ಶಿಲ್ಪಾ ಸವದತ್ತಿ ಗೆ ಪಿಎಚ್‌ಡಿ ಪದವಿ ಪ್ರಧಾನ

PhD degree principal for Shilpa Savadatti

ಶಿಲ್ಪಾ ಸವದತ್ತಿ ಗೆ ಪಿಎಚ್‌ಡಿ ಪದವಿ ಪ್ರಧಾನ 

ವಿಜಯಪುರ 15: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶಿಲ್ಪಾ ಸವದತ್ತಿ ಅವರು ಸಲ್ಲಿಸಿದ್ದ “ಎ ಸೋಷಿಯಲ್ ವರ್ಕ್‌ ಸ್ಟಡಿ ಆನ್ ಅಡೋಲಸೆಟ್ ಗರ್ಲ್ಸ್‌ ಇನ್ ವಿಜಯಪುರ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.  

ಶಿಲ್ಪಾ ಸವದತ್ತಿ ಅವರು ಸಮಾಜಕಾರ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್‌.ಎ.ಖಾಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶಿಲ್ಪಾ ಸವದತ್ತಿ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್‌.ಎಂ. ಚಂದ್ರಶೇಖರ  ಅವರು ಅಭಿನಂದಿಸಿದ್ದಾರೆ.