ಬೆಳಗಾವಿಯಲ್ಲಿ ಫೋನ್‌-ಇನ್ ಪ್ರಸಾರ ಕಾರ್ಯಕ್ರಮ

Phone-in broadcast program in Belgaum

ಬೆಳಗಾವಿಯಲ್ಲಿ ಫೋನ್‌-ಇನ್ ಪ್ರಸಾರ ಕಾರ್ಯಕ್ರಮ 

ಬೆಳಗಾವಿ 05: ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ನೇರ ಫೋನ್‌-ಇನ್ ಪ್ರಸಾರ ಕಾರ್ಯಕ್ರಮ ಆಯೋಜಿಸಲಾಗುತ್ತು. ಬುಧವಾರ ದಿನಾಂಕ 5ನೇ ಜನವರಿ 2025 ರಂದು ಬೆಳಗ್ಗೆ 10 ರಿಂದ 11 ಗಂಟೆ ವರೆಗೆ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಕ್ಯಾನ್ಸರ್ ದಿನ ಅಂಗವಾಗಿ ಕ್ಯಾನ್ಸರ್‌ಗೆ ಸಂಭಂದಿಸಿದಂತೆ ಪ್ರಶ್ನೋತ್ತರ ಮೂಲಕ ಜನಜಾಗೃತಿ ಮೂಡಿಸಲಾಹಿತು.  

ಕಾರ್ಯಕ್ರಮದಲ್ಲಿ ಕೆಎಲ್‌ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಮತ್ತು  ಕೆಎಲ್‌ಇ ಕ್ಯಾನ್ಸರ ಆಸ್ಪತ್ರೆಯ ತಜ್ಞ ವೈದ್ಯ ಡಾ. ಕುಮಾರ ವಿಂಚುರಕರ್ ಅವರು ಭಾಗವಹಿಸಿ  ಕ್ಯಾನ್ಸರ  ಕುರಿತು ಜಾಗೃತಿ ಮೂಡಿಸಿದರು.  

ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗ ಪತ್ತೆ ಹಚ್ಚುವುದು ಹೇಗೆ? ಕ್ಯಾನ್ಸರ್ ತಡಗಟ್ಟುವಿಕೆ, ರೋಗದ ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ಮಾಹಿತಿ ಹಂಚಿಕೊಂಡರು. ಬೆಳಗಾವಿಯಲ್ಲಿಯ ಕೆಎಲ್‌ಇ ಸಂಸ್ಥೆಯ ನೂತನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಇರುವ ಚಿಕಿತ್ಸೆ ಮತ್ತು ಆಸ್ಪತ್ರೆಯಲ್ಲಿನ ಸೇವಾ ಸೌಲಭ್ಯಗಳ ಕುರಿತು ತಿಳಿಸಿದರು ಮತ್ತು ಕೇಳುಗರ ಕ್ಯಾನ್ಸರ್ ಸಂಭಂದಿತ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್ ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.