ಅಧಿಕಾರವನ್ನ ಬಯಸದ ಸರಳ ಸಜ್ಜನಿಕೆ ರಾಜಕಾರಣಿ ಪ್ರಲ್ಹಾದ ಜೋಷಿ : ಡಾ ಶ್ರೀನಿವಾಸ ಜೋಷಿ

ಅಧಿಕಾರವನ್ನ ಬಯಸದ ಸರಳ ಸಜ್ಜನಿಕೆ ರಾಜಕಾರಣಿ ಪ್ರಲ್ಹಾದ ಜೋಷಿ : ಡಾ ಶ್ರೀನಿವಾಸ ಜೋಷಿ  Pralhad Joshi is a simple gentleman politician who does not seek power: Dr. Srinivas Joshi

                            ಶಿಗ್ಗಾವಿ 28 : ಯಾವತ್ತು ಅಧಿಕಾರವನ್ನ ಬಯಸದ ಸರಳ ಸಜ್ಜನಿಕೆಯಿಂದ ರಾಜಕಾರಣದಲ್ಲಿ ಹೆಸರು ಮಾಡುವ ಮೂಲಕ ಪ್ರಧಾನ ಮಂತ್ರಿಗಳೊಂದಿಗೆ ದೇಶವನ್ನ ಮುನ್ನಡೆಸಿಕೊಂಡು ಹೋಗುವ ಬಹು ದೊಡ್ಡ ಜವಾಬ್ದಾರಿ ಹೊತ್ತ ನಾಯಕ ಪ್ರಲ್ಹಾದ ಜೋಷಿ ಎಂದು ಹುಬ್ಬಳ್ಳಿಯ ಎಮ್ ಎಮ್ ಜೋಷಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ ಶ್ರೀನಿವಾಸ ಜೋಷಿ ಹೇಳಿದರು.  ತಾಲೂಕಿನ ಗಂಜೀಗಟ್ಟಿಯ ಶಿಚರಮೂರ್ತೇಶ್ವರ ಸಭಾಭವನದಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಷಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾದನಗೈದ ಸಾಧಕರಿಗೆ ಪ್ರಲ್ಹಾದ ಜೋಷಿಯವರ ಅಭಿಮಾನಿ ಬಳಗದ ವತಿಯಿಂದ ಜರುಗಿದ ಸನ್ಮಾನ ಸಮಾರಂಭ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಶಿಗ್ಗಾವಿ ಸವಣೂರ ಕ್ಷೇತ್ರವನ್ನ ಅಂದತ್ವ ಮುಕ್ತ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ದೃಷ್ಟಿ ಕೇಂದ್ರ ಸವಣೂರಿನಲ್ಲಿ ಮಾಡಿದ್ದಾರೆ ಅಲ್ಲದೇ ಸೂಕ್ತ ವ್ಯಕ್ತಿಗಳಿಗೆ ಸೂಕ್ತ ಸ್ಥಳದಲ್ಲಿ ಅವಶ್ಯಕ ವ್ಯವಸ್ತೆಗಳನ್ನು ಮಾಡಿದರೆ ಮಾತ್ರ ಸಮಾಜದಲ್ಲಿ ಒಂದು ಒಳ್ಳೆಯ ಕಾರ್ಯಮಾಡಿದಂತಾಗುತ್ತದೆ ಎಂದರು.   

                        ಪ್ರಹ್ಲಾದ ಜೋಷಿ ಸಮತಾ ಟ್ರಸ್ಟ ವತಿಯಿಂದ ಇದುವರೆಗೆ 250 ಕ್ಕೂ ಹೆಚ್ಚು ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿ ಅದರಲ್ಲಿ ಹತ್ತು ಸಾವಿರ ಜನರಿಗೆ ಉಚಿತ ಚಿಕಿತ್ಸೆ ಮಾಡುವ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದಾರೆ ಎಂದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಮಾತನಾಡಿ ಸಮಾಜದ ಎಲ್ಲ ಜನರೊಂದಿಗೆ ಬೇರೆಯುವರ ಜೊತೆಗೆ ಶಿಗ್ಗಾಂವಿ ಸವಣೂರ ಕ್ಷೇತ್ರ ದೇಶದಲ್ಲಿ ಹೆಸರು ಮಾಡಿರುವ ಕೀರ್ತಿ ಪ್ರಲ್ಹಾದ ಜೋಷಿ ಹಾಗೂ ಬಸವರಾಜ ಬೊಮ್ಮಾಯಿಗೆ ಸಲ್ಲುತ್ತದೆ ಅಲ್ಲದೇ ಮನೆ ಮನೆಗೆ ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ, ಸರಕಾರಿ ಶಾಲೆಗಳಿಗೆ ಬಣ್ಣದರ​‍್ಣ ಯೋಜನೆಗಳನ್ನ ಮಾಡಿರುವ ಕೀರ್ತಿ ಜೋಷಿಯವರಿಗೆ ಸಲ್ಲುತ್ತದೆ ಎಂದರು.  ರೈತರು ಬೆಳೆದ ಕೇಂದ್ರದಿಂದ ಬೆಂಬಲ ಬೆಲೆ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹಿಸುವ ಮೂಲಕ ದೂರದೃಷ್ಟಿಯ ನಾಯಕ ಪ್ರಲಾದ ಜೋಷಿ ಎಂದು ಮಾಜಿ ಜಿ. ಪಂ ಸದಸ್ಯ ಶಶಿಧರ ಹೋಣ್ಣಣ್ಣವರ ಹೇಳಿದರು.ಹುಬ್ಬಳ್ಳಿ ಎಮ್ ಎಮ್ ಜೋಷಿ ಆಸ್ಪತ್ರೆ ಮುಖ್ಯ ವೈದ್ಯ ಡಾ ಶ್ರೀನಿವಾಸ ಜೋಷಿ, ಮುಖಂಡರಾದ ನರಹರಿ ಕಟ್ಟಿ, ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ತಿಪ್ಪಣ್ಣ ಸಾತಣ್ಣವರ, ಕಲ್ಲಪ್ಪ ಮಾರಂಬೀಡ, ಡಾ ಮಲ್ಲೇಶಪ್ಪ ಹರಿಜನ, ಅನೀಲ ಸಾತಣ್ಣವರ, ಲಕ್ಷ್ಮೀ ತೋಟದ, ಸಚೀನ ಮಡಿವಾಳರ, ಯಶೋಧಾ ಪಾಟೀಲ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರೇಣುಕನಗೌಡ ಪಾಟೀಲ ಸ್ವಾಗತಿಸಿದರು. ರಮೇಶ ಓಲೇಕಾರ ನಿರೂಪಿಸಿ, ವಂದಿಸಿದರು.