ಯುವಕರಲ್ಲಿ ದೇಶಪ್ರೇಮ ಬೆಳೆಯಬೇಕು-ಚಕ್ರವರ್ತಿ ಸೂಲಿಬೆಲೆ

ಯುವಕರಲ್ಲಿ ದೇಶಪ್ರೇಮ ಬೆಳೆಯಬೇಕು-ಚಕ್ರವರ್ತಿ ಸೂಲಿಬೆಲೆ Patriotism should be cultivated among the youth - Chakravarti Sulibele

ಯುವಕರಲ್ಲಿ ದೇಶಪ್ರೇಮ ಬೆಳೆಯಬೇಕು-ಚಕ್ರವರ್ತಿ ಸೂಲಿಬೆಲೆ 

 ದಾರವಾಢ 24 : ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟ. ಈ ಸಮಯದಲ್ಲಿ ನಾವು ಕೇವಲ ವಿದ್ಯಾರ್ಜನೆ ಅಷ್ಟೆ ಅಲ್ಲದೇ ದೇಶದ ಸ್ಥಿತಿಗತಿಗಳ ಬಗ್ಗೆಯೂ ಸಹ ಅವಲೋಕಿಸಬೇಕಾಗುತ್ತದೆ. ನೈತಿಕ ಶಿಕ್ಷಣ ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಶಿಕ್ಷಣವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಜೆ.ಎಸ್‌.ಎಸ್ ಶಿಕ್ಷಣ ಸಂಸ್ಥೆಗಳ ಮೂಲಕ ಸಂಸ್ಕೃತಿ ಮತ್ತು ಮೌಲ್ಯಗಳನ್ನು ನೀಡುತ್ತಿರುವುದು ನಮ್ಮ ಸೌಭಾಗ್ಯ ಪೂಜ್ಯರ ನಮ್ಮ ಅವಲೋಕನೆಗೂ ಸಿಗದಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗುವಂತೆ ಹತ್ತು ಹಲವಾರು ಯೋಜನೆಗಳ ಮೂಲಕ ಅವರಿಗೆ ಆಶಾಕಿರಣವಾದ ಪೂಜ್ಯರು, ಭಾರತೀಯ ಸಂಸ್ಕೃತಿಗೆ ಮೆರಗು ನೀಡುವ ಕಾರ್ಯದಲ್ಲಿನ ತೊಡಗಿದ್ದಾರೆ. ಇವರು ಯೋಜನೆಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ದೇಶಾದ್ಯಂತ ಎಲ್ಲರ ಜನರಿಗೂ ನೆಮ್ಮದಿಯ ಜೀವನ ಕಟ್ಟ್ಟಿಕೊಟ್ಟಿವೆ ಎಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 58ನೆ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಭಾರತೀಯ ಪರಂಪರೆ ಮತ್ತು ರಾಷ್ಟ್ರಪುಷ್ಪ ನಿವೇದಿತಾ ಕಾರ್ಯಕ್ರಮವನ್ನು ಯುವ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.  ಭಾರತೀಯ ಪರಂಪರೆಯು ಭಾರತದ ವಿಭಿನ್ನ ಸಂಸ್ಕೃತಿ, ಸಂಪ್ರದಾಯಗಳು, ಕಲೆಗಳು, ಸಾಹಿತ್ಯ ಮತ್ತು ಇತಿಹಾಸದ ಸಂಕೀರ್ಣ ಸಂಯೋಜನೆಯಾಗಿದೆ. ಇದು ಧಾರ್ಮಿಕ ವೈವಿಧ್ಯತೆ, ಅನೇಕ ಹಬ್ಬಗಳು, ನೃತ್ಯ ಮತ್ತು ಸಂಗೀತ ಶೈಲಿಗಳು, ಸಾಂಪ್ರದಾಯಿಕ ಉಡುಗೆಗಳು ಮತ್ತು ವಿಶಿಷ್ಟವಾದ ಆಹಾರ ಪದ್ಧತಿಗಳನ್ನು ಒಳಗೊಂಡಿದೆ. ಈ ಪರಂಪರೆಯು ಪ್ರಾಚೀನ ನಾಗರಿಕತೆಯ ಆಳವಾದ ಬೇರುಗಳನ್ನು ಹೊಂದಿದ್ದು, ಪ್ರತಿಯೊಂದು ಸಮುದಾಯವು ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದೆ.   

ಭಾರತವು ಅನೇಕ ಧರ್ಮಗಳ ನಾಡಾಗಿದ್ದು, ಯೋಗ, ಧ್ಯಾನ ಮತ್ತು ಪ್ರಾರ್ಥನೆಯಂತಹ ಆಧ್ಯಾತ್ಮಿಕ ಅಭ್ಯಾಸಗಳು ಜೀವನದ ಅವಿಭಾಜ್ಯ ಅಂಗವಾಗಿದೆ. ವೈವಿಧ್ಯಮಯ ಕಲಾ ಪ್ರಕಾರಗಳು ಇಲ್ಲಿವೆ. ಎಲ್ಲ ಹಬ್ಬ ಹರಿದಿನಗಳನ್ನು ಜನರು ಒಟ್ಟಾಗಿ ಆಚರಿಸುತ್ತಾರೆ. ಭಾರತವು ಅನೇಕ ಭಾಷೆಗಳು ಮತ್ತು ಉಪಭಾಷೆಗಳನ್ನು ಹೊಂದಿದೆ, ಇದು ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ವಿವಿಧ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ನಮ್ಮ ದೇಶ ಹೊಂದಿದೆ. ಭಾರತದ ಪ್ರಾಚೀನ ನಾಗರಿಕತೆಯು ವಿಶಿಷ್ಟವಾದ ವಾಸ್ತುಶಿಲ್ಪ, ಸ್ಮಾರಕಗಳು ಮತ್ತು ಕಲಾಕೃತಿಗಳ ಮೂಲಕ ತನ್ನ ಇತಿಹಾಸವನ್ನು ಉಳಿಸಿಕೊಂಡಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮತ್ತು ಸಂರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ.  ಸ್ವಾಮಿ ವಿವೇಕಾನಂದರಂತೆ ದೇಶದ ಬಗ್ಗೆ ಪ್ರೇಮ, ಸ್ವಾಭಿಮಾನ ಬೆಳೆಸಿಕೊಳ್ಳಿ, ಸಮಯವನ್ನು ಕೇವಲ ಮನೋರಂಜನೆಗಾಗಿ ವ್ಯರ್ಥ ಮಾಡದೇ ಹೆಚ್ಚಿನ ಜ್ಞಾನ ಹಾಗೂ ದೇಶದ ಉದ್ಧಾರಕ್ಕಾಗಿ ಬಳಸಿಕೊಳ್ಳಿ. ಯುವಜನತೆಯೆ ದೇಶದ ಶಕ್ತಿ. ದೇಶ ಬದಲಾಗುತ್ತಿದೆ ಆದರೆ, ಸರಿಯಾಗಿ ನಡೆಸಿಕೊಂಡು ಹೋಗಬಲ್ಲ ಶಕ್ತಿ ನೀವಾಗಬೇಕು. ಜಾತಿ-ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆದಾಳುವ ನೀತಿ ಸರಿಯಲ್ಲ. ಒಗ್ಗಟ್ಟೆ ನಮ್ಮ ದೇಶದ ಭಲವಾಗಬೇಕು. 

ನಿವೇದಿತಾ ಎಂದರೆ ಸ್ವಾಮಿ ವಿವೇಕಾನಂದರ ಶಿಷ್ಯೆ, ಅಂದರೆ ಭಾರತದಲ್ಲಿ ಜನರನ್ನು ಸೇವೆ ಮಾಡಲು, ಶಿಕ್ಷಣವನ್ನು ಪ್ರೋತ್ಸಾಹಿಸಲು, ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಒಬ್ಬ ಧೀಮಂತ ಮಹಿಳೆ. ಆಕೆಯ ಮೂಲ ಹೆಸರು ಮಾರ್ಗರೆಟ್ ಎಲಿಜಬೆತ್ ನೋಬಲ್ ಆಗಿತ್ತು ಮತ್ತು ಆಕೆ ಐಲೆಂರ್ಡ್ ಮೂಲದವರಾಗಿದ್ದರು. ನಿವೇದಿತಾ ಅವರು ಭಾರತೀಯ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯಿಂದ ಪ್ರಭಾವಿತರಾಗಿ, ಭಾರತೀಯ ಸಮಾಜದ ಉನ್ನತಿಗಾಗಿ, ವಿಶೇಷವಾಗಿ ಮಹಿಳಾ ಜಾಗೃತಿಗೆ ತಮ್ಮನ್ನು ಅರ​‍್ಿಸಿಕೊಂಡರು. ಅವರು ಕಲ್ಕತ್ತಾದಲ್ಲಿ ಹುಡುಗಿಯರಿಗಾಗಿ ಶಾಲೆಯನ್ನು ಸ್ಥಾಪಿಸಿದರು, ಅಲ್ಲಿ ಅವರಿಗೆ ಮೂಲಭೂತ ಶಿಕ್ಷಣವನ್ನು ನೀಡಲಾಗುತ್ತಿತ್ತು. ಅವರು ಉತ್ತಮ ಭಾಷಣಗಾರ್ತಿಯಾಗಿದ್ದರು ಮತ್ತು ಲೇಖನಗಳನ್ನು ಬರೆಯುತ್ತಿದ್ದರು. ರಾಷ್ಟ್ರೀಯತೆಯ ಪ್ರತೀಕವಾಗಿದ್ದ "ಯುಗಾಂತರ" ಮತ್ತು "ವಂದೇಮಾತರಂ" ಮುಂತಾದ ಪತ್ರಿಕೆಗಳಿಗೆ ಸಂಪಾದಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸ್ವಾಮಿ ವಿವೇಕಾನಂದರ ನಂತರ, ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದರು, ಬಂಗಾಳ ವಿಭಜನೆ ವಿರೋಧಿಸುವ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸ್ವಾಮಿ ವಿವೇಕಾನಂದರು ಅವರಿಗೆ "ನಿವೇದಿತಾ" ಎಂಬ ಹೆಸರನ್ನು ನೀಡಿದರು, ಇದರ ಅರ್ಥ "ದೇವರಿಗೆ ಸಮರ​‍್ಿತ" ಎಂದಾಗಿದೆ. ಸೋದರಿ ನಿವೇದಿಯಾ ನಿಮ್ಮೆಲ್ಲರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು. ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿ 70ರ ದಶಕದಲ್ಲಿ ಈ ಶಿಕ್ಷಣ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಾಗ ಇದರ ಶ್ರೇಯೋಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ.ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರ ಪ್ರೇರಣೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರು 1973 ಈ ಸಂಸ್ಥೆಯ ಜವಾಬ್ದಾರಿಯನ್ನ ವಹಿಸಿಕೊಂಡರು. ಅವರ ನೇತೃತ್ವದಲ್ಲಿ ಸಕಲ ಸವಲತ್ತುಗಳೊಂದಿಗೆ ಈ ಸಂಸ್ಥೆಯು ಅಭಿವೃದ್ಧಿಯನ್ನು ಹೊಂದಿ ಪ್ರಗತಿಪಥದಲ್ಲಿ ಮುಂದೆ ಸಾಗುತ್ತಿದೆ. ಸದಾ ಸಮಾಜದ ಹಿತವನ್ನು ಬಯಸುತ್ತಾ ಗ್ರಾಮೀಣ ಪ್ರದೇಶದ ಜನರಿಗೆ ಹಲವು ಅನುಕೂಲಗಳನ್ನು ಮಾಡಿಕೊಟ್ಟು ಅವರು ಸ್ವಾವಲಂಬಿಗಳಾಗಲು ಸಹಾಯ ಮಾಡಿದವರು ಪೂಜ್ಯ ಖಾವಂದರರು. ಇದೇ ಸಂದರ್ಭದಲ್ಲಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರನ್ನು ಜನತಾ ಶಿಕ್ಷಣ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಕು. ಚಿನ್ಮಯಿ ಜಾಹಾಗಿರದಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ರೀಮತಿ. ಸುಜಾತಾ ಕೊಂಬಳಿ ಸ್ವಾಗತಿಸಿದರು. ಶ್ರೀಮತಿ ಭವ್ಯ ವಂದಿಸಿದರು. ವಿವೇಕ ಲಕ್ಷ್ಮೇಶ್ವರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಹಾಂತ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.