ಶ್ರೀಮಂತರಿಗೆ ಆಶ್ರಯ ಯೋಜನೆ ಅಡಿ ಪ್ಲಾಟ್ ವಿತರಣೆ : ಜಿಲ್ಲಾ ಕಸಾಪ ಅಧ್ಯಕ್ಷರ ಪತ್ನಿಗೆ ಸೈಟ್ ಪರಭಾರೆ - ತನಿಖೆಗೆ ಆಗ್ರಹ

ಶ್ರೀಮಂತರಿಗೆ ಆಶ್ರಯ ಯೋಜನೆ ಅಡಿ ಪ್ಲಾಟ್ ವಿತರಣೆ : ಜಿಲ್ಲಾ ಕಸಾಪ ಅಧ್ಯಕ್ಷರ ಪತ್ನಿಗೆ ಸೈಟ್ ಪರಭಾರೆ - ತನಿಖೆಗೆ ಆಗ್ರಹ Plots distributed under shelter scheme to the rich: Site allotted to wife of district butcher chair

ಶ್ರೀಮಂತರಿಗೆ ಆಶ್ರಯ ಯೋಜನೆ ಅಡಿ ಪ್ಲಾಟ್ ವಿತರಣೆ : ಜಿಲ್ಲಾ ಕಸಾಪ ಅಧ್ಯಕ್ಷರ ಪತ್ನಿಗೆ ಸೈಟ್ ಪರಭಾರೆ - ತನಿಖೆಗೆ ಆಗ್ರಹ 

ಕಾರವಾರ 31 : ದಾಂಡೇಲಿಯಲ್ಲಿ ಉಳ್ಳವರು, ಮನೆ ಇದ್ದವರು ನಿಯಮಬಾಹೀರವಾಗಿ ನಗರಸಭೆಯ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಮ ಖಾನ್ ಅಪಾದಿಸಿದರು.ಕಾರವಾರ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಕ್ಕೆ ವಿರುದ್ಧವಾಗಿ 47 ನಿವೇಶನಗಳನ್ನು ಉಳ್ಳವರಿಗೆ ನೀಡಲಾಗಿದೆ. ಹೀಗೆ ನಿವೇಶನಗಳು ಬಹಿರಂಗ ಹರಾಜಿನಲ್ಲಿ ಮಾರಾಟವಾಗಬೇಕಿತ್ತು. ಹಾಗೆ ಮಾಡದೆ ನಿಯಮ ಉಲ್ಲಂಘನೆ ಮಾಡಲಾಗಿದೆ.ಪಡೆದವರಲ್ಲಿ ನಗರಸಭೆಯ ಕೆಲ ಮಾಜಿ ಸದಸ್ಯರು, ಪ್ರಭಾವಿಗಳು ಸೇರಿದ್ದಾರೆ . ಅಕ್ರಮವಾಗಿ ಪಡೆದ ಬಹುತೇಕ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣವಾಗಿವೆ. ಕೆಲವು ಖಾಲಿ ಇವೆ. ಆಶ್ರಯ ಪಟ್ಟದಡಿ ನಿವೇಶನ ಕಬಳಿಸಿದ ಸಾಧ್ಯತೆಗಳು ಸಹ ಇವೆ ಎಂದು ಅಕ್ರಮಖಾನ್ ವಿವರಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್‌.ವಾಸರೆ ತನ್ನ ಪತ್ನಿ ಹೆಸರಿನಲ್ಲಿ ಸೈಟ್ ಪಡೆದಿದ್ದಾರೆ.ಆಶ್ರಯ ಯೋಜನೆ ಅಡಿ ವೆಂಕಟೇಶ ಸುಬ್ಬಯ್ಯ ಹೆಸರಿಗೆ ಪೌರಾಯುಕ್ತ ಜತ್ತಣ್ಣ 3 ಜನವರಿಯಲ್ಲಿ 2019 ಕ್ರಯಪತ್ರ ಮಾಡಿ , ಸೈಟ್ ರಿಜಿಸ್ಟ್ರೇಶನ್ ಮಾಡಿಕೊಟ್ಟಿದ್ದಾರೆ. ಈ ಸೈಟ್ 25 ವರ್ಷ ಯಾರಿಗೂ ಪರಭಾರೆ ಮಾಡುವಂತಿಲ್ಲ .ಆದರೆ ನಾಲ್ಕೇ ದಿನದ ಅಂತರದಲ್ಲಿ ಈ ಸೈಟ್ ನ್ನು ( ಸಿಟಿಎಸ್ ನಂಬರ್ 3122) ವೆಂಕಟೇಶ ಬಿ.ಸುಬ್ಬಯ್ಯ ತನ್ನ ಸ್ವಾಯಾರ್ಜಿತ ಆಸ್ತಿ ಎಂದೂ. ಆರ್ಥಿಕ ಅಡಚಣೆಗಾಗಿ 1ಲಕ್ಷ 95 ಸಾವಿರಕ್ಕೆ ಜಲಾಜಾಕ್ಷಿ ಬೊಮ್ಮಯ್ಯ ನಾಯಕ ಎಂಬುವವರಿಗೆ ಕ್ರಯ ಮಾಡಿಕೊಟ್ಟಿದ್ದಾರೆ. ಇದು ಹಳಿಯಾಳ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೊಂದಣಿಯಾಗಿದೆ. ಹತ್ತು ಸಾವಿರ ರೂ.ಗಳಿಗೆ ಸೈಟ್ ಪಡೆದ ವೆಂಕಟೇಶ ಸುಬ್ಬಯ್ಯ ನಾಲ್ಕು ದಿನಗಳ ಅಂತರದಲ್ಲಿ ನಗರಸಭೆಯ ಸೈಟನ್ನು 1.95 ಲಕ್ಷಕ್ಕೆ ಮಾರಿದ್ದಾರೆ. ಇದು 50 ರಿಂದ 69 ಲಕ್ಷ ಬೆಲೆ ಬಾಳುವ ಸೈಟಾಗಿದೆ.  

ಅಲ್ಲದೆ ಹೀಗೆ ಪಡೆದ ಸೈಟ್ ಪಡೆದ ಕೆಲವೇ ದಿನಗಳಲ್ಲಿ ಯು.ಕೆ.ಸೌಹಾರ್ದ ಕ್ರೆಡಿಟ್ ಕೋಅಪರೇಟಿವ್ ಸೋಸೈಟಿ ಲಿಮಿಟೆಡ್ ಯಲ್ಲಾಪುರ ಶಾಖೆಯಿಂದ 15,99, 600 .00 ರೂ. ಸಾಲ ಪಡೆಯಲಾಗಿದೆ. ಇದು ದಾಂಡೇಲಿ ನಗರಸಭೆ ನಮೂನೆ -3 (ನಿಯಮ20)ರಲ್ಲಿ ದಾಖಲಾಗಿದೆ. ಈ ಹಗರಣದಲ್ಲಿ ಜತ್ತಣ್ಣ ಹಾಗೂ ಉಪ ನೊಂದಣಿ ಅಧಿಕಾರಿ ಎನ್‌.ಎ.ನಧಾಪ್ ಕೈವಾಡ ಇದೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸುತ್ತದೆ ಎಂದು ಅಧ್ಯಕ್ಷ ಅಕ್ರಮಖಾನ್ ಹೇಳಿದರು.ಫಲಾನುಭವಿಗಳಲ್ಲದ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತರ ತನಿಖೆ ಆರಂಭವಾಗಿದೆ ಎಂಬ ಮಾಹಿತಿ ಇದೆ.ಕೆಲ ಪ್ರಭಾವಿಗಳು ನಿವೇಶನ ಪಡೆದುಕೊಂಡಿದ್ದಾರೆ. ಆರ್‌.ವಿ.ಜತ್ತನ್ನ ಪೌರಾಯುಕ್ತ ಆಗಿದ್ದ ಅವಧಿಯಲ್ಲಿ ಮಂಜೂರಾದ 47 ನಿವೇಶನಗಳ ಕ್ರಯಪತ್ರ ರದ್ದುಪಡಿಸಬೇಕು . ಸೈಟ್ ಗಳು ನ್ಯಾಯಯುತವಾಗಿ ಪುನಃ ಹರಾಜು ಕರೆದು ಹಂಚಬೇಕು ಎಂದು ಅವರು ಒತ್ತಾಯಿಸಿದರು.ದಾಂ.ಸಮಗ್ರ.ಅ.ಸಂಘದ ಪ್ರಧಾನ ಕಾರ್ಯದರ್ಶಿವಕೀಲಆರ್‌.ವಿ.ಗಡೆಪ್ಪನವರ ಮಾತನಾಡಿ ಜಿಲ್ಲಾ ಕಸಾಪ ಅಧ್ಯಕ್ಷ ವಾಸರೆ ಪ್ರಭಾವ ಬಳಸಿ ಅಕ್ರಮವಾಗಿ ಪತ್ನಿ ಹೆಸರಿಗೆ ಸೈಟ್ ಪಡೆದಿರುವ ಕಾರಣ ,ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಅಕ್ರಮ ಸೈಟ್ ಕಬಳಕೆ ಸಂಬಂಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದರು.ದಾಂಡೇಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಶೋಕ ಪಾಟೀಲ, ದಾಂಡೇಲಿ ನಗರಸಭೆಯಲ್ಲಿ ದೊಡ್ಡ ಪ್ರಮಾಣದ ಸೈಟ್ ಹಗರಣ ನಡೆದಿವೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಬೇಕು. ಅಕ್ರಮವಾಗಿ ಹಂಚಿದ ಸೈಟ್ ವಾಪಾಸ್ ಪಡೆಯಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿಮೊಹ್ಮದ್ ಗೌಸ್, ಧರ್ಮಣ್ಣ ಭಜಂತ್ರಿ, ಫಾರೂಕ್ ಶೇಖ್, ಧನಂಜಯ ಕಲ್ಗುಟಕರ್, ಗಂಗಾ ಮಂಟೂರ, ಶಬ್ನಮ್ ಪಾರಿಸವಾಡಿ ಉಪಸ್ಥಿತರಿದ್ದರು ಇದ್ದರು.