ಕಾವ್ಯಕ್ಕೆ ಅದರದೇ ಆದ ಸೌಂದರ್ಯವಿದೆ: ಡಾ.ಟಿ.ಎಂ.ಭಾಸ್ಕರ್

ಧಾರವಾಡ : ಕಾವ್ಯದ ಸಾಲು ಭಾವಲೋಕದ ಅತ್ಯಂತ ಶ್ರೀಮಂತಿಕೆಯ ಪ್ರವೇಶಿಕೆಯಾಗಿದೆ. ಆ ಪ್ರವೇಶಿಕೆಯು ಸುಗಮವಾಗಬೇಕಾದರೆ ಕಾವ್ಯಕ್ಕೆ ಅದರದೇ ಆದ ಸೌಂದರ್ಯವಿದೆ. ಆ ಸೌಂದರ್ಯವು ಭಾವತರಂಗ, ಭಾವರೂಪದಂತಹ ಅಂತರಿಕ ಗುಣಗಳನ್ನು ಹೊಂದಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕಲಾ ನಿಖಾಯದ ಡೀನರು ಮತ್ತು ಹಿರಿಯ ಪ್ರಾಧ್ಯಾಪಕ ಡಾ.ಟಿ.ಎಂ.ಭಾಸ್ಕರ್ ಅಭಿಪ್ರಾಯಪಟ್ಟರು. 

ಅವರು ಗಣಕರಂಗ ಸಂಸ್ಥೆ ಇತ್ತೀಚೆಗೆ ದಿ. ಆಯೋಜಿಸಿದ್ದ ಸಾಮಾಜಿಕ ಪರಿವರ್ತನ ಚಳುವಳಿಗಾರರ ಸ್ಮರಣೆಯಲ್ಲಿ ಸಾಮಾಜಿಕ ಶಾಂತಿ ಮತ್ತು ಮೈತ್ರಿಗಾಗಿ ತ್ರಿಬಿ ನೆನಪಿನ ಕವಿಗೋಷ್ಟಿ ಮತ್ತು ಗಣಕರಂಗ ಪ್ರಕಾಶನದ ಹೊಸ ಪ್ರಕಟಣೆಗಳಾದ "ಹೂ ಹಾಸಬೇಕಿದೆ" ಮತ್ತು "ಮಾತೃಭೂಮಿ" ಕವನಸಂಕಲನಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು. 

ಸಾಯುವುದಕ್ಕೆ ವಿಷವೇ ಬೇಕಿಲ್ಲ ಎಂಬ ಗಜಲ್ ಮಾತಿನಂತೆ ಸಹೃಹದಯ ಓದುಗನಿಗೆ ಮನಮುಟ್ಟುವಂಥಹ ಕಾವ್ಯ ರಚನೆಯು ಜೋಳ ಮುಗಿದಿದೆ ; ಭಾವ ಉಳಿದಿದೆ ಎಂಬಂತಿರಬೇಕು. ಅಮ್ಮನ ಅಮೃತಬಿಂಧುವಿನಂತೆ ಕಾವ್ಯ ಎಲ್ಲರಿಗೂ ಸವಿಯಾಗುವಂತಿರಬೇಕು ಎಂದು ವಿವರಿಸಿದರು. 

ಗಣಕರಂಗ ಪ್ರಕಾಶನದ ಎರಡೂ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕನರ್ಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಿಕೇರಿಯವರು, ಇಂದು ಲೋಕಾರ್ಪಣೆಗೊಂಡ ಹೂ ಹಾಸಬೇಕಿದೆ ಮತ್ತು ಮಾತೃಭೂಮಿ ಕೃತಿಗಳ ಮೂಲಕ ಸಾಮಾಜಿಕ ಜಾಗೃತಿಗೆ ಪ್ರಯತ್ನಿಸಿರುವುದು ಕಂಡು ಬರುತ್ತಿದೆ. ಮಾತೃಭೂಮಿ ಯಾರದು ಎಂಬ ಚಚರ್ೆ ನಡೆದಿರುವ ಸಂದರ್ಭದಲ್ಲಿ ಈ ಕೃತಿಗಳು ಲೋಕಾರ್ಪಣೆ ಆಗುತ್ತಿರುವುದು ಬಹಳ ಸಮಂಜಸವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು. 

ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿಯವರು ಮಾತನಾಡುತ್ತಾ ಸಮೃದ್ಧವಾಗಿರುವ ಕನ್ನಡ ಸಾಹಿತ್ಯ ಪರಂಪರೆಗೆ ಇಂದು ಲೋಕಾರ್ಪಣೆಗೊಂಡ ಎರಡೂ ಕೃತಿಗಳು ತಮ್ಮ ವಿಶಿಷ್ಟ ಧ್ವನಿಯ ಮೂಲಕ ನಾಡು, ನುಡಿಯ ಕುರಿತು ಕಾಳಜಿ ಹೊಂದಿವೆ ಎಂದು ಹೇಳಿದರು. ಸಿದ್ಧರಾಮ ಹಿಪ್ಪರಗಿ ಅವರ ಹೂ ಹಾಸಬೇಕಿದೆ ಕೃತಿಯನ್ನು ಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾತರ್ಾಂಡಪ್ಪ ಕತ್ತಿ ಮತ್ತು ಗಣಪತಿ ಚಲವಾದಿಯವರ ಮಾತೃಭೂಮಿ ಕೃತಿಯನ್ನು ರಂಗಕಮರ್ಿ ಯೋಗೇಶ ಪಾಟೀಲ ಪರಿಚಯಿಸಿದರು. 

ವೇದಿಕೆಯಲ್ಲಿ ಚಿಂತಕ ಲಕ್ಷ್ಮಣ ಬಕ್ಕಾಯಿ, ಮಯೂರವರ್ಮ ಯುವ ಸಾಹಿತಿ ಪ್ರಶಸ್ತಿ ಪುರಸ್ಕೃತ ಗಣಪತಿ ಚಲವಾದಿ, ಬಿಎಂಟಿಸಿ ಕನ್ನಡ ಕ್ರಿಯಾ ಸಮಿತಿಯ ಚಿಕ್ಕತಿಮ್ಮಯ್ಯ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಕೊನೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕವನ ವಾಚಿಸಿದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳಿಗೆ ಪ್ರಮಾಣಪತ್ರ, ಗೌರವ ನೀಡಲಾಯಿತು. ಗಣಕರಂಗದ ಹಿಪ್ಪರಗಿ ಸಿದ್ಧರಾಮ ನಿರೂಪಿಸಿ, ವಂದಿಸಿದರು. ಡಾ.ಅನ್ನಪೂರ್ಣ ತಳಕಲ್ಲ, ಡಿಪಿ ಕಾಂಬಳೆ, ವೈಬಿ ಚಲವಾದಿ, ಅಶೋಕ ಹೊನಕೇರಿ, ಶಿವಾನಂದ ಭಾವಿಕಟ್ಟಿ, ಶಿವಳ್ಳಿ ಮುಂತಾದವರು ಉಪಸ್ಥಿತರಿದ್ದರು.