂಪಿಸಲು ಅಗತ್ಯವಿದೆ ಎಂದು ಕೇಂದ್ರ ಸಚಿವರಿಗೆ ಸಲಹೆ ನೀಡಿದರು. ಪ್ರಲ್ಹಾದ ಜೋಷಿಯವರು ಜಗದ್ಗುರುಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿ, ಧಾರ್ಮಿಕ ಕೇಂದ್ರಗಳ ರಕ್ಷಣೆಗೆ, ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಲು ಮೋದಿ ಸರ್ಕಾರ ಬದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ಭಾಜಪ ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 