ಅಭಿವೃದ್ಧಿಯ ವಿಷಯದಲ್ಲಿ ಜನರ ಮನಸ್ಥಿತಿ ಬದಲಾಗಬೇಕಿದೆ: ರಾಜು ಕಾಗೆ
People's mindset needs to change regarding development: Raju Kage
ಕಾಗವಾಡ, 19 : ಶಾಸಕರಾದವರು ಸರ್ಕಾರಗಳಿಂದ ಸಾಕಷ್ಟು ಅನುದಾನ ತಂದು, ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದೇನೋ ನಿಜ. ಆದರೇ ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ತಮ್ಮ ಸ್ವ-ಹಿತಾಸಕ್ತಿಗಳನ್ನು ಬದಿಗಿಟ್ಟು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು, ಸೋಮವಾರ ದಿ. 19 ರಂದು ಕಾಗವಾಡ ಮತಕ್ಷೇತ್ರದ ಬಳ್ಳಿಗೇರಿಯಲ್ಲಿ 40 ಲಕ್ಷ ಅನುದಾನದ ಬಳ್ಳಿಗೇರಿ-ಸಿಂಧೂರ ರಸ್ತೆ, ಅನಂತಪೂರದಲ್ಲಿ 25 ಲಕ್ಷ ಅನುದಾನದ ಅನಂತಪೂರ-ತಾವಂಶಿ-ಬಾರಿಗಡ್ಡೆ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ, ಮಾತನಾಡುತ್ತಿದ್ದರು. ಇಂದಿನ ಕಾಲದಲ್ಲಿ ಜನರ ಮನಸ್ಸಿತಿ ಹೇಗಾಗಿದೆ ಎಂದರೇ ಎಲ್ಲರಿಗೂ ಅಭಿವೃದ್ಧಿ ಬೇಕಾಗಿದೆ. ಆದರೇ ಅಭಿವೃದ್ಧಿಗಾಗಿ ತಮ್ಮ ಹೊಲ-ಗದ್ದೆಗಳು ಸೇರಿದಂತೆ ತಮ್ಮದೇನು ಕಳೆದುಕೊಳ್ಳಲು ಸಿದ್ಧರಿಲ್ಲ. ಪ್ರತಿಯೊಬ್ಬರು ಇದೇ ರೀತಿ ಯೋಚನೆ ಮಾಡಿದಾಗ ಅಭಿವೃದ್ಧಿ ಸಾಧ್ಯವಿಲ್ಲ. ಇಂದು ಸಣ್ಣ-ಪುಟ್ಟ ಗ್ರಾಮಗಳಲ್ಲಿ ರಾಜಕೀಯ, ಸ್ವ-ಹಿತಾಸಕ್ತಿಯಿಂದಾಗಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಜನರ ಮನಸ್ಥಿತಿ ಬದಲಾಗಬೇಕಿದೆ. ಜೊತೆಗೆ ಸ್ಥಳೀಯ ಮುಖಂಡರು ತಮ್ಮ ಸ್ವ-ಹಿತಾಸಕ್ತಿಗಳನ್ನು ಬದಿಗಿಟ್ಟು, ಸರ್ಕಾರ, ಶಾಸಕರು ನೀಡಿವು ಅನುದಾನವನ್ನು ಸರಿಯಾಗಿ ಬಳಿಸಿಕೊಂಡು, ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಈ ಸಮಯದಲ್ಲಿ ತಾ.ಪಂ. ಇಓ ವೀರಣ್ಣಾ ವಾಲಿ, ಮಡಿವಾಳಪ್ಪಾ ಪಾಟೀಲ, ಅಥಣಿ ಪಿಎಸ್‌ಐ ಗಿರಮಲ್ಲಪ್ಪಾ ಉಪ್ಪಾರ, ಮುಖಂಡರಾದ ಗೂಳಪ್ಪಾ ಜತ್ತಿ, ವಿನಾಯಕ ಬಾಗಡಿ, ಶಿವಾನಂದ ಗೊಲಭಾಂವಿ, ವಿಶಾಲ ಲಿಂಬಾಳ, ಚಂದ್ರಕಾಂತ ಇಮ್ಮಡಿ, ಓಂಪ್ರಕಾಶ ಡೊಳ್ಳಿ, ಗುತ್ತಿಗೆದಾರರಾದ ಅಪ್ಪು ಹಿಪ್ಪರಗಿ, ಚನ್ನಮಲ್ಲ ಪಾಟೀಲ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 