ಕವಿ ಚಂಸು ಅವರು ವರ್ತಮಾನದ ಬದುಕನ್ನು ತಮ್ಮ ಕಾವ್ಯದಲ್ಲಿ ವಿಡಂಬಿಸಿದ್ದಾರೆ - ತೊಲಹಳ್ಳಿ

ಕವಿ  ಚಂಸು ಅವರು ವರ್ತಮಾನದ ಬದುಕನ್ನು ತಮ್ಮ ಕಾವ್ಯದಲ್ಲಿ ವಿಡಂಬಿಸಿದ್ದಾರೆ - ತೊಲಹಳ್ಳಿ Poet Chansu satirizes modern life in his poetry - Tolahalli

ಕವಿ  ಚಂಸು ಅವರು ವರ್ತಮಾನದ ಬದುಕನ್ನು ತಮ್ಮ ಕಾವ್ಯದಲ್ಲಿ ವಿಡಂಬಿಸಿದ್ದಾರೆ - ತೊಲಹಳ್ಳಿ 

        ರಾಣೇಬೆನ್ನೂರು  27:  ವರ್ತಮಾನದ ಬದುಕನ್ನು ತೀವ್ರವಾಗಿ ವಿಡಂಬಿಸುತ್ತಲೇ ಅಚ್ಚರಿ  ಹುಟ್ಟಿಸುವ ಚಂಸು ಕಾವ್ಯ ಎಚ್ಚರದ ಘಂಟೆಯಾಗಿಯೂ ಮಾರ್ದನಿಸುತ್ತದೆ ಎಂದು ಸಾಹಿತಿ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೇಳಿದರು.  ಅವರು  ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಾತೋಶ್ರೀ ಮಹದೇವಕ್ಕ   ಮಂಗಳವಾದ್ಯ ಮತ್ತು ತರಬೇತಿ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಘಟಕ ಮೇಡ್ಲೆರಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೃಷಿಕ  ಕವಿ ಚಂಸು ಪಾಟೀಲ ಅವರ "ಕುಳದ ಸಂಗಾತ" ಕವನ ಸಂಕಲನದ ಕುರಿತು ಮಾತನಾಡಿದರು.ಸಮಕಾಲೀನ ಜಗತ್ತಿನ ಎಲ್ಲ ಆಗುಹೋಗುಗಳನ್ನು ಸಾಮಾನ್ಯನೊಬ್ಬನ ಕಣ್ಣಿನಿಂದ ನೋಡಿ, ಜನಪರವಾಗಿ ಪ್ರತಿನುಡಿಯುವ ಧಾವಂತ, ಕುಳದ ಸಂಗಾತದ ಕವಿತೆಗಳಲ್ಲಿದೆ. ಕೃಷಿ ಸಮಸ್ಯೆಗಳೂ ಸೇರಿದಂತೆ, ಜನಸಾಮಾನ್ಯರ ದೈನಂದಿನ ನಿಟ್ಟುಸಿರನ್ನೆ ಪಿಸುಗುಡುವಂತೆ ಇಲ್ಲಿನ ಕವಿತೆಗಳು ಎದೆ ತಟ್ಟುತ್ತವೆ.  ಕಾವ್ಯದ ವಿನ್ಯಾಸದಲ್ಲಿ ಹೊಸ ಪ್ರಯೋಗ ಹಾಗೂ ವಸ್ತುವಿಷಯ ವೈವಿಧ್ಯತೆಗಳಿಂದ ’ ಕುಳದ ಸಂಗಾತ’ ವಿಶೇಷ ಎನಿಸುತ್ತದೆ ಎಂದು ಅವರು ವಿವರಿಸಿದರು.

   ರಾಷ್ಟ್ರೀಯ,  ಅಂತರಾಷ್ಟ್ರೀಯ ವಿದ್ಯಮಾನಗಳ ಜೊತೆಗೇ ಸ್ಥಳೀಯ ಘಟನಾವಳಿಗಳೂ ಇಲ್ಲಿ ಕಾವ್ಯಕ್ಕೆ ವಸ್ತು ಆಗಿವೆ. ಚಂಸು ಅವರ ಕವಿತೆಗಳು ಸಮಕಾಲೀನ ರಾಜಕೀಯದ ಬಗ್ಗೆ ಮಾತನಾಡುತ್ತಲೇ ಬಂಡವಾಳಶಾಹಿಯ ಧೋರಣೆಗಳ ಬಗ್ಗೆ ಎಚ್ಚರಿಸುತ್ತವೆ.  ಅವರ ಕವಿತೆಗಳನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಮಾತನಾಡುವುದೇ ಅಸಾಧ್ಯ. ಚಂಸು ವಿಶಾಲ ವ್ಯಾಪ್ತಿಯ  ಕವಿ. ಅವನೊಳಗೊಬ್ಬ ಪತ್ರಕರ್ತ ಇರುವಂತೆ, ತನ್ನ ಜನರನ್ನು ಪ್ರೀತಿಸುವ ರೈತನೂ ಇದ್ದಾನೆ ಎಂದರು. ಹಿರಿಯ ರೈತ, ಪಿಎಲ್ಡಿ ಬ್ಯಾಂಕಿನ ಮಾಜಿ ನಿರ್ದೆಶಕ ಶಿವಪುತ್ರ​‍್ಪ ಕೊಪ್ಪದ ಅವರು ಪುಸ್ತಕ ಬಿಡುಗಡೆ ಮಾಡಿದರು. ಕಸಾಪ ತಾಲೂಕ ಅಧ್ಯಕ್ಷ ಪ್ರಭಾಕರ್ ಶಿಗ್ಲಿ,  ಎಸ್‌. ಎಫ್‌. ಐ. ಜಿಲ್ಲಾಧ್ಯಕ್ಷ ಬಸವರಾಜ ಎಸ್, ಮಾದೇವಮ್ಮ ಸಾವಕ್ಕನವರ್,  ಮೇಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ, ಸಂಗೀತ ತರಬೇತಿ ಸಂಸ್ಥೆಯ  ಅಧ್ಯಕ್ಷ ಬಸವರಾಜ ಸಾವಕ್ಕನವರ, ಕವಿ ಚಂಸು ಪಾಟೀಲ, ಮಲ್ಲೇಶಪ್ಪ ಮದ್ಲೇರ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪಿಎಚ್ಡಿ ಪುರಸ್ಕೃತ ಡಾ. ಮಂಜಪ್ಪ ಚಲವಾದಿ, ಡಾ. ಗುರು ಎಸ್ ಚಲವಾದಿ, ಕಲಾವಿದರಾದಮೈಲಾರ​‍್ಪ ಚಲವಾದಿ. ಸಂಜೀವಪ್ಪ ದೊಡ್ಡ ಕಾಳೇರ್, ಹನುಮಂತಪ್ಪ ದೊಡ್ಡ ಕಾಳೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಂಗೀತ ಕಲಾವಿದರಾದ ರುದ್ರೇಶ್, ಬಡಿಗೇರ, ಕರಬಸಪ್ಪ ಬೇವಿನಹಳ್ಳಿ, ರಾಮಣ್ಣ ಕೂಸಗೂರ ಮನೋಜ ಹುಲ್ಮನಿ,ಭಾವಗೀತೆ, ಭಕ್ತಿಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿದರು. ಮಂಜುಳಾ ಹಿರೇಬಿದರಿ ದ್ರಾಕ್ಷಾಯಿಣಿ ಉದಗಟ್ಟಿ  ನಿರೂಪಿಸಿ, ವಂದಿಸಿದರು