ಕರಕುಶಲ ವಸ್ತುಗಳ ಪ್ರದರ್ಶನ
ಹಾವೇರಿ೧೬ : ಬೇಸಿಗೆ ಸಂಭ್ರಮದ ಅಂಗವಾಗಿ ಕೋಳೂರಿನ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದಲೇ ತಯಾರಿಸಿದ ರಂಗಪರಿಕರ ಹಾಗೂ ಕರಕುಶಲ ವಸ್ತುಗಳ ವಸ್ತು ಪ್ರದರ್ಶನ ಜರುಗಿತು.
ಕರಕುಶಲ ವಸ್ತುಗಳ ಪ್ರದರ್ಶನವನ್ನು ಉಮರ ಫಾರುಕ ಕಾಸಿಂಸಾಬ ಮುಂದಿನಮನಿ ಉದ್ಘಾಟಿಸಿ ಮಾತನಾಡಿ, ವಿವಿಧ ವಸ್ತುಗಳನ್ನು ತಯಾರಿಸುವುದು ಒಂದು ಕಲೆ. ಕಲೆಯಲ್ಲಿ ಕಲ್ಪನಾ ಶಕ್ತಿಯನ್ನು ಚುರುಕುಗೊಳಿಸುವ ಮತ್ತು ನಿಜರ್ೀವ ವಸ್ತುವಿಗೆ ಜೀವ ತುಂಬುವ ಶಕ್ತಿ ಇದೆ. ಬೇಸಿಗೆ ಸಂಭ್ರಮದಲ್ಲಿ ಮುಖವಾಡಗಳು, ರಂಗ ಪರಿಕರಗಳನ್ನು ಕರಕುಶಲ ವಸ್ತುಗಳನ್ನು ಜಿ.ಎಂ. ಓಂಕಾರಣ್ಣನವರ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರದರ್ಶನ ಮಾಡಿದ್ದು ಕೋಳೂರ ಶಾಲೆಯ ಬೇಸಿಗೆ ಸಂಭ್ರಮ ಶಿಬಿರ ವಿಶೇಷವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ರೇಣುಕಾ ಸಿದ್ಧಗೂಳಪ್ಪನವರ ಮಾತನಾಡಿ, ಮಕ್ಕಳು ಬಿಡುವಿನ ವೇಳೆಯಲ್ಲಿ ಚಿತ್ರ ಬರೆಯುವುದು, ರಂಗೋಲಿ ಹಾಕುವುದು, ಕಥೆ, ಕವನ ಬರೆಯುವುದು, ಓದುವುದು ಮುಂತಾದ ಒಳ್ಳೆಯ ಹವ್ಯಾಸಗಳು ವ್ಯಕ್ತಿ ವಿಕಾಸಕ್ಕೆ ಅವರ ಜೀವನದ ಉನ್ನತಿಗೆ ಮಾರ್ಗವಾಗಿವೆ ಎಂದರು.
ವಸ್ತುಗಳನ್ನು ತಯಾರಿಸಿದ ಮಕ್ಕಳಿಗೆ ಬಹುಮಾನ ನೀಡಲಾಯಿತು. ವಸ್ತುಗಳ ಪ್ರದರ್ಶನವನ್ನು ಪಾಲಕರು, ಮಕ್ಕಳು ವೀಕ್ಷಿಸಿ ಮಕ್ಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಎಂ.ಎಸ್. ಯತ್ತಿನಹಳ್ಳಿ.ಲಲಿತಾ ಕುರಡವೀರಪ್ಪನವರ, ತರುಣ ಅಂಗಡಿ, ನೇಹಾ ಯಶೋದಾ, ಐಶ್ವರ್ಯ, ಪ್ರಕೃತಿ ಅನೇಕರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 