ಸಮಾಜಮುಖಿ ಕಾರ್ಯಗಳ ಮುಖಾಂತರ ಸಮಾಜದ ಋಣ ಸಂದಾಯ ಮಾಡಿ: ಡಾ. ಅಜಿತ ಪ್ರಸಾದ
Pay off society's debt through social work: Dr. Ajit Prasad
ಸಮಾಜಮುಖಿ ಕಾರ್ಯಗಳ ಮುಖಾಂತರ ಸಮಾಜದ ಋಣ ಸಂದಾಯ ಮಾಡಿ: ಡಾ. ಅಜಿತ ಪ್ರಸಾದ
ಧಾರವಾಡ 14: ಸಮಾಜ ನಮಗೆ ಎಲ್ಲವನ್ನೂ ನೀಡಿದೆ. ಅದರ ಋಣ ಸಂದಾಯ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅದಕ್ಕಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಬೇಕು, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇಂಥಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಅತಿ ಅವಶ್ಯಕ. ಈ ಹಿನ್ನೆಲೆಯಲ್ಲಿ ಜೈನಮಿಲನ ಧಾರವಾಡ ವಿವಿಧ ಸಂಘಟನೆಗಳ ಜೊತೆ ವಿದ್ಯಾರ್ಥಿಗಳ, ಪಾಲಕರ, ಸಾರ್ವಜನಿಕರ, ಶಾಲಾ-ಕಾಲೇಜುಗಳ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸುವ ಮುಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಸವದತ್ತಿ ರಸ್ತೆಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೈನಮಿಲನ ಧಾರವಾಡ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜು ಮೃತ್ಯುಂಜಯನಗರ, ಧಾರವಾಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ, ನವನಗರ, ಹುಬ್ಬಳ್ಳಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಧಾರವಾಡ, ಎಂ.ಎಂ ಜೋಶಿ ಕಣ್ಣಿನ ಆಸ್ಪತ್ರೆ, ಧಾರವಾಡ, ರೋಟರಿ ಆರೋಗ್ಯ ವಾಹಿನಿ, ಹುಬ್ಬಳ್ಳಿ, ಜೀವ ಸಾರ್ಥಕತೆ, ಕರ್ನಾಟಕ ಸರಕಾರ, ಹರೀಶ್ ಮಡಿಲ್ಯಾಬ್ ಮತ್ತು ರಕ್ತ ತಪಾಸಾಣೆ ಕೇಂದ್ರ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಜೈನಮಿಲನಿನ ಸಂಸ್ಥಾಪಕ ಕಾರ್ಯದರ್ಶಿಗಳಾದ ಅಜಿತ ಪ್ರಸಾದರವರು ಮಾತನಾಡುತ್ತಿದ್ದರು. ಜೈನಮಿಲನ್ ಯಾವುದೇ ಜಾತಿ, ಪಂಥಗಳಿಗೆ ಸೀಮಿತಗೊಳಿಸದೇ ಎಲ್ಲರಿಗೂ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಪೂಜ್ಯ ಹೆಗ್ಗಡೆಯವರ ಆಶಯದಂತೆ ಆರೋಗ್ಯ, ಶಿಕ್ಷಣ ಕಟ್ಟ ಕಡೆಯ ಮನುಷ್ಯನಿಗೂ ತಲುಪಬೇಕೆಂಬ ಆಶಯದಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್. ಎಂ. ಹೊನಕೇರಿ ಮಾತನಾಡಿ ಆಧುನಿಕ ಜೀವನಶೈಲಿ, ಆಹಾರ ಪದ್ಧತಿ ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು, ಆಗಾಗ ನಿಯಮಿತ ರೋಗ ತಪಾಸಣೆೆಯಿಂದ ಆರೋಗ್ಯಮಯ ಜೀವನ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ಈ ರೀತಿ ಶಿಬಿರವನ್ನು ಜೈನಮಿಲನ್ ಆಯೋಜಿಸಿರುವುದು ಅಭಿನಂದನರ್ಹವಾದದ್ದು ಎಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತೇಶ ವೀರಾಪುರ ಮಾತನಾಡಿ, ಹಣ ಗಳಿಕೆಯ ಆಸೆಯಿಂದ ಜನರು ಆರೋಗ್ಯ ಹಾಳುಮಾಡಿಕೊಂಡು, ಮತ್ತೆ ಉತ್ತಮ ಆರೋಗ್ಯ ಪಡೆಯಲು ಗಳಿಸಿದ ಹಣವನ್ನು ವ್ಯಯ ಮಾಡುತ್ತಿದ್ದಾರೆ. ವಾಹನಗಳಗ ಬಗ್ಗೆ ಕಾಳಜಿ ವಹಿಸುವ ಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು ದುರಂತದ ಸಂಗತಿ. ಆರೋಗ್ಯದ ಬಗ್ಗೆ ಗಮನ ನೀಡಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಉಮೇಶ್ ಹಳ್ಳಿಕೇರಿ ಮಾತನಾಡುತ್ತಾ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಬೇಕು. ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಕಣ್ಣಿನ ತಪಾಸಣೆ, ರಕ್ತದೊತ್ತಡ, ರಕ್ತ ಪರೀಕ್ಷೆ, ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಮಾಡಲಾಯಿತು. ಒಟ್ಟು 212 ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜೆ.ಎಸ್.ಎಸ್ ಗೆ ನೂತನವಾಗಿ ಆಡಳಿತ ಅಧಿಕಾರಿಯಾಗಿ ನೇಮಕವಾದ ಶ್ರೀ ಅರಿಹಂತ ಪ್ರಸಾದರವರನ್ನು ಜೈನ ಮಿಲನಿನ ಪರವಾಗಿ ಸನ್ಮಾನಿಸಲಾಯಿತು .
ಈನ ಸಂಕೀರ್ತನ ಭಜನಾ ಮಂಡಳಿ ಸದಸ್ಯೆಯರಿಂದ ಣಮೋಕಾರ ಮಂತ್ರ ಪಠಿಸಲಾಯಿತು. ಮಹಾಂತೇಶ್ ವೀರಾಪುರ, ಲಕ್ಷ್ಮಿ ಹಿರೇಮಠ, ಡಾ. ಜಿನ್ನಪ್ಪ ಕುಂದಗೋಳ, ಮೋಹನ್ ಗೋಗಿ, ಎ.ಎ.ಬಾಳೆಕಾಯಿ, ತ್ರಿವೇಣಿ. ಆರ್, ಡಾ. ಬಿ.ಎನ್. ಭಾವಿ, ಸುಜಾತ ಹಡಗಲಿ, ಡಾ. ಚಕ್ರಸಾಲಿ ಉಪಸ್ಥಿತರಿದ್ದರು.
ಡಾ. ಜಿನದತ್ತ ಹಡಗಲಿ ನಿರೂಪಿಸಿದರು, ಮಹಾವೀರ ಉಪಾದ್ಯೆ ಸ್ವಾಗತಿಸಿದರು, ಸೋನಾಲಿ ಗೋಗಿ ಪ್ರಾರ್ಥನೆಗೈದರು. ರತ್ನಾಕರ ಹೋಳಗಿ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 