ಬಾಗ್ದಾದ್, ನ ೨೯-ದೇಶದಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾಕ್ ಪ್ರಧಾನಿ ಅಡೆಲ್ ಅಬ್ದುಲ್ ಮಹ್ದಿ ರಾಜೀನಾಮೆ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ
"ಸರ್ಕಾರದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯುವುದಾಗಿ ಸಂಸತ್‌ನ ಪ್ರತಿನಿಧಿ ಸಭೆಗೆ ಅಧಿಕೃತ ಪತ್ರವನ್ನು ಸಲ್ಲಿಸುತ್ತೇನೆ" ಎಂದು ಪ್ರಧಾನಿ ಅಬ್ದುಲ್ ಮಹ್ದಿ ಶುಕ್ರವಾರದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇರಾಕ್ನಲ್ಲಿ ಸರ್ಕಾರ ವಜಾಗೊಳಿಸಿ, ಆರ್ಥಿಕ ಬಿಕ್ಕಟ್ಟು ಕೊನೆಗೊಳಿಸಬೇಕೆಂದು ಆಗ್ರಹಿಸಿ, ಕಳೆದ ಅಕ್ಟೋಬರ್ ಆರಂಭವಾದ ಪ್ರತಿಘಟನೆ ಉಲ್ಬಣಗೊಳ್ಳುತ್ತಿದೆ.. ಸರ್ಕಾರ ವಜಾಗೊಳಿಸಲು ಮತ್ತು ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ನವೆಂಬರ್ನಲ್ಲಿ, ಅತಿಯಾದ ಬಲ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ ೬೬ ಇರಾಕಿ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು.
ಈ ಹಿಂದೆ ೨೦೧೧ ರಲ್ಲಿಯೂ ಇರಾಕ್ ಇದೇ ರೀತಿಯ ಪ್ರತಿಭಟನೆಗಳನ್ನು ಎದುರಿಸಿತು, ಪ್ರತಿಭಟನಾಕಾರರು ಉತ್ತಮ ಜೀವನ ಪರಿಸ್ಥಿತಿಗಳು, ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು ಮತ್ತು ನಿರುದ್ಯೋಗ ಸಮಸ್ಯೆಗೆ ಪರಿಹಾರಕ್ಕೆ ಆಗ್ರಹಿಸಿದ್ದರು.