ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ
ಲೋಕದರ್ಶನ ವರದಿ
ಹಳಿಯಾಳ, 29: ಇಲ್ಲಿನ ಕ್ರೀಡಾ ವಸತಿ ನಿಲಯದ ಕುಸ್ತಿಪಟುಗಳು ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಾಧನೆಗೈದಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರದಲ್ಲಿ ನ. 23 ರಿಂದ ನ. 25ರ ವರೆಗೆ ಪ್ರಸಕ್ತ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ/ಬಾಲಕಿಯರ ಕುಸ್ತಿ ಪಂದ್ಯಾವಳಿಗಳು ನೆರವೇರಿದವು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಹಳಿಯಾಳ ಕ್ರೀಡಾ ವಸತಿ ನಿಲಯದ ಒಟ್ಟು 14 ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು 8 ಚಿನ್ನ, 1 ಬೆಳ್ಳಿ, 4 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಲಾಖೆಯ ತರಬೇತುದಾರರಾದ ಕಾಡೇಶ ನ್ಯಾಮಗೌಡ ಮತ್ತು ಬಾಳಕೃಷ್ಣ ದಡ್ಡಿ ತರಬೇತಿ ನೀಡಿದ್ದಾರೆ. ಪ್ರಥಮ ಸ್ಥಾನ ಚಿನ್ನದ ಪದಕ ಪಡೆದ ಕುಸ್ತಿ ಪಟುಗಳು ಡಿ. 14 ರಿಂದ ಐದು ದಿನಗಳವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಪ್ರಥಮ ಸ್ಥಾನ (ಚಿನ್ನದ ಪದಕ) ವಿಜೇತರು:- 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕಾವ್ಯಾ ಘಟಗೋಳಕರ (40 ಕೆ.ಜಿ), ರೂಪಾ ಕೋಲೆಕರ (43 ಕೆ.ಜಿ), ನಿಖಿತಾ ಢೇಫಿ (46 ಕೆ.ಜಿ), ಸುಜಾತಾ ಪಾಟೀಲ (57 ಕೆ.ಜಿ). 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸುಲೇಮಾನ ದೇವಕಾರಿ (45 ಕೆ.ಜಿ/ಗ್ರೀಕೊ ರೋಮನ್ ಶೈಲಿ), ಕೃಷ್ಣಾ ಯಮನಪ್ಪನವರ (51 ಕೆ.ಜಿ ಗ್ರೀಕೊ ರೋಮನ್), ಶೈಲೇಶ ಸುತಾರ (48 ಕೆ.ಜಿ), ಉಷಾರತ್ ಮಿರಾಶಿ (51 ಕೆ.ಜಿ).
ದ್ವಿತೀಯ ಸ್ಥಾನ (ಬೆಳ್ಳಿ ಪದಕ) ವಿಜೇತರು:- 17 ವರ್ಷದೊಳಗಿನ ಬಾಲಕಿಯರ ವಿಭಾಗ- ರಕ್ಷೀತಾ ಸೂರ್ಯವಂಶಿ (49 ಕೆ.ಜಿ)
ತೃತೀಯ ಸ್ಥಾನ (ಕಂಚಿನ ಪದಕ) ವಿಜೇತರು:- 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಾಹಿದ ದೇವಕಾರಿ (35 ಕೆ.ಜಿ.) ತೃತೀಯ ಸ್ಥಾನ, ಶುಭಂ ಯಲ್ಲಪ್ಪಾ ಮಾಲವನಕರ (44 ಕೆ.ಜಿ), 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರೋಹನ ದೊಡ್ಮನಿ (45 ಕೆ.ಜಿ), ಅಶೋಕ ಮಾಕನ್ನವರ (60 ಕೆ.ಜಿ ಗ್ರೀಕೊ ರೋಮನ್)
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 