ಯೇಸುವಿನ ಆದರ್ಶಗಳನ್ನು ಪಾಲಿಸಿದರೆ ಬದುಕಿನಲ್ಲಿ ನೆಮ್ಮದಿ ಸಾಧ್ಯ : ಸಲೋಮನ್ ಬಿಜ್ಜ

ಯೇಸುವಿನ ಆದರ್ಶಗಳನ್ನು ಪಾಲಿಸಿದರೆ ಬದುಕಿನಲ್ಲಿ ನೆಮ್ಮದಿ ಸಾಧ್ಯ : ಸಲೋಮನ್ ಬಿಜ್ಜ Peace in life is possible if you follow the ideals of Jesus: Salomon Bija

              ಕಂಪ್ಲಿ 14: ಮಾನವ ಕುಲದ ಉದ್ಧಾರ ಹಾಗೂ ಮಾನವೀಯ ಆದರ್ಶ ಮೌಲ್ಯಗಳಂತಹ ಯೇಸುವಿನ ಸಂದೇಶ ಎಲ್ಲರ ಬದುಕಿಗೆ ಆದರ್ಶವಾಗಿದೆ’ ಎಂದು ಪಾಸ್ಟರ್ ರೇವ ಸಲೋಮನ್ ಬಿಜ್ಜ ಹೇಳಿದರು. ತಾಲೂಕಿನ ನೆಲ್ಲುಡಿ ಕೊಟ್ಟಾಲ್ ಗ್ರಾಮದಲ್ಲಿ ರೆವ! ಬಿ.ರಾಜು ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಸುಸರ್ಜಿತ ಎಲೋಹಿಂ ನೂತನ ಚರ್ಚ್‌ ಉದ್ಘಾಟಿಸಿದ ನಂತರ ವೇದಿಕೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮಾನವನ ಪಾಪಗಳನ್ನು ಕಳೆಯಲೆಂದೇ ಯೇಸು ಜನಿಸಿದ್ದಾನೆ. ಆತನಲ್ಲಿ ವಿಶ್ವಾಸವಿಟ್ಟು ಆದರ್ಶಗಳನ್ನು ಪಾಲಿಸಿದರೆ ಬದುಕಿನಲ್ಲಿ ನೆಮ್ಮದಿ ಕಾಣಬಹುದು’ ಎಂದರು.ನಂತರ ಎಲೋಹಿಂ ನೂತನ ಮಂದಿರದ ರೆವ! ಬಿ.ರಾಜು ಪಾಸ್ಟರ್ ಮಾತನಾಡಿ, ಯೇಸುವಿನ ಸ್ಮರಣೆಗಾಗಿ ನೂತನ ಎಲೋಹಿಂ ಚರ್ಚ್‌ ಮಂದಿರ ನಿರ್ಮಿಸಲಾಗಿದೆ.

            ಯೇಸುವಿನ ದೇವಾಲಯ ನಿರ್ಮಾಣದಿಂದ ದೇವರ ಸ್ಮರಣೆ, ಸಂಸ್ಕಾರಗಳು ಮೂಡಿಬರುತ್ತದೆ. ಜತೆಗೆ ನಿತ್ಯ ದೇವಾಲಗಳಿಗೆ ಬಂದು ಪ್ರಾರ್ಥನೆ ಸಲ್ಲಿಸುವುದರ ಮೂಲಕ ಪಾವಿತ್ರ್ಯತೆ ಪಡೆಯಬಹುದು. ಸಂಸ್ಕಾರಗಳ ಅಳವಡಿಕೆ, ಆಚಾರ-ವಿಚಾರಗಳಿಂದ ಮಾನವನ ಭವಿಷ್ಯ ಉತ್ತಮಗೊಳ್ಳಲು, ಸೃಜನಶೀಲತೆ, ಏಕತೆ, ಒಗ್ಗೂಡುವಿಕೆ, ಸರ್ವತೋಮುಖ ಬೆಳವಣಿಗೆ, ತಾಳ್ಮೆ, ಸಹನೆ, ಶಾಂತಿ ಜೀವನಕ್ಕೆ ಪಾಠವಾಗುವುದಕ್ಕೆ ಯೇಸುವಿನ ಮಂದಿರಗಳು ಸಹಕಾರಿಯಾಗುವುದು ಎಂದರು. ಇಲ್ಲಿನ ನೂತನ ಮಂದಿರದಲ್ಲಿ ಮೊದಲಿಗೆ ಯೇಸುವಿನ ಸ್ಮರಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪಾಸ್ಟರ್‌ಗಳಾದ ಸತೀಶ್‌ಕುಮಾರ ಬಿಜ್ಜ, ರತ್ನಕುಮಾರ, ಸಜ್ಜಿನ್ ಸಾರಥಿ, ಪಾಲ್ ಪಂಪಾಪತಿ, ತಿಮ್ಮಯ್ಯ, ವೈ.ಆನಂದ, ಕ್ರೀಷ್ಟಪಾರ್, ಆನಂದ ಮುಖಂಡರಾದ ಲಕ್ಷ್ಮೀಪತಿ, ಶ್ರೀನಿವಾಸು, ಹನುಮಪ್ಪ, ಮಸ್ತಾನ್,