ಬಡ ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗಬಾರದು - ಜಿ.ಎಸ್. ರಾಮಚಂದ್ರ
Poor girls should not be deprived of education - G.S. Ramachandra
ರಾಣೇಬೆನ್ನೂರ:23 ಸಮಾದಲ್ಲಿ ಜೀವನ ಸಾಗಿಸುವ ಪ್ರತಿಯೊಬ್ಬ ಮಾನವ ಜೀವಿಯು ಯಾವುದೇ ಮಡಿವಂತಿಕೆ ಅಥವಾ ಸಂಕೋಚತೆ ಇಲ್ಲದೆ ಸಮಾನತೆಯಿಂದ ಶಿಕ್ಷಣ ಮತ್ತು ಗೌರವಯುತ ಜೀವನ ಸಾಗಿಸುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಡಳಿತ ನಿರ್ದೇಶಕ ಜಿ.ಎಸ್. ರಾಮಚಂದ್ರ ಹೇಳಿದರು. ಅವರು ರವಿವಾರ ಇಲ್ಲಿನ ಆಂಗ್ಲೋ ಉರ್ದು ಪ್ರೌಢಶಾಲಾ ಭವನದಲ್ಲಿ ವನಸಿರಿ ಸಂಸ್ಥೆ ಮತ್ತು ಬೆಂಗಳೂರು ಚಿಲ್ಡ್ರನ್ ಇಂಡಿಯಾ ಫೌಂಡೇಶನ್, ದೇವದಾಸಿ ಕುಟುಂಬದ ಹೆಣ್ಣುಮಕ್ಕಳ ಶಿಕ್ಷಣ ಸುಧಾರಣೆಗಾಗಿ ಗುಡ್ ಯೋಜನೆಯಲ್ಲಿ ಕಿಶೋರಿಯರಿಗೆ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಬಡವರು, ಶ್ರೀಮಂತರು ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳು, ಉದ್ಯಮಿಗಳು ಇದ್ದಾರೆ. ಇದ್ದವರು ಇಲ್ಲದವರಿಗೆ ತಮ್ಮ ಸಹಾಯಕ ನೀಡುವುದೇ ನಿಜವಾದ ಮಾನವೀಯ ಧರ್ಮವಾಗಿದೆ ಎಂದರು. ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಕಲಿಯಬಹುದು. ಕಲಿಯುವ ಇಚ್ಛೆ ಇದ್ದರೂ, ಅನೇಕ ಸಮಸ್ಯೆಗಳಿಂದ ಶಿಕ್ಷಣದಿಂದ ದೂರ ಉಳಿಯುವುದೇ ಹೆಚ್ಚಾಗಿದೆ. ಯಾವುದೇ ಕಾರಣಕ್ಕೂ ಮಹಿಳೆಯರು ಶಿಕ್ಷಣ ಕಲಿಯುವುದನ್ನು ಬಿಡಬಾರದು. ಎಂದು ಕರೆ ನೀಡಿದರು. ಭವಿಷ್ಯದ ದಿನಗಳಲ್ಲಿ ಸಾಮಾಜಿಕ ಸೇವೆಯೇ ಮುಖ್ಯ ಗುರಿಯಾಗಿರಿಸಿಕೊಂಡಿರುವ ತಮ್ಮ ವನಸಿರಿ ಮತ್ತು ರೋಟರಿ ಸಂಸ್ಥೆಯು ವ್ಯಕ್ತಿತ್ವ ವಿಕಾಸತೆ ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು.
ವನಸಿರಿ ಕೋಶಾಧ್ಯಕ್ಷ ಹಬೀಬ್ ಬಾನು ಹಾನಗಲ್ ಅವರು, ದೇಶದಲ್ಲಿ ಬಹುತೇಕವಾಗಿ ಕುಟುಂಬದಲ್ಲಿ ತಲೆದೋರುವ ಬಡತನ, ಶಿಕ್ಷಣದ ಅಲಕ್ಷತನ ಕಾರಣದಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ಕಾಣುತ್ತಿದ್ದೇವೆ. ಹೆಣ್ಣು ಮಕ್ಕಳು ದೃತಿಗೆಡದೆ, ಗುರಿ ಮತ್ತು ಗುರುವಿನ ಹಾಗೂ ಸಂಘ ಸಂಸ್ಥೆಗಳ ಕೊಡ ಮಾಡುವ ಸಹಾಯವನ್ನು ಪಡೆದು ಕಷ್ಟ - ಮತ್ತು ಇಷ್ಟ ಪಟ್ಟು ವಿಧ್ಯಬ್ಯಾಸ ಮಾಡಿ ಗುರಿ ಸಾಧಿಸಲು ಮುಂದಾಗಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ "ವನಸಿರಿ" ಸಂಸ್ಥೆ ಕಾರ್ಯನಿರ್ವಾಹಕ ಎಸ್. ಡಿ. ಬಳಿಗಾರ ಅವರು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಶಶಕ್ತಿಕರಣ ಯೋಜನೆಯು ಜಾರಿಯಲ್ಲಿದ್ದು, ಬಡ ಮಕ್ಕಳಿಗೆ ಪ್ರತಿ ವರ್ಷವೂ ತನ್ನ ಯೋಜನೆಯಲ್ಲಿ ಶಿಕ್ಷಣ ಸಾಮಗ್ರಿ, ಟ್ಯೂಷನ್, ಸ್ಕಾಲರ್ ಶಿಪ್, ಮತ್ತಿತರೆ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ಪರಿಪೂರ್ಣತೆಗೆ ಮುಂದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕ್ಕೆ ತರನುಮ ಖತಿಬ್, ಗಣಿತ ಶಿಕ್ಷಕ ಶಬ್ಬೀರ್ ಅಹ್ಮದ್, ವಿಜ್ಞಾನ ಶಿಕ್ಷಕಿ ಅಲಿಯಾ ಅಂಜುಮ್ ಮತ್ತಿತರೆ ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು. ಉಪಸ್ಥಿತರಿದ್ದರು. ಪ್ರಶಕ್ತ ಸಾಲಿನಲ್ಲಿ ಬಡ ಹಾಗೂ ಪ್ರತಿಭಾವಂತ 100 ಹೆಣ್ಣು ಮಕ್ಕಳಿಗೆ ಸಮಗ್ರ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 