ಚುನಾವಣೆ ವೇಳೆ ರಾಜಕಾರಣಿಗಳ ಭದ್ರತೆ ಸೇನೆಯ ಜವಾಬ್ದಾರಿಯಲ್ಲ'


ಇಸ್ಲಾಮಾಬಾದ್ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ರಂಗೇರುತ್ತಿದ್ದು, ಯಾವುದೇ ರಾಜಕಾರಣಿಗಳ ಭದ್ರತೆಗೆ ನೇರವಾಗಿ ಸೇನೆ ಜವಾಬ್ದಾರಿಯಲ್ಲ ಎಂದು ಪಾಕ್ ಸೇನಾ ಮಹಾ ನಿರ್ದೇಶಕ(ಅಂತರ-ಸೇವೆ ಸಾರ್ವಜನಿಕ ಸಂಪರ್ಕ) ಮೇಜರ್ ಜನರಲ್ ಆಸಿಫ್ ಘಫೂರ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಇಂದು ಸೆನೆಟ್ ಕ್ರಿಯಾ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿದ ಜನರಲ್ ಘಫೂರ್ ಅವರು, ಪಾಕಿಸ್ತಾನ ಚುನಾವಣಾ ಆಯೋಗ ನೀಡುವ ಸೂಚನೆಯನ್ನು ಮಾತ್ರ ಸೇನೆ ಪಾಲಿಸುತ್ತದೆ ಎಂದು ಹೇಳಿದ್ದಾರೆ.

ಚುನಾವಣೆ ವೇಳೆ ಯಾವುದೇ ರಾಜಕಾರಣಿಯ ಭದ್ರತೆಯ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತಿಲ್ಲ. ರಾಜಕೀಯ ಅಭ್ಯರ್ಥಿಗಳ ಭದ್ರತೆಯೆ ಜವಾಬ್ದಾರಿ ಸರ್ಕಾರ ಸಂಬಂಧಿಸಿದ್ದು ಎಂದು ತಿಳಿಸಿದ್ದಾರೆ.

ಚುನಾವಣೆ ವೇಳೆ ನಾವು ಚುನಾವಣಾ ಆಯೋಗಕ್ಕೆ ಮಾತ್ರ ಸಹಕಾರ ನೀಡುತ್ತೇವೆ ಎಂದು ಘಫೂರ್ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.